ಗುಲ್ಬರ್ಗಾ

ಕೆಜೆಪಿ ಪುರಸಭೆ ಸದಸ್ಯರು ಕಾಂಗ್ರೆಸ್ ಸೇರ್ಪಡೆ

Published On :

ಚಿತ್ತಾಪುರ: ಮಾಜಿ ಎಪಿಎಂಸಿ ಸದಸ್ಯ ರವಿಂದ್ರ ಸಜ್ಜನಶೆಟ್ಟಿ ಇವರ ನೇತೃತ್ವದಲ್ಲಿ ಕೆಜಿಪಿ ಪಕ್ಷದ ಪುರಸಭೆಗೆ ಚುನಾಯಿತರಾದ 5 ಸದಸ್ಯರಲ್ಲಿ 3 ಸದಸ್ಯರಾದ ಸಿದ್ದರಾಮೇಶ್ವರ ಸಜ್ಜನಶೆಟ್ಟಿ, ಮಲ್ಲಿಕಾರ್ಜುನ ಪೂಜಾರಿ, ಜಗದೇವಿ ಪ್ರತಾಪ ಮುಕ್ತೆದಾರ ಸೇರಿದಂತೆ ಕೆಜೆಪಿ ಪಕ್ಷದ ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ಮಹ್ಮದ್ ಜಾಕೀರ ಹುಸೇನಿ, ಜಾವೀದ್ ಸೇಠ ದಿಗ್ಗಾಂವ ಅವರು ಕೆಜಿಪಿ ತೊರೆದು ಸೋಮವಾರ ಸಂಜೆ ಕಾಂಗ್ರೆಸ್ ಸೇರಿದರು.
ವಾರ್ಡ್ ಸಂಖ್ಯೆ 20 ಕೆಜಿಪಿ ಮುಖಂಡ ಮಾಜಿ ಪುರಸಭೆ ಸದಸ್ಯ ಶಿವಶರಣಪ್ಪ ಹಾಬಾಳ ನೇತೃತ್ವದಲ್ಲಿ  ಗುರುಲಿಂಗಪ್ಪ ಅಲ್ಲೂರ, ನಾಗಣ್ಣ ವಡ್ಡಡಿಗಿ, ಶರಣಪ್ಪ ಮಾಸ್ತರ ಅಳ್ಳೋಳ್ಳಿ, ಶಂಬುಲಿಂಗಪ್ಪ, ಆಶೋಕ ಅಳ್ಳೋಳ್ಳಿ,  ಬಸವರಾಜ, ಸಂಗಮೇಶ ಕಾಂತಾ, ಗೌರಿಶಂಕರ ಸಾಲಿಮಠ, ಈರಣ್ಣ ಹಾಬಾಳ, ಗುರಪ್ಪ ಮಡಿಕೆ, ಸಿದ್ದು ಸ್ವಾಮಿ, ಸಿದ್ದು ಅವಂಟಿ, ಗಿರೀಶ ವಡ್ಡಡಗಿ, ಶ್ರೀನಿವಾಸ ಸುನಾರ ಮತ್ತಿತರರು ಕೆಜೆಪಿ ತೊರೆದು ಕಾಂಗ್ರೆಸ್ ಸೇರಿದರು.
ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ ಖರ್ಗೆ ಅವರು ಪಕ್ಷದ ಶಾಲು ಹೊದಿಸಿ ಸ್ವಾಗತಿಸಿದರು. ಭೀಮಣ್ಣ ಸಾಲಿ,  ರಮೇಶ ಮರಗೋಳ, ನಾಗರಡ್ಡಿ ಪಾಟೀಲ್ ಕರದಾಳ, ಡಾ. ಪ್ರಭುರಾಜ ಕಾಂತಾ, ಡಾ. ಮಜರ್ ಹುಸೇನಿ, ಅಣ್ಣರಾಯ ಸಣ್ಣೂರಕರ್, ಚಂದ್ರಶೇಖರ ಕಾಶಿ, ಈರಪ್ಪ ಬೋವಿ, ಬೆಂಜಿಮೋಹನ, ಸುರೇಶ ಅಳ್ಳಳ್ಳಿ, ಸೈಯದ್ ಶೇಠ್, ಮಿನಾಜ್ ಚಿಸ್ತಿ, ರಶೀದ್, ಮುಕ್ತಾರ ಪಟೇಲ್, ಶಿವಕಾಂತ ಬೆಣ್ಣೂರ್ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.