ವಿವಿಧ ಸಂಘ- ಸಂಸ್ಥೆಗಳಲ್ಲಿ ಹಾರಾಡಿದ ರಾಷ್ಟ್ರಧ್ವಜ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಆ.15
ನಗರದ ವಿವಿಧೆಡೆ ವಿವಿಧ ಸಂಘ- ಸಂಸ್ಥೆಗಳಲ್ಲಿ 67ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ವಚನೋತ್ಸವ ಪ್ರತಿಷ್ಠಾನ
ನಗರದ ಬಸವೇಶ್ವರ ಆಸ್ಪತ್ರೆ ಎದುರುಗಡೆ ಇರುವ ವಿದ್ಯಾನಗರದ ವಚನೋತ್ಸವ ಪ್ರತಿಷ್ಠಾನ ಯುವಘಟಕ ಮಕ್ಕಳ ವೇದಿಕೆಯಲ್ಲಿ ಆಯೋಜಿಸಿದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮಕ್ಕಳೇ ಧ್ವಜಾರೋಹಣ ಮಾಡುವುದರ ಜತೆಗೆ ಸ್ವಾಗತ, ಪ್ರಾಸ್ತಾವಿಕ ಹಾಗೂ ಭಾಷಣ ಮಾಡಿರುವುದು ವಿಶೇಷವಾಗಿತ್ತು.
ಯುವ ಘಟಕದ ಅಧ್ಯಕ್ಷ ಶಿವರಾಜ ಅಂಡಗಿ, ವೀರೇಶ ನಾಗಶೆಟ್ಟಿ, ಶ್ರೀಕಾಂತ ಗಚ್ಚಿನಮನಿ, ಶ್ರವಣಕುಮಾರ್, ಅವರಾದಕರ್, ಸುನೀಲಕುಮಾರ್ ಶಹಾಬಾದಕರ್, ಸಿದ್ದೇಶ, ವೈಭವ, ಅಚಲರಾಜ, ಆದಿತ್ಯ, ಅನುರಿತಾ, ಕೈಬಲ್ಯ, ಮಂಜುನಾಥ ಇತರರು ಪಾಲ್ಗೊಂಡಿದ್ದರು.
ಶ್ರೀಸಾಯಿ ಮಹಾವಿದ್ಯಾಲಯ
ನಗರದ ಶ್ರೀಸಾಯಿ ಪ್ರಸಾದ ಸಮಾಜಕಾರ್ಯ ಮಹಾವಿದ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಪತ್ರಕರ್ತ ಬಿ.ವಿ. ಚಕ್ರವರ್ತಿ ಧ್ವಜಾರೋಹಣ ನೆರವೇರಿಸಿದರು. ಕಾಲೇಜಿನ ಪ್ರಾಚಾರ್ಯ ಲಕ್ಷ್ಮೀಕಾಂತ ಪಾಟೀಲ್, ಸುನೀಲಕುಮಾರ್ ಒಂಟಿ, ಗೋಪಾಲ್, ಅರ್ಚನಾ ಗಾಯಕವಾಡ, ಸುಭಾಷ, ಪೂರ್ಣಿಮಾ ಬೆಳಮಗಿ ಸೇರಿದಂತೆ ವಿದ್ಯಾರ್ಥಿಗಳು, ಉಪನ್ಯಾಸಕರು, ಸಿಬ್ಬಂದಿ ಉಪಸ್ಥಿತರಿದ್ದರು.
ಸಮಾಜವಾದಿ ಪಕ್ಷ
ನಗರದ ಕರ್ನಾಟಕ ಸಮಾಜವಾದಿ ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯ ಉಪಾಧ್ಯಕ್ಷ ಗೋವಿಂದ ಭಟ್ ಅವರು ಧ್ವಜಾರೋಹಣ ನೆರವೇರಿಸಿದರು. ಮುಖಂಡರಾದ ಶರಣಬಸಪ್ಪ ಕರಶೆಟ್ಟಿ, ಪ್ರಭುಗೌಡ ಹಾವನೂರ, ಅಫಜಲ್ಪುರ ತಾಲೂಕು ಅಧ್ಯಕ್ಷ ಹೋಬಸಿಂಗ್ ಎಂ. ಚವ್ಹಾಣ, ವಿ.ಸಿ. ಸ್ವಾಮಿ, ಸುಭಾಷ, ಶಿವಾಜಿ, ಅರುಣಕುಮಾರ್ ಹಲವಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಕೆಜೆಪಿ ಕಚೇರಿ
ನಗರದ ಕರ್ನಾಟಕ ಜನತಾ ಪಕ್ಷದ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ತಿಪ್ಪಣಪ್ಪ ಕಮಕನೂರ ಧ್ವಜಾರೋಹಣ ನೆರವೇರಿಸಿದರು.
