ಅಪಪ್ರಚಾರಕ್ಕೆ ಕಿವಿಗೊಡಬೇಡಿ
ಕ.ಪ್ರ. ವಾರ್ತೆ ಸುರಪುರ ಏ.27
ರಾಜುಗೌಡನ ಜನಬೆಂಬಲ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಸಹಿಸದಿರುವ ನನ್ನ ವಿರೋಧಿಗಳು ಸೋಲಿನ ಭೀತಿಯಿಂದ ಮಾಡುವ ಅಪಪ್ರಚಾರಕ್ಕೆ ಕಾರ್ಯಕರ್ತರು ಮತ್ತು ಮತದಾರರು ಕಿವಿಗೊಡಬಾರದು ಎಂದು ಜೆಡಿಎಸ್ ಅಭ್ಯರ್ಥಿ ರಾಜುಗೌಡ ಹೇಳಿದರು.
ತಾಲೂಕಿನ ವಿವಿಧ ಗ್ರಾಮಗಳಿಗೆ ಶನಿವಾರ ಭೇಟಿ ನೀಡಿ ಮತಯಾಚನೆ ಮಾಡಿ, ಅಧಿಕಾರ ಇದ್ದಾಗ ಕ್ಷೇತ್ರಕ್ಕೆ ಏನನ್ನೂ ಮಾಡದವರು ಈಗ ಅಧಿಕಾರ ಪಡೆಯಲು ಇಲ್ಲಸಲ್ಲದ ಆರೋಪ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಇದಕ್ಕೆ ಮತದಾರರು ಸೊಪ್ಪು ಹಾಕುವುದಿಲ್ಲ ಎಂದರು.
ಅಪಪ್ರಚಾರ ಒಳಿತಲ್ಲ: ನಾನು ಶಾಸಕನಾಗುವ ಮೊದಲು ಅಧಿಕಾರದಲ್ಲಿದ್ದ ನೀವು ತಾಲೂಕಿಗೆ ಏನು ಮಾಡಿದ್ದೀರಿ, ಕ್ಷೇತ್ರದಲ್ಲಿ ಜನರ ಕಣ್ಣಿಗೆ ಕಾಣುವಂತ ಯಾವ ಅಭಿವೃದ್ಧಿ ಕಾಮಗಾರಿ ಮಾಡಿದ್ದೀರಿ ಎನ್ನುವುದು ಜನರಿಗೆ ಬಹಿರಂಗವಾಗಿ ತಿಳಿಸಿ. ಅದು ಬಿಟ್ಟು ಅಧಿಕಾರದ ಆಸೆಗಾಗಿ ಮತದಾರರನ್ನು ಸೆಳೆಯಲು ಅಪಪ್ರಚಾರ ಮಾಡುವುದು ಒಳ್ಳೆಯದಲ್ಲ ಎಂದು ತರಾಟೆಗೆ ತಗೆದುಕೊಂಡರು.
ಪಕ್ಷಕ್ಕಿಂತ ಅಭಿವೃದ್ಧಿ ಮುಖ್ಯ: ನನಗೆ ಪಕ್ಷಕ್ಕಿಂತಲೂ ಅಭಿವೃದ್ಧಿ ಮುಖ್ಯ. ಅಭಿವೃದ್ಧಿ ಕನಸುಳ್ಳವನಿಗೆ ಯಾವ ಪಕ್ಷವಾದರೇನು. ಜನ ಅಭಿವೃದ್ಧಿಯನ್ನು ನೋಡಿ ಬೆಂಬಲಿಸುತ್ತಾರೆಯೇ ವಿನಃ ಪಕ್ಷ ನೋಡಿ ಅಲ್ಲ. ನನ್ನ ಬಗ್ಗೆ ಆರೋಪ ಮಾಡುವ ವಿರೋಧಿಗಳು ಮೊದಲು ತಾವು ಯಾವ ಪಕ್ಷದಲಿದ್ದರು ಎಂಬುದನ್ನು ತಿಳಿಸಲಿ. ನಮ್ಮಲ್ಲಿ ಪಕ್ಷ ನಿಷ್ಠೆ ಇದೆ, ಒಂದೇ ಪಕ್ಷದಲ್ಲಿದ್ದೇವೆ ಎಂದು ಹೇಳುವವರನ್ನು ಜನ ಏಕೆ ಬೆಂಬಲಿಸಲಿಲ್ಲ. ಅಭಿವೃದ್ಧಿ ಮಾಡದವರಿಗೆ ಕ್ಷೇತ್ರದ ಮತದಾರರು ಎಂದೂ ಮಣೆ ಹಾಕುವುದಿಲ್ಲ ಎಂಬ ವಿಶ್ವಾಸ ನನಗಿದೆ. ನನ್ನ ಅಭಿವೃದ್ಧಿ ಕೆಲಸಗಳನ್ನು ನೋಡಿ ಜನ ನನ್ನನ್ನು ಗೆಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ, ಯಲ್ಲಪ್ಪ, ನಿಂಗಣ್ಣ, ರಾಜಾ ಹನುಮಪ್ಪ ನಾಯಕ, ಪರಮಣ್ಣ ಪೂಜಾರಿ, ಚಂದ್ರಶೇಖರ, ಪರಮಣ್ಣ, ಗೆದ್ದೆಪ್ಪ, ರಾಯಪ್ಪ ಜೋಗಿನ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

