ಗುಲ್ಬರ್ಗಾ

ಲೋಕ ಕಲ್ಯಾಣಕ್ಕಾಗಿ ಅಬ್ಬೆ ಶ್ರೀಗಳ ಪಾದಯಾತ್ರೆ

Published On :

ಕನ್ನಡಪ್ರಭ ವಾರ್ತೆ, ಜೇವರ್ಗಿ, ಆ.5
ಯಾದಗಿರಿ ಜಿಲ್ಲೆಯ ಅಬ್ಬೆತುಮಕೂರು ವಿಶ್ವಾರಾಧ್ಯ ಸಿದ್ಧ ಸಂಸ್ಥಾನ ಮಠದ ಡಾ. ಗಂಗಾಧರ ಸ್ವಾಮೀಜಿ ಅವರು ಪವಾಡ ಪರುಷ ಸದ್ಗುರು ವಿಶ್ವಾರಾಧ್ಯರ ಜನ್ಮಸ್ಥಳ ಜೇವರ್ಗಿ ತಾಲೂಕಿನ ಗಂವ್ಹಾರದಿಂದ ಸಾವಿರಾರು ಭಕ್ತ ಸಮೂಹದೊಂದಿಗೆ ಪಾದಯಾತ್ರೆ ಆರಂಭಿಸಿದರು.
ಬೆಳಗ್ಗೆ 9 ಗಂಟೆಗೆ ಗ್ರಾಮದ ಹೊರವಲಯದ ಬನ್ನಿ ಬಸವೇಶ್ವರ ಕರ್ತೃ ಗದ್ದುಗೆಗೆ ಗಂಗಾಧರ ಸ್ವಾಮೀಜಿ ಅವರು ವಿಶೇಷ ಪೂಜೆ ಸಲ್ಲಿಸಿದರು. ನಂತರ ಶ್ರೀಗಳು ಗ್ರಾಮದ ಆರಾಧ್ಯ ದೈವ ಅಮೃತೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಭಕ್ತಾದಿಗಳಿಗೆ ಶ್ರೀಮಠದಲ್ಲಿ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಭಾನುವಾರ ಪಾದಯಾತ್ರೆ ಗಂವ್ಹಾರದಿಂದ ಹೊರಟು ಶಹಾಪುರ ತಾಲೂಕಿನ ಅಣಬಿ, ಶಿರವಾಳ ಮಾರ್ಗವಾಗಿ ಸನ್ನತಿಯಲ್ಲಿ ವಾಸ್ತವ್ಯ ಮಾಡಿದರು.
ಶಾಸಕ ಡಾ. ಅಜಯಸಿಂಗ್, ಜಿಪಂ ಸದಸ್ಯ ಗುರುಲಿಂಗಪ್ಪಗೌಡ ಮಾಲಿಪಾಟೀಲ್, ರಾಮಶೆಟ್ಟಿ ಹುಗ್ಗಿ, ಎಸ್.ಎನ್. ಮಿಂಚಿನಾಳ, ಕಲ್ಯಾಣಕುಮಾರ್, ಗಂವ್ಹಾರ ವಿಜಯಕುಮಾರ ಪೊಲೀಸ್ ಪಾಟೀಲ್, ರಾಜಶೇಖರ ಸೀರಿ, ಕಾಸಿಂ ಪಟೇಲ್, ಕಾಶಿರಾಯಗೌಡ ಯಲಗೋಡ, ರುದ್ರಮುನಿ ಸ್ಥಾವರಮಠ, ನಿಂಗಣ್ಣಗೌಡ ನಂದೂರ, ರುದ್ರಪ್ಪ ಚಟ್ನಳ್ಳಿ, ಸಂಗಣ್ಣ ಹೆಗ್ನಾಳ, ಬಸಲಿಂಗಯ್ಯ ಮಸೂತಿ, ಬಸನಗೌಡ ಬಿರಾದಾರ ಸೇರಿದಂತೆ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.

