ಎಲ್ಲ ಪಕ್ಷಗಳ ಅಭ್ಯರ್ಥಿಗಳಿಂದ ಅಭಿವೃದ್ಧಿ ಮಂತ್ರ
ಆಳಂದ: ಎಲ್ಲ ರಂಗದಲೂ ತೀರಾ ಹಿಂದುಳಿದ ಗಡಿ ಪ್ರದೇಶ ಆಳಂದ ವಿಧಾನಸಭಾ ಮತಕ್ಷೇತ್ರದ ಅಭ್ಯರ್ಥಿಗಳು ಮತ್ತು ಅವರ ಹಿಂಬಾಲಕರೆಲ್ಲರ ಬಾಯಲ್ಲೀಗ ಅಭಿವೃದ್ಧಿಯ ಜಪ ಶುರುವಾಗಿದ್ದು, ಈ ಬಾರಿಯ ಚುನಾವಣೆಯ ವಿಶೇಷ.
ಚುನಾವಣೆಗೆ ವಾರವೇ ಬಾಕಿಯಿರುವ ಹೊತ್ತಿನಲ್ಲಿ ಕಣದಲ್ಲಿರುವ ಕೆಜೆಪಿ, ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಸೇರಿ ಇನ್ನಿತರ 13 ಮಂದಿ ಅಭ್ಯರ್ಥಿಗಳ ಪೈಕಿ 4 ಮಂದಿ ಅಭಿವೃದ್ಧಿ ಮಂತ್ರವನ್ನಿಟ್ಟುಕೊಂಡು ಕ್ಷೇತದ್ರದಲ್ಲಿ ಅಬ್ಬರದ ಪ್ರಚಾರ ನಡೆಸಿದ್ದು ಸ್ವಾಗತಾರ್ಹ ಬೆಳವಣಿಗೆ.
ಮತಬೇಟೆ: ಹಲವು ಭರವಸೆಗಳೊಂದಿಗೆ ಕಣಕ್ಕಿಳಿದಿರುವ ಕೆಜೆಪಿ ರಾಜ್ಯ ವಕ್ತಾರ ಮತ್ತು ಮಾಜಿ ಉಪಸಭಾಪತಿ ಬಿ.ಆರ್. ಪಾಟೀಲ ತಮ್ಮ ಬೆಂಬಲಿಗರೊಂದಿಗೆ ಅಲ್ಲಲ್ಲಿ ಪ್ರಚಾರ ಸಭೆ, ಮನೆ ಮನೆಗೆ ತೆರಳಿ ಗೆಲ್ಲಿಸುವಂತೆ ಮತಬಾಂಧವರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಮತ್ತೊಂದಡೆ ಅಧಿಕಾರವಧಿಯಲ್ಲಿ ಕ್ಷೇತ್ರದಲ್ಲಿ ಕೈಗೊಂಡ ಕೆಲಸಗಳೇ ಗೆಲವಿಗೆ ಶ್ರೀರಕ್ಷೆಯಾಗಿದೆ, ಇನ್ನೊಮ್ಮೆ ಅವಕಾಶ ನೀಡಬೇಕೆಂದು ಪ್ರಚಾರ ಆರಂಭಿಸಿರುವ ಜೆಡಿಎಸ್ ಅಭ್ಯರ್ಥಿ ಸುಭಾಷ್ ಗುತ್ತೇದಾರ ಅವರು ಮತದಾರರ ಮನವೊಲಿಸಲು ಪ್ರಯತ್ನಿಸಿದ್ದಾರೆ.
ಇದೇ ಮೊದಲು ವಿಧಾನಸಭಾ ಚುನಾವಣೆ ಕಣಕ್ಕೆ ಧುಮಕಿರುವ ಕಾಂಗ್ರೆಸ್ ಅಭ್ಯರ್ಥಿ ಸಿದ್ಧಣ್ಣ ಮಾಸ್ಟರ್ ಶೇಗಜಿ ಮತ್ತು ಬಿಜೆಪಿ ಅಭ್ಯರ್ಥಿ ಬಸವರಾಜ ಪವಾಡಶೆಟ್ಟಿ ಅವರು, ಹಿಂದುಳಿದ ಕ್ಷೇತ್ರದ ಅಭಿವೃದ್ಧಿಗೆ ನಾವೇ ಸಮರ್ಥರು ಅವಕಾಶ ಕೊಟ್ಟರೆ ಅಭಿವೃದ್ಧಿ ಖಂಡಿತ ಮಾಡುತ್ತೇವೆಂದು ಮತದಾರರ ಮೇಲೆ ಪ್ರಭಾವ ಹಾಕಲು ಶುರುಮಾಡಿದ್ದರಾರೂ ಅದು ಎಷ್ಟರಮಟ್ಟಿಗೆ ಫಲ ನೀಡುತ್ತದೆ ಎಂಬುದು ಚುನಾವಣೆಯ ಫಲಿತಾಂಶದಿಂದ ಗೊತ್ತಾಗಲಿದೆ.
