ಅರ್ಧಕ್ಕೆ ಹಾರಿದ ರಾಷ್ಟ್ರಧ್ವಜ
ಗುಲ್ಬರ್ಗ/ಶಹಾಬಾದ್: ನಾಲವಾರ ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ 67ನೇ ಸ್ವಾತಂತ್ರ್ಯೋತ್ಸವದ ರಾಷ್ಟ್ರಧ್ವಜ ಅರ್ಧಕ್ಕೆ ಹಾರಿದ ಘಟನೆ ನಡೆಯಿತು. ಕೇಂದ್ರದ ಮೇಲೆ ಇರುವ ಧ್ವಜಕಂಬಕ್ಕೆ ಅರ್ಧ ಧ್ವಜ ಏರಿಸಿ, ರಾಷ್ಟ್ರಗೀತೆಯನ್ನು ಹಾಡಲಾಯಿತು. ನಂತರ ಕಂಡು ಬಂದ ಪ್ರಮಾದದಿಂದ ಧ್ವಜವನ್ನು ಮತ್ತೆ ಪೂರ್ಣವಾಗಿ ಏರಿಸಲಾಯಿತು.ಗ್ರಾಪಂ ಸದಸ್ಯರ ನಿರ್ಲಕ್ಷ್ಯ: ನಾಲವಾರ ಗ್ರಾಪಂ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವದ ದ್ವಜಾರೋಹಣ ಸಂದರ್ಭದಲ್ಲಿ 29 ಸದಸ್ಯರಲ್ಲಿ ಕೇವಲ 6 ಸದಸ್ಯರು ಹಾಜರಾಗಿ, ಉಳಿದ ಸದಸ್ಯರು ರಾಷ್ಟ್ರೀಯ ಹಬ್ಬದ ಬಗ್ಗೆ ತಮ್ಮ ನಿರ್ಲಕ್ಷ್ಯವನ್ನು ಎತ್ತಿತೋರಿಸಿದರು. ಅಧ್ಯಕ್ಷ ಈರಣ್ಣಗೌಡ ಬಿರಾಳರವರು ಧ್ವಜಾರೋಹಣ ನೆರವೇರಿಸಿದರು. ಗ್ರಾಪಂ ಸದಸ್ಯರಾದ ಮನ್ಸೂರ್ ಅಲಿ ಬೇಗ್, ಸಿದ್ದಣ್ಣ ದಂಡೋತಿ, ಸೋಮನಾಥ ಕೊಂಚೂರ ಗ್ರಾಮಸ್ಥರಾದ ಭೀಮಾಶಂಕರ ಸುಣಗಾರ, ರಹೀಮ್ ನಯಾಘರ, ಕೀಶನ ಶಂಕರ, ಸಿದ್ರಾಮ ಆರಿ, ಪೊಲೀಸ್ ಸಿಬ್ಬಂದಿ ಮಲ್ಲಿನಾಥ ಡಗೆ, ಎಸ್.ಎಸ್. ಜಾಂಜಿ ಇತರರು ಇದ್ದರು.
ಜಾಗೃತ ಶಾಲೆಯಲ್ಲಿ ದಿನಾಚರಣೆ
ಗುಲ್ಬರ್ಗ: ಕಪನೂರದ ಜಾಗೃತ ಹನುಮಾನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಪಾಲಿಕೆ ಸದಸ್ಯೆ ಲಕ್ಷ್ಮೀ ಬಸವರಾಜ ಅವರು ಧ್ವಜಾರೋಹಣ ನೆರವೇರಿಸಿದರು. ನಾಗಪ್ಪ ಮ್ಯಾಳೇಶಿ, ಈಶ್ವರ ಉಡ್ಗಕರ್, ವಿ.ಸಿ. ನೀರಡಗಿ, ಅನಿತಾ ಗುತ್ತೇದಾರ, ರೇಣುಕಾ ಮಚ್ಚೆಟ್ಟಿ, ಶೋಭಾ ಪೂಜಾರಿ ಇತರರು ಇದ್ದರು.
ಜೈಕರವೇದಿಂದ ಧ್ವಜಾರೋಹಣ
ಗುಲ್ಬರ್ಗ: ಜಿಲ್ಲೆಯ ಜೈ ಕರ್ನಾಟಕ ರಕ್ಷಣಾ ವೇದಿಕೆಯ ಕೇಂದ್ರ ಕಚೇರಿಯಲ್ಲಿ 67ನೇ ಸ್ವಾತಂತ್ರೋತ್ಸವವನ್ನು ರಾಜ್ಯಾಧ್ಯಕ್ಷರಾದ ಅರುಣಕುಮಾರ ಎಸ್. ಪಾಟೀಲರು ಧ್ವಜಾರೋಹಣ ಮಾಡುವ ಮೂಲಕ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪಾಟೀಲರು ಯುವಕರಿಗೆ ಭಾವೈಕ್ಯತೆ ಉಳಿಸಲು ಹೋರಾಟ ಮಾಡಬೇಕು ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಟದ ಮನೋಭಾವ ಬೆಳಸಿಕೊಳ್ಳಬೇಕೆಂದು ಕರೆ ಕೊಟ್ಟರು. ರಾಜ್ಯ ಉಪಾಧ್ಯಕ್ಷ ಮಂಜುನ್ನಾಥ ಬಿ. ಹಾಗರಗಿ, ಜಿಲ್ಲಾ ಕಾರ್ಯಾಧ್ಯಕ್ಷ ಸಚೀನ ಎಸ್. ಫರಹತಾಬಾದ್, ಜಿಲ್ಲಾ ಪ್ರ. ಕಾರ್ಯದರ್ಶಿ ಜಗನ್ನಾಥ ಪಟ್ಟಣಶೆಟ್ಟಿ, ಜಿಲ್ಲಾ ಮಹಿಳಾಧ್ಯಕ್ಷರಾದ ಶ್ರೀಮತಿ ನೀಲಾಂಬಿಕಾ, ಕಾಶಿನಾಥ ಮಾಳಗೆ, ಎನ್. ಇಂಡಿ, ಅಶೋಕ ಭಾಣೆಕರ್, ರವಿ ಬಿ. ಸಂಗಾಪೂರ, ಸಚೀನ, ನಾಗರಾಜ ಬನ್ನೂರ, ಶಿವಾನಂದ ಭಾಗವಹಿಸಿದ್ದರು ಎಂದು ಜೈಕರವೇ ಜಿಲ್ಲಾ ಸಂಚಾಲಕ ಶ್ರೀಕಾಂತ ಆಲೂರ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

