ಗುಲ್ಬರ್ಗಾ

ಹುಣಸಗಿ ವಿತರಣಾ ಕಾಲುವೆಗೆ ಬಾಗಿನ ಅರ್ಪಣೆ

Published On :

ಹುಣಸಗಿ: ಜಲಾಶಯಗಳಿಂದ ನೀರನ್ನು ಉಪಯೋಗಿಸುವ ಪ್ರತಿಯೊಬ್ಬ ರೈತನೂ ನೀರಾವರಿ ತಜ್‌ಞನಾಗಬೇಕು. ಜಲಾಶಯದಲ್ಲಿ ನೀರಿನ ಮಟ್ಟ ಎಷ್ಟಿದೆ ಎಷ್ಟು ದಿನಗಳ ಕಾಲ ನಾವು ನೀರನ್ನು ಬಳಸಬಹುದಾಗಿದೆ ಎಂದು ಜಲಾಶಯದ ಸಂಪೂರ್ಣ ಮಾಹಿತಿಗಳು ಪ್ರತಿಯೊಬ್ಬ ರೈತರು ತಿಳಿದುಕೊಳ್ಳುವುದು ಅವಶ್ಯವಾಗಿದೆ ಎಂದು ಭಾರತೀಯ ಕಿಸಾನ ಸಂಘದ ಉತ್ತರ ಕನರಾಟಕದ ಪ್ರಧಾನ ಕಾರ್ಯದಶರ್ ರಾಘವೇಂದ್ರ ಕಾಮನಟಗಿ ಹೇಳಿದರು. ಇಲ್ಲಿಗೆ ಸಮೀಪದ ದ್ಯಾಮನಹಾಳ ಗ್ರಾಮದ ಹುಣಸಗಿ ವಿತರಣಾ ಕಾಲುವೆಯಲ್ಲಿ ನಡೆದ ಕೃಷ್ಣೆಗೆ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನೀರು ಪೂರೈಸಿ: ನಮ್ಮ ಜಲಾಶಯ, ಮುಖ್ಯ ಕಾಲುವೆ, ವಿತರಣಾ ಕಾಲುವೆಗಳ ರಕ್ಷಣೆ ಮತ್ತು ಕಾಳಜಿ ನಮ್ಮ ಹೊಣೆಯಾಗಿರುತ್ತದೆ. ಕೃಷ್ಣಾ ಅಚ್ಚಕಟ್ಟು ಪ್ರದೇಶಕ್ಕೆ 173 ಟಿಎಂಸಿ. ನೀರನ್ನು ನಿಗದಿಪಡಿಸಿ, ಅದೇ ನೀರಲ್ಲಿ ಕೊಪ್ಪಳ ಜಿಲ್ಲೆ ಕುಷ್ಟಗಿ, ಯಲಬುರ್ಗ, ಕೊಪ್ಪಳ, ರೋಣ, ಬಾಗಲಕೋಟಿ, ಹುನಗುಂದ, ವಿಜಾಪುರ, ಬಾಗೇವಾಡಿ, ಸಿಂದಗಿ, ಇಂಡಿ, ಜೇವರ್ಗಿ, ಸುರಪುರ, ಶಹಾಪುರ, ದೇವದುರ್ಗ, ಲಿಂಗಸ್ಗೂರು, ಹಾಗೂ ಮಾನವಿ ತಾಲೂಕಿನ ಅಂದಾಜು 18 ಲಕ್ಷ ಎಕರೆಗೆ ನೀರಾವರಿ ಪೂರೈಸಬೇಕು. ನಮಗೆ ಬೇಕಾದಷ್ಟು ಮಾತ್ರ ನೀರನ್ನು ಉಪಯೋಗಿಸಿದಾಗ ಮಾರ್ಚ್ ಕೊನೆವರೆಗೆ ನೀರು ಹರಿಯಲು ಸಾಧ್ಯವಾಗಬಹುದು. ಹುಣಸಗಿ ವಿತರಣಾ ಕಾಲುವೆ (ಎಚ್ಬಿಸಿ) ದ್ಯಾಮನಹಾಳ ಕಕ್ಕೇರಾ, ದೇವಾಪುರ, ತಿಂಥಣಿ, ದೇವತಕಲ್ ಗ್ರಾಮಗಳು ಸೇರಿದಂತೆ ಸುಮಾರು 50 ಸಾವಿರ ಎಕರೆಗೆ ನಿರುಣಿಸುವ ಸಾಮರ್ಥ್ಯ ಈ ಕಾಲುವೆ ಹೊಂದಿರುತ್ತದೆ. ಅವಳಿ ಜಲಾಶಯಗಳ ಸಂಪೂರ್ಣ ನೀರಿನ ಬಳಕೆಗೆ ಆಡಳಿತ ನಡೆಸುವ ಶಾಸಕರುಗಳಿಗೆ ಕೆಬಿಜೆಎನ್‌ಎಲ್ ಅಧಿಕಾರಿಗಳಿಗೆ ಪರಸ್ಪರ ಸಹಕಾರ ನೀಡಬೇಕಾಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.