ಗುಲ್ಬರ್ಗಾ

ಪಕ್ಷ, ವ್ಯಕ್ತಿ ಹಿತ ಕಾಪಾಡುವ ತಿದ್ದುಪಡಿ ನಾಚಿಕೆಗೇಡು

Published On :

ಗುಲ್ಬರ್ಗ: ಕೇಂದ್ರ ಸರ್ಕಾರ ಮಾಹಿತಿ ಕಾಯ್ದೆ ಹಕ್ಕಿಗೆ ಕ್ರಿಯಾಶೀಲಗೊಳಿಸಲು ಈ ಹಕ್ಕಿನನ್ವಯ ಸಮಾಜದ ಮತ್ತು ಆಯಾ ಕ್ಷೇತ್ರದ ಎಲ್ಲ ಸಂಘ, ಸಂಸ್ಥೆ ವ್ಯಕ್ತಿಗಳಿಗೆ ಒಳಪಡಿಸಬೇಕೆಂಬ ವಿಶಾಲ ವ್ಯಾಪ್ತಿಯ ಉದ್ದೇಶವನ್ನು ಬಿಟ್ಟು ರಾಜಕೀಯ ಪಕ್ಷಗಳ ಮತ್ತು ವ್ಯಕ್ತಿಗಳ ಹಿತ ಕಾಪಾಡಲು ಇದಕ್ಕೆ ತಿದ್ದುಪಡಿ ಮಾಡುತ್ತಿರುವುದು ನಾಚಿಕೆಗೇಡಿನ ಪರಮಾವಧಿ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಕಲ್ಯಾಣರಾವ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ಮಾಹಿತಿ ಹಕ್ಕಿನ ಕಾಯ್ದೆ ಜಾರಿಯಲ್ಲಿರುವುದರಿಂದ ರಾಜಕಾರಣಿಗಳಿಗೆ ಹಾಗೂ ಅಧಿಕಾರಿಗಳಿಗೆ ಬೇಲಿ ಹಾಕಿದಂತಾಗಿದೆ.
ಆದರೆ, ರಾಜಕಾರಣಿಗಳು ಈ ಕಾಯ್ದೆಗೆ ತಿದ್ದುಪಡಿ ಮಾಡಿ ಬೇಲಿ ಮುಕ್ತಗೊಳಿಸಿಕೊಂಡು ರಾಜೋರೋಷವಾಗಿ ದೇಶವನ್ನು ಲೂಟಿ ಮಾಡಲು ರಣತಂತ್ರ ರೂಪಿಸಿರುವ ಧೋರಣೆಯಾಗಿದೆ ಎಂದು ಆರೋಪಿಸಿದ್ದಾರೆ.
ರಾಷ್ಟ್ರಪತಿಗಳು ಯಾವುದೇ ಪಕ್ಷ ಮತ್ತು ವ್ಯಕ್ತಿಯ ಹಿತವನ್ನು ಗಮನಿಸದೇ ದೇಶದ ಹಿತದೃಷ್ಟಿಯಿಂದ ಇಂತಹ ತಿದ್ದುಪಡಿಗೆ ಅವಕಾಶ ನೀಡದೇ ವಿರೋಧಿಸಬೇಕು. ಒಂದು ಪಕ್ಷ ತಿದ್ದುಪಡಿಯಾದರೆ ರಾಷ್ಟ್ರಪತಿಗಳು ಅದಕ್ಕೆ ಅಂಕಿತ ಹಾಕಬಾರದು ಎಂದು ಮನವಿ ಮಾಡಿದ್ದಾರೆ.

ನಾಳೆ ಕಟ್ಟಡ ಕಾರ್ಮಿಕರ ಸಭೆ
ಚಿಂಚೋಳಿ: ಪಟ್ಟಣದ ಮಹಾಂತೇಶ್ವರ ದೇವಸ್ಥಾನ ಅವರಣದಲ್ಲಿ ಕರ್ನಾಟಕ ಕಟ್ಟಡ ಕಾರ್ಮಿಕರ ಕೇಂದ್ರ ಸಂಘದ ಸಂಘಟನೆಯ ನೇತೃತ್ವದಲ್ಲಿ ಆ.14 ರಂದು ಕಟ್ಟಡ ಕಾರ್ಮಿಕರ ಸಭೆ ಆಯೋಜಿಸಲಾಗಿದೆ ಎಂದು ತಾಲೂಕ ಸಂಚಾಲಕ ವೀರಶೆಟ್ಟಿ ಸುಂಠಾಣ ತಿಳಿಸಿದ್ದಾರೆ.
ಕಟ್ಟಡ ಕಾರ್ಮಿಕರಿಗಾಗಿ ಸರ್ಕಾರ ಜಾರಿಗೆ ತಂದಿರುವ ಹಲವಾರು ಸೌಲಭ್ಯಗಳು ಪಡೆಯಲು ಕಟ್ಟಡ ನಿರ್ಮಾಣದಲ್ಲಿ ತೊಡಗಿರುವ ಗೌಂಡಿ ಸೆಂಟ್ರಿಂಗ್, ಕಲ್ಲುಗಣಿ ಕಾರ್ಮಿಕರು ಮತ್ತು ಇತರೆ ಕಟ್ಟಡ ನಿರ್ಮಾಣದಲ್ಲಿ ತೊಡಗಿರುವ ಕೂಲಿ ಕಾರ್ಮಿಕರು ಸರ್ಕಾರದ ಕಟ್ಟಡ ಮಂಡಳಿಯಲ್ಲಿ ಸದಸ್ಯತ್ವ ಪಡೆಯಲು ಮುಂದಾಗಬೇಕಾಗಿದೆ.
 ಕಾರ್ಮಿಕರ ಸಭೆಯಲ್ಲಿ ಜಿಲ್ಲಾ ಕಾರ್ಮಿಕ ಸಂಘದ ಸಂಚಾಲಕರಾದ ಶಂಕರ ಕಟ್ಟಿ ಸಂಗಾವಿ ಮತ್ತು ಬಾಲಯ್ಯ ಭಾಗವಹಿಸಲಿದ್ದಾರೆ.
ಚಿಂಚೋಳಿ ನಗರ ಮತ್ತು ಗ್ರಾಮೀಣ ಪ್ರದೇಶಗಳಾದ ಕಲ್ಲೂರ್, ಮಿರಿಯಾಣ, ಕೃಷ್ಣಾಪುರ, ಭೈರಂಪಳ್ಳಿ, ಚಿಮ್ಮಾಇದಲಾಯಿ, ಕನಕಪುರ, ಚಿಮ್ಮನಚೋಡ, ನಿಡಗುಂದಾ, ಸುಲೇಪೇಟ್ ಮತ್ತು ಗಣಾಪುರ, ಭಕ್ತಂಪಳ್ಳಿ, ಪೋಲಕಪಳ್ಳಿ ಮುಂತಾದ ಗಣಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ತಾಲೂಕು ಸಂಚಾಲಕ ವೀರಶೆಟ್ಟಿ ಸುಂಠಾಣ ಅವರು  ಮನವಿಯನ್ನು ಮಾಡಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.