ಗುಲ್ಬರ್ಗಾ

ಕವನ ಸಂಕಲನದ ಗೆಲುವಿಗೆ ಕವಿತ್ವದ ಅಂಶ ಬೇಕು

Published On :

 ಸಾಹಿತಿಗಳು  ನೂರಾರು ಕವಿತೆಗಳನ್ನು ರಚಿಸಿದರು, ರಚಿಸಿದ ಕವಿತೆಗಳಲ್ಲಿನ ಯಾವುದಾದರೂ ಎರಡು ಸಾಲು ಸಾಹಿತ್ಯಾಸಕ್ತರು ನೆನಪಿಸಿಕೊಳ್ಳುವಂತಿದ್ದಲ್ಲಿ ಆ ಕವಿತೆಯಿಂದ ಕವನ ಸಂಕಲನ ಗೆಲ್ಲುವುದಲ್ಲದೆ. ಕವಿ ಕೂಡ ಸಾಹಿತ್ಯಾಸಕ್ತರ ಮನದಲ್ಲುಳಿಯುತ್ತಾನೆ ಎಂದು ಕನ್ನಡ ಸಾಹಿತ್ಯ ಪರಿಷತ್ ಗುಲ್ಬರ್ಗದ ಜಿಲ್ಲಾಧ್ಯಕ್ಷ ಮಹೀಪಾಲರೆಡ್ಡಿ ಮುನ್ನೂರು  ಅಭಿಪ್ರಾಯ ವ್ಯಕ್ತಪಡಿಸಿದರು. ಇಲ್ಲಿನ ವಿದ್ಯಾಮಂಗಲ ಕಾರ್ಯಲಯದಲ್ಲಿ ಯುವ ಕವಿ ಸಿದ್ದಪ್ಪ ಮುಷ್ಟೂರು ರಚಿಸಿದ ಹೆತ್ತವರ ಋಣ ಮರಿಬೇಡ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕವಿ ಸಿದ್ದಪ್ಪ ಮುಷ್ಟೂರು, ಸಾಹಿತ್ಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಅವರು ಸಾಹಿತ್ಯ ಕ್ಷೇತ್ರದಲ್ಲಿ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ಕ್ಷೀರಭಾಗ್ಯಕ್ಕೆ ಚಾಲನೆ
ಶಹಾಪುರ: ಅಪೌಷ್ಟಿಕತೆಯ ಕೊರತೆಯಿಂದಾಗಿ ಮಕ್ಕಳ ಬುದ್ಧಿಮಟ್ಟ ಕುಂಠಿತವಾಗಿರುತ್ತದೆ. ಅವುಗಳನ್ನು ಹೋಗಲಾಡಿಸಲು ಸರ್ಕಾರವು ಕ್ಷೀರಭಾಗ್ಯ ಯೋಜನೆ ಜಾರಿಗೆ ತಂದಿದ್ದು, ಮಕ್ಕಳ ಪಾಲಿಗೆ ಭಾಗ್ಯವೇ ಸರಿ. ಹಾಲನ್ನು ಕುಡಿದು ಜಾಣರಾಗಿ ಉತ್ತಮ ಪ್ರಜೆಗಳಾಗಿ ಎಂದು ಶಹಪುರ ಶಾಸಕ ಗುರುಪಾಟೀಲ ಶಿರವಾಳ ಕರೆ ನೀಡಿದರು.
ಶಿರವಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಆಯೋಜಿಸಲಾಗಿದ್ದ ಕ್ಷೀರಭಾಗ್ಯ ಯೋಜನೆಗೆ ಚಾಲನೆ ನೀಡುತ್ತಾ ಮಾತನಾಡಿದರು. ಪ್ರಾಸ್ತಾವಿಕ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ರಾಯಪ್ಪ ರಡ್ಡಿಯವರು, ಹಾಲನ್ನು ಕುಡಿದು ಅದರ ಋಣವನ್ನು ತೀರಿಸುವಲ್ಲಿ ಮಕ್ಕಳು ದಿನಾಲು ಶಾಲೆಗೆ ಬಂದು ಬುದ್ಧಿಮಟ್ಟವನ್ನು ಹೆಚ್ಚಿಸಿಕೊಳ್ಳಬೇಕೆಂದರು.
