ಅಹಿತಕರ ಘಟನೆಗೆ ಅವಕಾಶ ಕೊಡಬೇಡಿ: ಡಿವೈಎಸ್ಪಿ ಕಟ್ಟಿಮನಿ
ಕನ್ನಡಪ್ರಭ ವಾರ್ತೆ, ಕೆಂಭಾವಿ. ಆ.6
ಎಲ್ಲ ಧರ್ಮಗಳ ಜನರು ಶಾಂತಿ ಸೌಹಾರ್ದತೆ ಕಾಪಾಡಬೇಕು. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಬೇಕೆಂದು ಡಿವೈಎಸ್ಪಿ ಎಸ್.ಡಿ. ಕಟ್ಟಿಮನಿ ಮನವಿ ಮಾಡಿದರು.
ರಂಜಾನ್ ಹಬ್ಬದ ನಿಮಿತ್ತ ಇಲ್ಲಿಯ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ವರ್ಷ ಗಣೇಶ ಹಬ್ಬದ ವಿಸರ್ಜನೆ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಶಾಂತತೆಗೆ ಭಂಗ ತಂದಿದ್ದರು. ಆದ್ದರಿಂದ ಗ್ರಾಮದ ಎಲ್ಲ ಸಮುದಾಯದ ಬಾಂಧವರು ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಶಾಂತಿಯಿಂದ ಆಚರಿಸಲು ಕರೆ: ತಹಸೀಲ್ದಾರ್ ಮಹಮ್ಮದ್ ಗೌಸುದ್ದೀನ್ ಮಾತನಾಡಿ, ಶಾಂತಿ ಸೌಹಾರ್ದತೆಯ ಸಂಕೇತವಾದ ರಂಜಾನ್ ಹಬ್ಬವನ್ನು ಶಾಂತಿಯಿಂದ ಅಚರಿಸಿರಿ ಎಂದು ಹೇಳಿದರು. ಗ್ರಾಪಂ ಸದಸ್ಯ ತಾಹೇರ ಪಾಷಾ ಖಾಜಿ ಮಾತನಾಡಿ, ಕಳೆದ ಬಾರಿ ಗಣೇಶ ಹಬ್ಬದಲ್ಲಿ ನಡೆದ ಘಟನೆ ಗ್ರಾಮಕ್ಕೆ ಒಂದು ಕಪ್ಪುಚುಕ್ಕೆಯಂತಾಗಿದ್ದು ಮುಂದೆ ಇಂತಹ ಘಟನೆ ಜರುಗದಂತೆ ಗ್ರಾಮದ ಎಲ್ಲ ಸಮಾಜದ ಹಿರಿಯರು ನೋಡಿಕೊಳ್ಳುತ್ತೇವೆ ಎಂದರು.
ಸಿಪಿಐ ಸತ್ಯನಾರಾಯಣರಾವ್, ಪಿಎಸ್‌ಐ ವೀರಣ್ಣ ಹಳ್ಳಿ, ಕಂದಾಯ ನಿರೀಕ್ಷಕ ರವೀಂದ್ರ ದೇಗಲಮಡು, ತಾಪಂ ಸದಸ್ಯ ಖಾಜಾಪಟೇಲ್ ಕಾಚೂರ, ಡಿಗ್ಗಾವಿ, ಶಿವಲಿಂಗಪ್ಪಗೌಡ ಪೊಲೀಸ್ ಪಾಟೀಲ, ಶರಣಬಸು ಡಿಗ್ಗಾವಿ, ಅನೀಲರಾಜ ತುಂಬಗಿ, ರಹಿಮಾನ ಪಟೇಲ ಯಲಗೋಡ, ಮಶಾಕಸಾಬ ಸಾಸನೂರ, ತಿಪ್ಪಣ್ಣ ಯಾಳಗಿ, ಸೋಮಲಿಂಗಪ್ಪ, ಶಿವಶಂಕರ ಖಾನಾಪುರ, ಪ್ರಕಾಶ ಸೊನ್ನದ, ರಂಗಪ್ಪ ವಡ್ಡರ, ಸಾಹೇಬಲಾಲ್ ಆಂದೇಲಿ, ಸುಭಾಷ್ ಮ್ಯಾಗೇರಿ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

