ಗುಲ್ಬರ್ಗಾ

ನಕಲಿ ರಸಗೊಬ್ಬರ; ನಾಲ್ವರು ಪೊಲೀಸ್ ವಶಕ್ಕೆ

Published On :

ಅಫಜಲ್ಪುರ: ಬಳ್ಳಾರಿ ಮೂಲದ ಸಿಂಧೂರಿ ಅಗ್ರೋ ಟೆಕ್ ಅಂಗಡಿಯೊಂದರಿಂದ ನಕಲಿ ರಸಗೊಬ್ಬರ ತಂದು ತಾಲೂಕಿನ ದೇಸಾಯಿ ಕಲ್ಲೂರ ಗ್ರಾಮದಲ್ಲಿ ಮಾರಾಟ ಮಾಡುತ್ತಿರುವ ಮಾಹಿತಿ ಹಿನ್ನೆಲೆ ಗ್ರಾಮಸ್ಥರು ಶುಕ್ರವಾರ ಅಂಗಡಿಗೆ ಮುತ್ತಿಗೆ ಹಾಕಿ ನಾಲ್ಕು ಜನರನ್ನು ಪೊಲೀಸರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಸಗೊಬ್ಬರ ಮಾರಾಟಗಾರರಾದ ಶರಣಪ್ಪ ಸಿರಗುಪ್ಪಿ, ಚನ್ನಬಸಯ್ಯ ರೆಡ್ಡಿ ಸೇರಿದಂತೆ ನಾಲ್ಕು ಜನರ ಬಂಧಿತರಾಗಿದ್ದಾರೆ. ಘಟನಾ ಸ್ಥಳಕ್ಕೆ ಸಿಪಿಐ ಕೆ. ರಾಜೇಂದ್ರ ಆಗಮಿಸಿ 4 ಜನ ಆರೋಪಿಗಳನ್ನು ಹಾಗೂ ಗೊಬ್ಬರದ ಬಾಕ್ಸ್‌ಗಳನ್ನು ವಶಕ್ಕೆ ತಗೆದುಕೊಂಡು ತನಿಖೆ ಮುಂದುವರೆಸಿದ್ದಾರೆ. ಕೃಷಿ ಜಂಟಿ ನಿರ್ದೇಶಕ ಐ.ಈ. ಬಳತ್ಕರ್ ಹಾಗೂ ಉಪ ಕೃಷಿ ನಿರ್ದೇಶಕ ಡಾ. ಬಾಲರಾಜ ಗಂಗಾರಾಮ ಅವರು ಪೊಲೀಸ್ ಕಚೇರಿಗೆ ತೆರಳಿ ಈ ಗೊಬ್ಬರವನ್ನು ಪ್ರಯೋಗಾಲಯಕ್ಕೆ ಕಳುಹಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.