ಸಿದ್ದಣ್ಣ ಮಾನಸೂಣಗಿ, ರೇವಣಸಿದ್ದಪ್ಪ, ಭೀಮಣ್ಣ ಪಾಟೀಲ ಗುರಯ್ಯ ಹೀರೆಮಠ, ನಾಗಪ್ಪ ಶಿರನೆತ್ತಿ, ಸಾಯಬಣ್ಣ ಸಗರ, ಊರಿನ ಹಿರಿಯ ನಾಗರಿಕರು ಭಾಗವಹಿಸಿದ್ದರು.
'ರಂಗಪ್ಪ ನಾಯಕರಿಗೆ ಕಾಂಗ್ರೆಸ್ ಟಿಕೆಟ್‌ನೀಡಿ'
ಹುಣಸಗಿ: ಬರುವ ಲೋಕಸಭಾ ಚುನಾವಣೆಯಲ್ಲಿ ರಾಯಚೂರ ಮತಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ರಾಜಾ ರಂಗಪ್ಪನಾಯಕರನ್ನು ಕಣಕ್ಕಿಳಿಸುವಂತೆ ಪಕ್ಷದ ವರಿಷ್ಠರಿಗೆ ಒತ್ತಾಯಿಸಿದ್ದಾಗಿ, ಹುಣಸಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಶೇಖರಗೌಡ ಪಾಟೀಲ್ ವಜ್ಜಲ್ ತಿಳಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಎರಡು ದಿನಗಳ ಹಿಂದೆ ರಾಯಚೂರ ನಗರಕ್ಕೆ ಆಗಮಿಸಿದ್ದ ಕಾಂಗ್ರೆಸ್ ಪಕ್ಷದ ವೀಕ್ಷಕರಾದ, ಅಲೆಕ್ಸಾಂಡರ್ ಅವರನ್ನು ಖುದ್ದಾಗಿ ಭೇಟಿಮಾಡಿ ಈ ಬಗ್ಗೆ ವಿವರಿಸುತ್ತಾ, ಅನೇಕ ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿರುವ ಇವರು, ಹಿಂದೆ ರಾಯಚೂರ ಮತಕ್ಷೇತ್ರದಿಂದ ಸಂಸದರಾಗಿಯೂ ಕಾರ್ಯ ನಿರ್ವಹಿಸಿದ್ದಾರೆಂದು ಹೇಳಿದರು.
 ಇವರಿಗೆ ಕಾಂಗ್ರೆಸ್ ಪಕ್ಷದ ಟಿಕೇಟ್ ನೀಡಿದ್ದಲ್ಲಿ ಗೆಲವು ಖಚಿತ ಎಂದು ಮನವರಿಕೆ ಮಾಡಿ ಕೊಟ್ಟಿದ್ದಾಗಿ ತಿಳಿಸಿದರು.
ಕೃಷ್ಣೆಗೆ ಬಾಗಿನ ಇಂದು
ಹುಣಸಗಿ: ಸಮೀಪದ ದ್ಯಾಮನಹಾಳ ಗ್ರಾಮದಲ್ಲಿ ಹುಣಸಗಿ ವಿತರಣಾ ಕಾಲುವೆಗೆ ಗ್ರಾಮಸ್ಥರಿಂದ ಕೃಷ್ಣೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಇಂದು ಬೆಳಿಗ್ಗೆ 9ಕ್ಕೆ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ನಾರಾಯಣಪುರ ಪಿಎಸ್‌ಐ ಶೈಲಜಾ ಪ್ಯಾಟಿಶೆಟ್ಟರ್, ಗ್ರಾಮದ ಮಹಿಳೆಯರು ಸೇರಿದಂತೆ ಇತರರು ಭಾಗವಹಿಸಲಿದ್ದಾರೆಂದು ಗ್ರಾಮಸ್ಥರು ತಿಳಿಸಿದ್ದಾರೆ. ಸದಾ ರೈತರನ್ನು ಪೋಷಿಸುವ ಕೃಷ್ಣೆ ಒಡಲು ತುಂಬಿ ಹರಿದಿದ್ದು, ಗ್ರಾಮಸ್ಥರಿಗೆ ಸಂತಸ ತಂದಿದೆ. ಸುಮಾರು 25 ರಿಂದ 30 ಹಳ್ಳಿಗಳಿಗೆ ಈ ಕಾಲುವೆಯ ಮುಖಾಂತರವೇ ನೀರು ತಲುಪುತ್ತವೆ. ಕಾಲುವೆಯ ನೀರು ಪೋಲಾಗಬಾರದೆಂಬ ಸಂದೇಶ ಹಾಗೂ ವರ್ಷಪೂರ್ತಿ ರೈತರಿಗೆ ನೀರು ಸದಾ ದೊರೆಯುವಂತಿರುವ ಕೃಷ್ಣೆ ಎಂಬ ಸಂದೇಶದೊಂದಿಗೆ ಬಾಗಿನ ಕಾರ್ಯಕ್ರಮ ನಡೆಸುವುದಾಗಿ ಗ್ರಾಮದ ಹಿರಿಯರೊಬ್ಬರು ತಿಳಿಸಿದರು.
