ಗುಲ್ಬರ್ಗಾ

3 ತಿಂಗಳಲ್ಲೇ ಹೊರಬಿತ್ತು ಕಳಪೆ ಕಾಮಗಾರಿ ಹುಳುಕು

Published On :

ಕನ್ನಡಪ್ರಭ ವಾರ್ತೆ, ಚಿಂಚೋಳಿ, ಆ.5
ತಾಲೂಕಿನ ರಾಯಚೂರ ವನಮಾರಪಳ್ಳಿ 15ನೇ ರಾಜ್ಯ ಹೆದ್ದಾರಿಯಲ್ಲಿ ಬರುವ ಚಿಂಚೋಳಿ ಪಟ್ಟಣದ ಡಾ. ಅಂಬೇಡ್ಕರ್ ವೃತ್ತದಿಂದ ದೇಗಲಮಡಿ ಕ್ರಾಸಿನವರೆಗೆ ಸುವರ್ಣ ಯೋಜನೆ ಮತ್ತು ನಬಾರ್ಡ್ ಯೋಜನೆ ಅಡಿಯಲ್ಲಿ ಕೈಕೊಂಡಿರುವ ರಸ್ತೆ ಅಭಿವೃದ್ಧಿ ಮತ್ತು ಡಾಂಬರೀಕರಣ ಕಾಮಗಾರಿ ಸಂಪೂರ್ಣವಾಗಿ ಕಳಪೆಮಟ್ಟದಿಂದ ನಡೆಸಲಾಗಿದ್ದು, ಕಳೆದ 3 ತಿಂಗಳಿನಲ್ಲಿಯೇ ರಸ್ತೆ ಹಾಳಾಗಿದ್ದು, ಸಂಚಾರಕ್ಕೆ ತೊಂದರೆ ಪಡಬೇಕಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ತಾಲೂಕಿನ ಐನೋಳಿ, ದೇಗಲಮಡಿ, ಕೊಳ್ಳೂರ, ಫತ್ತೇಪುರ, ನಾಗಾಇದಲಾಯಿ, ತುಮಕುಂಟಾ, ಪಟಪಳ್ಳಿ, ಎಂಪಳ್ಳಿ ಮುಂತಾದ ಗ್ರಾಮಸ್ಥರಿಗೆ ರಸ್ತೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಕಳೆದ 2010-11ನೇ ಸಾಲಿನಲ್ಲಿ 7 ಕಿ.ಮೀ. ರಸ್ತೆ ಅಭಿವೃದ್ಧಿ ಮತ್ತು ಡಾಂಬರೀಕರಣಕ್ಕಾಗಿ ಸುವರ್ಣ ಯೋಜನೆ ಮತ್ತು ನಬಾರ್ಡ್ ಯೋಜನೆ ಅಡಿಯಲ್ಲಿ 2.14 ಕೋಟಿ ಮಂಜೂರಿಗೊಳಿಸಿತ್ತು.
ಗುತ್ತಿಗೆ ಪಡೆದ ಪ್ರಭಾವಿ ಗುತ್ತಿಗೆದಾರನ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯತನದಿಂದಾಗಿ ಕಾಮಗಾರಿ ತುಂಬಾ ನೆನೆಗುದಿಗೆ ಬಿದ್ದಿತ್ತು. ನಂತರ ರಾಜಕಾರಣಿಗಳ ಒತ್ತಡದಿಂದಾಗಿ ಕಳೆದ ಮೇ ತಿಂಗಳಲ್ಲಿ ರಸ್ತೆ ಅಭಿವೃದ್ಧಿ ಮತ್ತು ಡಾಂಬರೀಕರಣ ನಡೆಸಲಾಯಿತು.
ಆದರೆ, ಜುಲೈ ಮೊದಲ ವಾರದಲ್ಲಿಯೇ ರಸ್ತೆ ಇದೀಗ ಕೆಸರಿನ ಕೊಚ್ಚೆಯಾಗಿದ್ದು, ದಿನಾಲು ಈ ರಸ್ತೆ ಮುಖಾಂತರ ರಾಷ್ಟ್ರೀಯ ಹೆದ್ದಾರಿ-9, ಪುಣೆ, ಜಹೀರಾಬಾದ್, ಮಹಬೂಬ್ ನಗರ, ಸಂಗಾರಡ್ಡಿ, ಬೀದರ್, ಹುಮನಾಬಾದ್, ಹೈದ್ರಾಬಾದ್, ಮುಂಬಯಿ ನಗರ ಪ್ರದೇಶಗಳಿಗೆ ಹೋಗುವ ವಾಹನಗಳು ಕೆಸರಿನಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿವೆ. ಇದರಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ನೂತನ ಶಾಸಕ ಡಾ. ಉಮೇಶ ಜಾಧವ ಈ ರಸ್ತೆ ಕಡೆಗೆ ಹೆಚ್ಚಿನ ಗಮನ ಹರಿಸಿ ರಸ್ತೆ ಸುಧಾರಣೆಗೆ ಕ್ರಮ ಕೈಕೊಳ್ಳಬೇಕೆಂಬುವುದು ಸುತ್ತಲಿನ ಗ್ರಾಮಸ್ಥರು ಆಗ್ರಹಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.