ಗುಲ್ಬರ್ಗಾ

ವಿವಿಧ ಬೇಡಿಕೆ ಈಡೇರಿಕೆಗಾಗಿ ರಸ್ತೆತಡೆ

Published On :

ಚಿಂಚೋಳಿ: ತಾಲೂಕಿನ ಹಲಚೇರಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ 6 ಗ್ರಾಮಗಳ ಜನರಿಗೆ ಆಹಾರ ಪಡಿತರ ಚೀಟಿ ಮತ್ತು ಇನ್ನೀತರ ಬೇಡಿಕೆಗಳ ಈಡೇರಿಕೆಗಾಗಿ ತಾಲೂಕು ಪ್ರಾಂತ ರೈತಸಂಘ ಮತ್ತು ಸಿಪಿಐ(ಎಂ) ಕಾರ್ಯಕರ್ತರು ಚಿಂಚೋಳಿ- ಗುಲ್ಬರ್ಗ ರಾಜ್ಯಹೆದ್ದಾರಿ ರಸ್ತೆಯಲ್ಲಿ ಬರುವ ಹೊಸಳ್ಳಿ ಕ್ರಾಸ್ ಹತ್ತಿರ ರಸ್ತೆತಡೆ ನಡೆಸಿದರು.
ಹಲಚೇರಾ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಜನರು ತಮ್ಮ ಆಹಾರ ಪಡಿತರ ಚೀಟಿಗಾಗಿ ಮತ್ತು ನವೀಕರಣಗೊಳಿಸಿದ್ದಾರೆ. ಆದರೆ, ನ್ಯಾಯಬೆಲೆ ಅಂಗಡಿಯಲ್ಲಿ ಆಹಾರ ಧಾನ್ಯ ಸಿಗುತ್ತಿಲ್ಲವೆಂದು ಆಹಾರ ಶಿರಸ್ತೆದಾರರಿಗೆ ತಿಳಿಸಿದರೆ ನಿಮ್ಮ ಕಾರ್ಡು ರದ್ದುಗೊಂಡಿದೆ ಎಂದು ಹೇಳಿ ಬಡವರಿಗೆ ಸಿಗುವ ಆಹಾರ ಧಾನ್ಯವನ್ನು ಕಡಿತಗೊಳಿಸಿದ್ದಾರೆಂದು ಮುಖಂಡರು ಆರೋಪಿಸಿದರು.
ಚಿಂಚೋಳಿ ಆಹಾರ ಇಲಾಖೆಯಲ್ಲಿರುವ ಕೆಲವು ಸಿಬ್ಬಂದಿ ಕಾರ್ಡು ವಿತರಣೆಗಾಗಿ 500 ರಿಂದ 600 ವಸೂಲಿ ಮಾಡುತ್ತಿದ್ದಾರೆ. ಕೂಡಲೇ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕು, ಸುತ್ತಲಿನ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬಸ್ಸಿನ ಸೌಲಭ್ಯ ಕಲ್ಪಿಸಬೇಕೆಂದು ತಾಲೂಕು ಕಾರ್ಯದರ್ಶಿ ಶರಣಬಸಪ್ಪ ಮಮಶೆಟ್ಟಿ ಒತ್ತಾಯಿಸಿದರು.
ಹಲಚೇರಾ ಗ್ರಾಮದ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಹಲಚೇರಾ ಗ್ರಾಮ ಘಟಕ ಅಧ್ಯಕ್ಷ ಸಿದ್ದಪ್ಪ ತಳವಾರ ತಹಸೀಲ್ದಾರ್ ಮೋಹನ ಜೋಶಿ ಅವರಿಗೆ ಸಲ್ಲಿಸಿದರು. ಮುಖಂಡರಾದ ಪರಮೇಶ್ವರ, ಬಸವರಾಜ, ನಿಜಾಮಪಟೇಲ್, ಸಂತೋಷಕುಮಾರ್, ಶಂಕರೆಪ್ಪ ಹೂಗಾರ ಇತರರು ನೇತೃತ್ವ ವಹಿಸಿದ್ದರು.
ಸುಲೇಪೇಟ್ ಸಿಪಿಐ ಎಂ. ವರದರಾಜು, ರಟಕಲ್ ಪಿಎಸ್‌ಐ ಅಕ್ಕಮಹಾದೇವಿ, ಸುಲೇಪೇಟ್ ಪಿಎಸ್‌ಐ ಸೋಮಶೇಖರ ಕೆಂಚರೆಡ್ಡಿ ಮತ್ತು ಆಹಾರ ಶಿರಸ್ತೆದಾರ ಲಿಂಬಾಜಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.