ಗುಲ್ಬರ್ಗಾ

'ವಚನ ಪರಿಪಾಲನೆ ಅಗತ್ಯ'

Published On :

ಬಸವಾದಿ ಶರಣರ ವಚನ ಪ್ರವಚನ ಕಾರ್ಯಕ್ರಮ
ಗುಲ್ಬರ್ಗ/ಶಹಾಬಾದ್: ಇಂದು ಲಿಂಗಾಯತ ಧರ್ಮ ಹಲವು ಗೊಂದಲಗಳ ನಡುವೆ ಮುಳುಗಿ ಹೋಗಿದೆ. ಇದರಿಂದ ಹೊರಬರಬೇಕಾದರೆ ಇಂದು ವಚನಗಳ ಅಧ್ಯಯನ ಮತ್ತು ಪರಿಪಾಲನೆ ಮಾಡುವ ಅಗತ್ಯವಿದೆ ಎಂದು ಕಾರವಾರ ಜಿಲ್ಲೆಯ ಅತ್ತಿವೇರಿ ಬಸವಧಾಮದ ಬಸವೇಶ್ವರಿ ಮಾತೆ ಹೇಳಿದರು.
ಶಾಂತನಗರ ಭಂಕೂರಿನ ಬಸವ ಸಮಿತಿ ಆಯೋಜಿಸಿದ್ದ ಶ್ರಾವಣ ಮಾಸಾಚರಣೆ, ಬಸವಾದಿ ಶರಣರ ವಚನ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
12ನೇ ಶತಮಾನದಲ್ಲಿ ಅನುಭವ ಮಂಟಪವನ್ನು ನಿರ್ಮಾಣ ಮಾಡಿ, ಸಮಾನತೆಯ ಸಮಾಜವನ್ನು ನಿರ್ಮಿಸಿದವರು ಬಸವಣ್ಣನವರು. ಆದರೆ ಇಂದು ಸಮಾಜದಲ್ಲಿ ಅಶಾಂತಿ ತಲೆದೋರುತ್ತಿದೆ. ಇದಕ್ಕೆ ಬಸವಣ್ಣನವರ ಅಭಾವವೇ ಕಾರಣ. ಆದ್ದರಿಂದ ವೈಚಾರಿಕತೆಯುಳ್ಳ ಬಸವಣ್ಣನವರ ಸಂದೇಶಗಳು ಎಂದೆಂದಿಗೂ ಪ್ರಸ್ತುತವಾಗಿದ್ದು ಅವುಗಳನ್ನು ಅರಿತು ಬದುಕು ಸಾಗಿಸಿದರೆ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.
ನಗರದ ವಚನೋತ್ಸವ ಸಮಿತಿ ಅಧ್ಯಕ್ಷ ಮಹಾಲಿಂಗಪ್ಪ ಇಂಗಿನಶೆಟ್ಟಿ, ಗುಲ್ಬರ್ಗ ಬಸವ ಕೇಂದ್ರದ ಸಿದ್ರಾಮಪ್ಪ ಮಾಲಪ್ಪಗೋಳ ಮಾತನಾಡಿದರು. ಹಳೆ ಶಹಾಬಾದ್ ವಚನೋತ್ಸವ ಸಮಿತಿ ಅಧ್ಯಕ್ಷ ವೈಜನಾಥ ಹುಗ್ಗಿ, ವಿಜಯಕುಮಾರ್ ಪಾಟೀಲ್, ಗಂಗಾಧರಯ್ಯ ಹವಾಲ್ದಾರ ಮಠ, ಗುಲ್ಬರ್ಗ ಬಸವ ಕೇಂದ್ರದ ಸೋಮಣ್ಣ ನಡಕಟ್ಟಿ, ಶಿವಶರಣಪ್ಪ ಗೊಬ್ಬೂರ್, ಅಮರೇಶ ಹೀರಾಳ, ಶರಣಗೌಡ, ಕುಪೇಂದ್ರ ತುಪ್ಪದ, ಗಿರಿಮಲ್ಲಪ್ಪ ವಳಸಂಗ, ರೇವಣಸಿದಪ್ಪ ಮುಸ್ತಾರಿ, ನೀಲಕಂಠ ಮುದುಗೋಳಕರ್, ಲಕ್ಷ್ಮಣ ಮಾಸ್ಟರ್, ಅಮೃತ ಮಾನಕರ್, ಚನ್ನಬಸವನಗೌಡ, ಶಾಂತಪ್ಪ ಬಸಪಟ್ಟಣ ಇತರರು ಇದ್ದರು.
ಬಸವ ಸಮಿತಿ ಅಧ್ಯಕ್ಷ ಸುಭಾಶ್ಚಂದ್ರ ರಾಜಾಪುರ ಅಧ್ಯಕ್ಷತೆ ವಹಿಸಿದ್ದರು. ಬಸಯ್ಯ ಪೂಜಾರಿ ನಿರೂಪಿಸಿ, ಸ್ವಾಗತಿಸಿದರು. ಶಿವಶರಣಪ್ಪ ಪಾಟೀಲ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.