ಪಕ್ಷದ ಮುಖಂಡರಾದ ಬಸವರಾಜ ಇಂಗಿನ್, ಸುಭಾಷ ಬಿರಾದಾರ, ಬಾಬುರಾವ ಚವ್ಹಾಣ, ವೈಜನಾಥ ಝಳಕಿ, ಕೈಲಾಸನಾಥ ದೀಕ್ಷಿತ, ಶರಣು ಪಾಟೀಲ್ ಮೋತಕಪಳ್ಳಿ, ಈರಣ್ಣ ಹೋನಳ್ಳಿ, ಎಸ್.ಆರ್. ಪಾಟೀಲ್, ರಾಜಶೇಖರ, ಎಲ್.ಎಸ್. ರಾಠೋಡ, ಶಾಂತಕುಮಾರ್ ಸೇರಿದಂತೆ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.
ಕೇಂದ್ರ ಗ್ರಂಥಾಲಯ
ನಗರದ ಕೇಂದ್ರ ಗ್ರಂಥಾಲಯದಲ್ಲಿ ನಡೆದ ಸಮಾರಂಭದಲ್ಲಿ ಇಲಾಖೆಯ ಉಪ ನಿರ್ದೇಶಕ ಡಿ.ಎಚ್. ಕೇಸರಿ ಧ್ವಜಾರೋಹಣ ನೆರವೇರಿಸಿದರು.
ಸಿದ್ದರಾಮ ದೇವತ್ಕಲ್, ಎಸ್.ಜಿ. ಮುಚಳಂಬಿ, ಮಹ್ಮದ್ ರಫಿ, ಸುನೀಲ್ ಮುದಗಲ್, ಅನೀಲಕುಮಾರ್, ದೀಪಕ ಕಮತರ್, ಶರಣಪ್ಪ ಮಲಕೂಡ, ಎಲ್ಲ ಶಾಖಾ ಮುಖ್ಯಸ್ಥರು, ಸಮುದಾಯ ಭವನ ಸಿಬ್ಬಂದಿ ಪಾಲ್ಗೊಂಡಿದ್ದರು.
ಮಹಾಂತೇಶ್ವರ ಶಾಲೆ
ನಗರದ ಮಹಾಂತೇಶ್ವರ ಹಿರಿಯ ಮತ್ತು ಪ್ರೌಢಶಾಲೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಗುರುಲಿಂಗ ಶಿವಾಚಾರ್ಯರು, ಡ್ಯಾನಿಯಲ್, ವೀರಭದ್ರಪ್ಪ ಪಸಾರ, ಚನ್ನಯ್ಯ ಅಪ್ಪಜಿ, ಸಂತೋಷ ಪಾಟೀಲ್, ಶಿವಯೋಗಿ, ಅಮರನಾಥ ಮುರಕಂಭಿ, ಸುರೇಶ ಪಲ್ಲಾ, ಸಿದ್ದು ಹರಕಂಚಿ, ಅನೀಲಕುಮಾರ್ ಕೋರೆ, ರಾಜು ಹಿರೇಮಠ, ನಾಗೇಂದ್ರ ಕಳ್ಳಿಮಠ, ಸುಭಾಶ್ಚಂದ್ರ ಪಂಚಾಳ, ರೇವಣಸಿದ್ದಪ್ಪ ನಿಂಬಾಜಿ, ಜೈಸಿಂಗ್ ಜಾಧವ ಪಾಲ್ಗೊಂಡಿದ್ದರು.
ಶೆಟ್ಟಿ ಕಾಲೇಜು
ನಗರದ ಶಹಾಬಾದ್ ರಸ್ತೆಯಲ್ಲಿರುವ ಶೆಟ್ಟಿ ಇನ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಶೆಟ್ಟಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ರವಿ ಸೊಂತ ಧ್ವಜಾರೋಹಣ ನೆರವೇರಿಸಿದರು.