ನೆರೆ ರಾಜ್ಯಗಳ ಭಕ್ತರೂ ಸಾಥ್
ಚಿತ್ತಾಪುರ: ಲೋಕ ಕಲ್ಯಾಣವಾದಾಗ ಮಾತ್ರ ಭಕ್ತರು ನೆಮ್ಮದಿಯ ಜೀವನ ನಡೆಸುತ್ತಾರೆಂದು ಅಬ್ಬೆತುಮಕೂರ ವಿಶ್ವರಾಧ್ಯ ಸಿದ್ಧ ಸಂಸ್ಥಾನ ಮಠದ ಡಾ. ಗಂಗಾಧರ ಸ್ವಾಮೀಜಿ ನುಡಿದರು.
  ಗಂವಾರದಿಂದ ಸಹಸ್ರಾರು ಭಕ್ತರೊಂದಿಗೆ ಅಬ್ಬೆತುಮಕೂರಿಗೆ ಪಾದಯಾತ್ರೆ ಹೊರಟಿದ್ದ ಶ್ರೀಗಳು ಭಾನುವಾರ ರಾತ್ರಿ ಚಿತ್ತಾಪುರ ತಾಲೂಕಿನ ಸನ್ನತಿ ಗ್ರಾಮಕ್ಕೆ ಆಗಮಿಸಿ ವ್ಯಾಸ್ತವ್ಯ ಮಾಡಿದರು. ಸೋಮವಾರ ಮಧ್ಯಾಹ್ನ ಹುಳಂಡಗೇರಾ ತಾಂಡಾಕ್ಕೆ ಆಗಮಿಸಿದ ಪಾದಯಾತ್ರೆಯಲ್ಲಿ ಆಶೀರ್ವಚನ ನೀಡಿ, ಲೋಕ ಕಲ್ಯಾಣಕ್ಕಾಗಿ ಹಾಗೂ ಭಕ್ತರ ಸಮೃದ್ಧಿಗಾಗಿ ಪಾದಯಾತ್ರೆ ಕೈಗೊಳ್ಳಲಾಗುತ್ತಿದೆ. ಉತ್ತಮ ಬದುಕಿಗಾಗಿ ದೇವರನ್ನು ದ್ಯಾನ ಮಾಡಬೇಕೆಂದರು.
ಸನ್ನತಿಯಲ್ಲಿ ವಿಶೇಷ ಪೂಜೆ: ಬೆಳಗ್ಗೆ ಸನ್ನತಿಯ ಸೋಮೇಶ್ವರ ದೇವಾಲಯದಲ್ಲಿ ಶ್ರೀಗಳು ವಿಶೇಷ ಪೂಜೆ ಸಲ್ಲಿಸಿದರು. ಮಧ್ಯಾಹ್ನ ಚಂದ್ರಲಾ ಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಕುಂಕುಮಾರ್ಚನೆ ನಡೆಯಿತು. ಕನಗನಳ್ಳಿ, ಹುಳಂಡಗೇರಾದಿಂದ ಹೆಡಗಿಮದ್ರಿಗೆ ಸೋಮವಾರ ದೇವಸ್ಥಾನದಲ್ಲಿ ವಾಸ್ತವ್ಯ ಮಾಡಿದ್ದು, ಸಂಜೆ ಅಬ್ಬೆತುಮಕೂರಿನ ವಿಶ್ವರಾಧ್ಯ ಮಠಕ್ಕೆ ಪಾದಯಾತ್ರೆ ತಲುಪಿತು.
  ದಾರಿಯುದ್ದಕ್ಕೂ ಭಕ್ತಾದಿಗಳು ಪಾದಯಾತ್ರಿಗಳಿಗೆ ಪ್ರಸಾದ ವ್ಯವಸ್ಥೆ ಕೈಗೊಂಡಿದ್ದರು. ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಬಂದ ಭಕ್ತರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.