ರುಕ್ಮಾಪುರದವರಿಗೆ ನಿತ್ಯ 'ಶಾಕಿಂಗ್' ನ್ಯೂಸ್!
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದಲ್ಲಿ ಸುಮಾರು 40ಕ್ಕೂ ಹೆಚ್ಚು ಮನೆಗಳ ಮಹಡಿ ಮೇಲೆ ಕರ್ನಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 11 ಕೆವಿ ವಿದ್ಯುತ್ ಲೈನ್ ಹಾದು ಹೋಗಿದೆ.
ಇದು ತೀರಾ ಕೆಳ ಮಟ್ಟದಿಂದ ಮನೆಗಳ ಮಹಡಿಗೆ ತಾಗಿಕೊಂಡಿರುವುದರಿಂದ ಆ ಕುಟುಂಬದವರು ಕೈಯಲ್ಲಿ ಜೀವ ಹಿಡಿದುಕೊಂಡು ಆತಂಕದಲ್ಲಿ ಬದುಕುತ್ತಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕೈ ಎತ್ತಿದರೆ ತಾಗುವ ತಂತಿ: ಮನೆಯ ಮಾಳಿಗೆಯಿಂದ ಮೇನ್ ವೈರ್ ಸುಮಾರು 3-4 ಅಡಿ ಸಮೀಪವೇ ಇದೆ. ಮಾಳಿಗೆ ಮೇಲೆ ಮಹಿಳೆಯರು ಮಕ್ಕಳು ಕೈ ಎತ್ತಿದರೆ ಸಾಕು ತಾಗುವ ಸಾಧ್ಯತೆ ಇದೆ. ಹೀಗಾಗಿ ಮನೆಗಳ ಮಾಳಿಗೆ ಹತ್ತುವುದೆ ದೊಡ್ಡ ಭಯವಾಗಿದೆ. ಸ್ವಲ್ಪ ಎಚ್ಚರ ತಪ್ಪಿದರೆ ಸಾಕು ಅನಾಹುತ ಕಟ್ಟಿಟ್ಟ ಬುತ್ತಿ. ಮಳೆ- ಗಾಳಿಗೆ ವೈರ್ಗಳು ಒಂದಕ್ಕೊಂದು ತಾಗಿ ಬೆಂಕಿ ಸಿಡಿಯುತ್ತದೆ. ಕಾಂಕ್ರಿಟ್ ಛಾವಣಿ ಹೊಂದಿರುವುದರಿಂದ ವೈರ್ಗಳು ರಾಡುಗಳಿಗೆ ತಾಗುವ ಭೀತಿ ಸೃಷ್ಟಿಸುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಇಡೀ ಮನೆಯಲ್ಲಿ ವಿದ್ಯುತ್: ಮಳೆ ಬಂದರೆ ಸಮಸ್ಯೆ ಇಮ್ಮಡಿಯಾಗುತ್ತದೆ. ಮಳೆ ನೀರು ಮಾಳಿಗೆಯಲ್ಲಿ ಶೇಖರಣೆಗೊಂಡಾಗ ವಿದ್ಯುತ್ ತಂತಿ ಸ್ಪರ್ಶಿಸಿ ಇಡೀ ಮನೆ ವಿದ್ಯುತ್ ಶಾಕ್ನಿಂದ ಅಪಾಯ ಎದುರಿಸುವ ಸಾಧ್ಯತೆಗಳಿವೆ. ಈ ಕುರಿತು ಸುರಪುರದ ಜೆಸ್ಕಾಂ ಕಚೇರಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಅವರು ಸ್ಪಂದಿಸಿಲ್ಲ ಎಂದು ಗ್ರಾಮಸ್ಥರು ತಮ್ಮ ಅಳಲು ತೊಡಿಕೊಳ್ಳುತ್ತಾರೆ.
ಯುವಕನಿಗೆ ಶಾಕ್: ಕಳೆದ ತಿಂಗಳು ನಾಗರಾಜ ಎಂಬ ಯುವಕ ಮಾಳಿಗೆ ಮೇಲೆ ಹೋದಾಗ ವಿದ್ಯುತ್ ಶಾಕ್ ತಗುಲಿತ್ತು. ಕೂದಲೆಳೆ ಅಂತರದಲ್ಲಿಯೇ ಅನಾಹುತದಿಂದ ಆತ ಬಚವಾಗಿದ್ದ. ತಲೆ ಭಾಗಕ್ಕೆ ಸ್ವಲ್ಪ ಶಾಕ್ ತಗುಲಿದ್ದರಿಂದ ಸುಮಾರು 80 ಸಾವಿರ ರುಪಾಯಿ ಆಸ್ಪತ್ರೆ ಚಿಕಿತ್ಸೆಗೆ ಖರ್ಚು ಮಾಡಿ ಗುಣಮುಖನಾಗಿದ್ದಾನೆ. ಇದರಿಂದ ಭಯಭೀತರಾದ ಕೆಲ ಮನೆಯರು ತಮ್ಮ ಮನೆಗಳನ್ನು ಬಿಟ್ಟು ಬೇರೆ ಕಡೆಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ.
ಜೆಸ್ಕಾಂ ಇಲಾಖೆ ವ್ಯವಸ್ಥಿತವಾಗಿ ವಿದ್ಯುತ್ ಕಂಬಗಳನ್ನು ಹಾಕಿಲ್ಲ. ಜೋಡಿಸಲಾದ ವಿದ್ಯುತ್ ತಂತಿಗಳು ಮನೆಯ ಮೇಲೆ ಹಾಯ್ದು ಹೋಗಿದ್ದು, ಬೇರೆ ಕಡೆಗೆ ತೆರವುಗೊಳಿಸುವಂತೆ ಅಲ್ಲಿಯ ನಿವಾಸಿಗಳು ಜೆಸ್ಕಾಂ ಇಲಾಖೆಗೆ ಮನವಿ ಮಾಡಿದೆ. ತಕ್ಷಣ ವೈರ್ಗಳನ್ನು ತೆರವುಗೊಳಿಸಿ ನಮ್ಮ ಜೀವ ಉಳಿಸಬೇಕೆಂದು ನಿವಾಸಿಗಳಾದ ವಿರುಪಾಕ್ಷ, ರಂಗಣ್ಣ ದೊರೆ ಕುಪಗಲ್, ಶರಮುದ್ದೀನ್ ಸಾಬ್, ರಾಮಣ್ಣ, ಮಲ್ಲಪ್ಪ, ಹುಲಗಪ್ಪ, ಈರಮ್ಮ, ಭೀಮಪ್ಪ, ಬಸಪ್ಪ ಇನ್ನಿತರರು ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