ವ್ಯಕ್ತಿ ವರ್ಚಸ್ಸೇ ಮೇಲಾಗುವ ಸಾಧ್ಯತೆ: ವಿಪರ್ಯಾಸವೆಂದರೆ ಅಭ್ಯರ್ಥಿಗಳು ತಮ್ಮ ಗೆಲವಿಗೆ ನಿರೀಕ್ಷಿಸಿದ್ದು ಬಹುಕೋನ ಸ್ಪರ್ಧೆ ಆಗಿದ್ದು ನೇರ ಹಣಾಹಣಿ. ಹೀಗಾಗಿ ಕ್ಷೇತ್ರದಲ್ಲಿ ರಾಜಕೀಯ ಪುಢಾರಿಗಳ ಲೆಕ್ಕಾಚಾರವೆಲ್ಲ ಬುಡಮೇಲಾಗಿ ಹೋಗಿದ್ದು, ಅಭಿವೃದ್ಧಿ ಮಂತ್ರ ಪಠಣ ಶುರವಾಗಲು ಕಾರಣ ಎನುತ್ತಾರೆ ರಾಜಕೀಯ ವಿಶ್ಲೇಷಕರು. ಬಿ.ಆರ್. ಗುತ್ತೇದಾರ ಅವರ ವ್ಯಕ್ತಿ ವರ್ಚಸ್ಸಿನ ರಾಜಕೀಯಕ್ಕೆ ಚುನಾವಣೆ ನಾಮಪತ್ರ ಸಲ್ಲಿಸುವ ಮೊದಲು ಹೊಸಮುಖಗಳು ಟಾಂಗ್ ಹೊಡೆಯಬಹುದೆಂಬ ಜನರ ಲೆಕ್ಕಾಚರಕ್ಕೆ ಬದಲಾಗಿ ಈ ಬಾರಿಯೂ ವ್ಯಕ್ತಿ ವರ್ಚಸ್ಸಿಗೆ ಮನ್ನಣೆ ದೊರೆಯುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.
ಜಾಣ ಮತದಾರರು: ಈ ಹಿಂದೆ ಪಕ್ಷಗಳ ಹೆಸರಿನಲ್ಲಿ ಕೆಲವು ಅಭ್ಯರ್ಥಿಗಳು ಮತದಾರರನ್ನೇ ಮೋಸಮಾಡಿದ ಕಾರ್ಯವೈಖರಿ ಗಮನಿಸಿದ ಮತದಾರರು ಈ ಬಾರಿ ಎಚ್ಚೆತ್ತು ಮತ್ತೊಮ್ಮೆ ಮೋಸಕ್ಕೆ ಒಳಗಾಗಬಾರದೆಂಬ ನಿರ್ಧಾರಕ್ಕೆ ಬಂದಂತಿದೆ. ಅಭ್ಯರ್ಥಿಗಳಿಗೆ ಯಾವ ಕಾರಣಕ್ಕೂ ವೋಟ್ ಕೊಡಬಾರದು ಗೆಲವು ಅಭ್ಯರ್ಥಿಗೆ ತೊಂದರೆಯಾದಿತ್ತು ಎನ್ನುವುದು ಹೆಚ್ಚಿನ ಮತದಾರಲ್ಲಿನ ಕಾಳಜಿಯೇ ವ್ಯಕ್ತಿ ವರ್ಚಸ್ಸಿನ ರಾಜಕಾರಣಕ್ಕೆ ಮತ್ತಷ್ಟು ಭದ್ರವಾಗಿ ತಳಪಾಯವಾಗಿ ನಿಲ್ಲುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

