ಗುಲ್ಬರ್ಗಾ

ಸಂಸ್ಕಾರದಿಂದ ನಿವೃತ್ತರು ಸಮಾಜಕ್ಕೆ ಆದರ್ಶವಾಗಲಿ

Published On :

ಕ.ಪ್ರ.ವಾರ್ತೆ   ಆಳಂದ   ಆ.20
ವಯಸ್ಸಿನಿಂದ ನಿವೃತ್ತರಾದರೂ ಸೇವಾ ಅವಧಿಯಲ್ಲಿ ಮಾಡಿದ ಕೆಲಸದ ಅನುಭವ ಬಹಳಷ್ಟು ಇರುತ್ತದೆ. ಹೀಗಾಗಿ ನಿವೃತ್ತ ನೌಕರರು ಮಾನವೀಯ ಸಂಸ್ಕಾರದಿಂದ ಸಮಾಜಕ್ಕೆ ದಾರಿದೀಪ ಆಗಬೇಕೆಂದು ಶಾಸಕ ಬಿ.ಆರ್. ಪಾಟೀಲ್ ಹೇಳಿದರು.
ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘವು ಪಟ್ಟಣದ ಶರಣ ಏಕಾಂತ ರಾಮಯ್ಯ ಮಂದಿರದಲ್ಲಿ ಆಯೋಜಿಸಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ರಾಜಕಾರಣ ಅಂದರೆ ಇದೊಂದು ಸಮಾಜ ಸೇವೆ. ಆದರೆ, ಇಂದು ರಾಜಕಾರಣವು ದಿಕ್ಕುದಿಸೆ ಇಲ್ಲದಂತಾಗಿದೆ. ಪ್ರಜಾಪ್ರಭುತ್ವ ನಿಜವಾದ ಅರ್ಥದಲ್ಲಿ ರಾಜಕಾರಣ ನಡೆಯುವಂತಾಗಬೇಕು. ಅಂದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದರು.
ವೃದ್ಧಾಶ್ರಮ ಕೆಟ್ಟ ಸಂಸ್ಕೃತಿ. ಇದು ಸರಿಯಾದುದು ಅಲ್ಲ. ವಯಸ್ಸಾದ ತಂದೆ, ತಾಯಿಯನ್ನು ಮಕ್ಕಳು ಪಾಲನೆ ಪೋಷಣೆ ಮಾಡಬೇಕು. ಲಾಭ ನಷ್ಟ ಪ್ರೀತಿ ವಿಶ್ವಾಸದಿಂದ ಬಾಳಿ ಇತರರಿಗೆ ಆದರ್ಶರಾಗಬೇಕು. ನಿವೃತ್ತ ನೌಕರರ ಭವನ ಹಾಗೂ ಇತರೆ ಸಮಸ್ಯೆಗಳಿಗೂ ಸ್ಪಂದಿಸುವುದಾಗಿ ಭರವಸೆ ನೀಡಿದರು.
ನೌಕರರ ಸಂಘದ ತಾಲೂಕು ಅಧ್ಯಕ್ಷ ಸೈಬಣ್ಣಪ್ಪ ಸುಣ್ಣದ ಅಧ್ಯಕ್ಷತೆ ವಹಿಸಿ ಮಾತನಾಡಿ, ನೌಕರರಿಗೆ ಕೇಂದ್ರ ರಾಜ್ಯ ಸರ್ಕಾರದ ನಿವೃತ್ತ ಸೌಲಭ್ಯಗಳು ದೊರೆಯುವಂತಾಗಬೇಕು. ಶಾಸಕರು ಸಂಘಕ್ಕೆ ಭವನ ನಿರ್ಮಿಸಿಕೊಡಬೇಕೆಂದು ಮನವಿ ಮಾಡಿದರು.
ಮಲ್ಲಣ್ಣ ಹೆಬ್ಬಾಳ, ಸಾಹೇಬಗೌಡ ಪಾಟೀಲ್, ಪಂಚಣ್ಣಪ್ಪ ಬಾವಿ, ಮುಖಂಡ ವಿಠ್ಠಲರಾವ್ ಪಾಟೀಲ್ ಸಭೆಯಲ್ಲಿ ಮಾತನಾಡಿದರು.
ಕಾಶಿನಾಥ ಹಿರೋಳಿ, ಬಾಬುರಾವ ಮಡ್ಡೆ, ಶ್ರೀಮಂತರಾಯ ಪಾಟೀಲ್,  ಶಿವಪುತ್ರಪ್ಪ ಕಾಮಣೆ, ಭೀಮಾಶಂಕರ ಜಮಗಾ, ಮಲ್ಲಿನಾಥ ಪಾಟೀಲ್, ಅಬ್ದುಲ್ ರಹಿಂ ಬಂಡ, ಶ್ರೀಪತಿರಾವ ಪೊದ್ದಾರ, ಭೀಮಶಾ ಕಡಗಂಚಿ, ಶರಣಪ್ಪ ಝಳಕಿ, ಭಾರತ ಏಣ್ಣೆಗುರೆ, ಹಣಮಂತರಾವ ಪಾಟೀಲ್ ಸೇರಿದಂತೆ ಇತರರು ಪಾಲ್ಗೊಂಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.