ಧರ್ಮದ ರಕ್ಷಣೆ ಮಾಡಿ: ಜೋಷಿ
ಕೆಂಭಾವಿ: ಧಾರ್ಮಿಕ ವಿಷಯಗಳನ್ನು ಪ್ರತಿಯೊಬ್ಬ ಮನುಷ್ಯ ಕೇಳಿ ಆನಂದಿಸಬೇಕು ಮತ್ತು ಪ್ರತಿಯೊಬ್ಬರು ತಮ್ಮ ಧರ್ಮಗಳನ್ನು ರಕ್ಷಣೆ ಮಾಡಿ ಸನ್ಮಾರ್ಗದಲ್ಲಿ ಸಾಗಬೇಕು ಎಂದು ಸರ್ವೋತ್ತಮಚಾರ್ಯ ಜೋಷಿ ಹೇಳಿದರು. ಪಟ್ಟಣದ ಬಜಾರ ಬಲಭೀಮಸೇನ (ಹನುಮಾನ) ದೇವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ನಡೆದ ಶ್ರಾವಣ ವ್ರತಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಶ್ರವಣ ಎಂದರೆ ಕೇಳುವುದು ಈ ಮಾಸದಲ್ಲಿ ಪ್ರತಿಯೊಬ್ಬ ಭಕ್ತರು ಒಳ್ಳೆಯ ಧಾರ್ಮಿಕ ವಿಚಾರಗಳನ್ನು ಆಲಿಸುವ ಮೂಲಕ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಸುಮಾರು 80 ಜನ ಭಕ್ತರು ಶ್ವೇತ ವಸ್ತ್ರಧಾರಿಗಳಾಗಿ ತಿಂಗಳ ಪರ್ಯಂತ ವ್ರತಾಚರಣೆಯ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ರಾಘವೇಂದ್ರಾಚಾರ್ಯ ಜೋಷಿ, ಪ್ರಮೋದ ತಿಳಗೂಳ, ನಂದಪ್ಪ ಕವಾಲ್ದಾರ, ಹಳ್ಳೆಪ್ಪ ಕವಾಲ್ದಾರ, ದೇವೇಂದ್ರ ಜಾಲಿಬಂಚಿ, ಶಿವು ಮಲ್ಲಿಬಾವಿ, ಬಸವರಾಜ ಮಲ್ಲಿಬಾವಿ, ಶಿವು ಯಾಳಗಿ, ಮಡಿವಾಳ ಕಲಿಕೇರಿ, ಪರಶುರಾಮ ಯಲಗೋಡ, ಮನೋಹರ ಭಕ್ತರು ಭಾಗವಹಿಸಿದ್ದರು.
15 ರಂದು ಸಾಕ್ಷರತಾ ದಿನಾಚರಣೆಗೆ ಕರೆ
ಸುರಪುರ: ಆಗಸ್ಟ್ 15 ಸ್ವಾತಂತ್ರ್ಯ ದಿನ ಜತೆಯಲ್ಲಿಯೇ ಸಾಕ್ಷರತಾ ದಿನವನ್ನು ಆಚರಿಸಿ ಆಂದೋಲನ ಮಾಡಬೇಕೆಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರು ತಿಳಿಸಿದರು. ಇಲ್ಲಿಯ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಜರುಗಿದ ಸ್ವಾತಂತ್ರ್ಯೋತ್ಸವ ಮತ್ತು ಸಾಕ್ಷರತಾ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಜಿಪಂ, ತಾಪಂ, ಗ್ರಾಪಂ ಸದಸ್ಯರು, ಜನಪ್ರತಿನಿಧಿಗಳು, ಅಧಿಕಾರಿಗಳು ಸಾಕ್ಷರತಾ ಆಂದೋಲನದಲ್ಲಿ ಭಾಗವಹಿಸಬೇಕು ಹಾಗೂ ಸಾಕ್ಷರತಾ ಪ್ರಮಾಣ ಹೆಚ್ಚಿಸಲು ಪ್ರತಿಜ್ಞೆ ಮಾಡಬೇಕು ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.