ಗಿರಿಜಾಶಂಕರ ಶೆಟ್ಟಿ, ಸೋಮೇಶ, ಗಣೇಶ, ಸ್ನೇಹಾ, ಸುಮಯ್ಯಾ, ಕುಮಾರಿ ಅಪರ್ಣಾ, ಸೂರಯ್ಯ ತರನುಂ, ಅಶ್ವಿನಿ, ಸೌಮ್ಯ, ಕೃಷ್ಣಾಬಾಯಿ, ಸಂಚಿತಾ, ಶಿವರಾಜ ಅಂಡಗಿ, ಶಿವಶಂಕರ ಮಂಗಲಗಿ, ಪ್ರೊ. ಪಿ.ಕೆ. ಶಹಾಬಾದಕರ್, ಪ್ರೊ. ಕೆ.ಎಂ. ಪಾಟೀಲ್, ಪ್ರೊ. ಸುವರ್ಣ ಪಾಟೀಲ್, ಪ್ರೊ. ಬಸಂತಿ ಘಂಟಿ, ದತ್ತಣ್ಣ ಮಂಟಗಿ, ಕಾಲೇಜಿನ ಎಲ್ಲ ಬೋಧಕ ವರ್ಗದ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ದುಬೈ ಕಾಲೋನಿ ಶಾಲೆ
ನಗರದ ದುಬೈ ಕಾಲೋನಿಯ ಚಕ್ರಕಟ್ಟಾ ಸಂಜಯಗಾಂಧಿ ನಗರದ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಪಾಲಿಕೆ ಸದಸ್ಯೆ ಶರಣಮ್ಮ ಯಲ್ಲಪ್ಪ ನಾಯಿಕೋಡಿ ಮತ್ತು ಎಸ್ಡಿಎಂಸಿ ಅಧ್ಯಕ್ಷ ಶಿವಕುಮಾರ್ ಸುಗಂಧಿ ಧ್ವಜಾರೋಹಣ ನೆರವೇರಿಸಿದರು.
ಸೋಮಶೇಖರ ಬೆಳಮಗಿ, ಮಲ್ಲಣ್ಣ ಕಣ್ಣಿ, ವಿಶ್ವನಾಥ ಕೋರವಾರ, ಲಕ್ಷ್ಮೀಕಾಂತ ಜವಳಿ, ವಿದ್ಯಾರ್ಥಿಗಳು, ಶಿಕ್ಷಕರು, ನಾಗರಿಕರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಲಯ
ನಗರದ ವಿದ್ಯಾನಗರದ ಕೃಷ್ಣ ಮಂದಿರದಲ್ಲಿರುವ ಜಯತೀರ್ಥ ವಿದ್ಯಾರ್ಥಿ ನಿಲಯದಲ್ಲಿ ನಡೆದ ಸಮಾರಂಭದಲ್ಲಿ ನವಲಿ ಕೃಷ್ಣಾಚಾರ್ಯ ಧ್ವಜಾರೋಹಣ ನೆರವೇರಿಸಿದರು.
ಗಿರೀಶ ಕುಲಕರ್ಣಿ, ಮುರಳೀಧರ್, ಭಗವಾನ ಪೋತದಾರ, ಕಲ್ಯಾಣರಾವ ಸೇರಿದಂತೆ ಹಲವಾರು ವಿದ್ಯಾರ್ಥಿಗಳು, ಗಣ್ಯರು ಉಪಸ್ಥಿತರಿದ್ದರು.
ಅವರಾದ (ಬಿ) ಶಾಲೆ
ಗುಲ್ಬರ್ಗ ತಾಲೂಕಿನ ಅವರಾದ (ಬಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಶಬ್ಬೀರ್ ಅಹ್ಮದ್ ಹಾಗರಗುಂಡಗಿ ಧ್ವಜಾರೋಹಣ ನೆರವೇರಿಸಿದರು.
ಎಸ್ಡಿಎಂಸಿ ಅಧ್ಯಕ್ಷ ಸೂರ್ಯಕಾಂತ ತಳವಾರ, ದೈಹಿಕ ಶಿಕ್ಷಕಿ ಶಿವಗೀತಾ ಜಂಬಲದಿನ್ನಿ, ಶಾಲಾ ಮಕ್ಕಳು, ಶಿಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

