ಕುರಿಗಾರನ ಮೇಲೆ ಕಾಡುಹಂದಿ ದಾಳಿ, ತೀವ್ರ ಗಾಯ
ಶಹಾಪುರ: ತಾಲೂಕಿನ ಬಾಂತಾಳ ಗ್ರಾಮದ ರಾಮಯ್ಯ ತಂದಿ ಅಂಬ್ಲಯ್ಯ ಕುರಿ ಕಾಯಲು ಹೊದ ಸಂದರ್ಭದಲ್ಲಿ ಕಾಡು ಹಂದಿಯೊಂದು ಮೆಲೆರಗಿ ವಿಪರೀತವಾಗಿ ಗಾಯಗೊಳಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕಲ್ಬುರ್ಗಿ ಜಿಲ್ಲಾಸ್ಪತ್ರೆಗೆ ಕಳುಹಿಸಿದ ಘಟನೆ ನಡೆದಿದೆ.
ಬಾಂತಾಳ ನಾಗನಟಿಗಿ ಮಧ್ಯ ಬೆಟ್ಟಗುಡ್ಡದಲ್ಲಿ ಎಂದಿನಂತೆ ಕುರಿ ಕಾಯಲು ಹೋದ ರಾಮಯ್ಯನ ಮೇಲೆ ಬುಧವಾರ ಮ.3ರ ಸುಮಾರಿಗೆ ಮುಳ್ಳಿನ ಪೊದೆಯಿಂದ ಬಂದ ಕಾಡು ಹಂದಿ ಕೈ ಕಾಲು ಎದೆಗೆ ಇನ್ನಿತರ ದೇಹದ ಭಾಗಗಳಿಗೆ ವಿಪರೀತವಾಗಿ ಕಚ್ಚಿದ್ದು, ಅದೃಷ್ಟವಶಾತ್ ಆತ ಧೈರ್ಯಮಾಡಿ ತಪ್ಪಿಸಿಕೊಂಡಿದ್ದಾನೆ.
ತಾಲೂಕಾಡಳಿತ ನಿರ್ಲಕ್ಷ್ಯ: ಬಾಂತಾಳ ನಾಗನಟಿಗಿ ಸರಹದ್ದಿನಲ್ಲಿ ಮೊದಲಿನಿಂದಲೂ ವರ್ಷದಲ್ಲಿ ಕಾಡು ಹಂದಿ ಕಡೆದ ಎರಡು ಮೂರು ಪ್ರಕರಣಗಳು ನಡೆಯುತ್ತಿದ್ದರು, ತಾಲೂಕಾಡಳಿತವಾಗಲಿ ಸಂಬಂಧಿಸಿದ ಗ್ರಾಮ ಪಂಚಾಯಿತಿಗಳಾಗಲಿ ಈ ಕುರಿತು ಕಾಳಜಿ ವಹಿಸದೇ ರೈತರ ದುಡಿಯುವ ವರ್ಗದ ಜನರ ಜೀವದ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ತೋರಿದ್ದಾರೆ. ಬಿಡು ಬಿಟ್ಟಿರುವ ಕಾಡು ಹಂದಿಗಳ ಬಗ್ಗೆ ಇನ್ನಾದರೂ ಅರಣ್ಯ ಇಲಾಖೆಗೆ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂಬುದು ಸಾರ್ಳಜನಿಕರ ಆಗ್ರಹ. ಸ್ಥಳೀಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಗಾಗಿ ಹೆಚ್ಚಿನ ಸೌಲಭ್ಯವನ್ನು ಕಲ್ಪಿಸಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

