'ನಮ್ಗೂ ಕರ್ನಾಟ್ಕ ಸರ್ಕಾರಿ ನೌಕ್ರಿ ಕೊಡ್ರಿ'
ಅಕ್ಕಲಕೋಟೆ (ಸೊಲ್ಲಾಪುರ ಜಿಲ್ಲೆ): 'ನಮಗೂ ಕರ್ನಾಟಕಕ್ಕೆ ಸೇರಬೇಕೆಂಬ ಆಸೆ ಇತ್ತು. ಆದ್ರ ಹಿಂದೆ ಭಾಷಾವಾರು ಪ್ರಾಂತ ರಚನಾ ಸಮಯದಾಗ ಏನೆಲ್ಲಾ ಆಯ್ತೋ ಆಯ್ತು. ಈಗ ಅದೆಲ್ಲಾ ಕೆದಕುತ್ತ ಕೂಡದೆ ಗಡಿಯಲ್ಲಿರುವ ನಮ್ಮ ಕೈ ಬಿಡಬ್ಯಾಡ್ರಿ. ನಿರ್ಲಕ್ಷ್ಯ ತೋರಬ್ಯಾಡ್ರಿ, ನಮ್ಗ ದುಡ್ಡ ಕೊಟ್ಟು ಭೌತಿಕವಾಗಿ ಪ್ರಗತಿ ಕೆಲ್ಸ ಮಾಡ್ಲಿಕತ್ತೀವಲ್ಲ ಅಂತ ಹೇಳಿ ಕೈ ತೊಳೆದುಕೊಳ್ದ, ನಮ್ಗೂ ಕರ್ನಾಟಕ ಸರ್ಕಾರದ ನೌಕರಿಯೊಳ್ಗ ಮೀಸಲಾತಿ ಕೊಡ್ರಿ, ಉದ್ಯೋಗ ಬದುಕಿಗೆ ಭದ್ರ ಬುನಾದಿ ಅಲ್ವೇನ್ರಿ?...'
ಅಕ್ಕಲಕೋಟೆ ಸೇರಿದಂತೆ ನೆರೆಯ ಮಹಾರಾಷ್ಟ್ರದ ಸೊಲ್ಲಾಪುರ ಸೀಮೆಯಲ್ಲಿ ಹರಡಿರುವ ಗಡಿ ಕನ್ನಡಿಗರ ಪ್ರಶ್ನೆ ಇದು. ಶನಿವಾರ ಅಕ್ಕಲಕೋಟೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಮ್ಮಿಕೊಂಡಿದ್ದ ಪ್ರತಿಭಾವಂತ ಗಡಿ ಕನ್ನಡ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸ್ಮರಣಿಕೆ, ನಗದು ಬಹುಮಾನ ನೀಡಿ ಸತ್ಕರಿಸಲಾಯಿತು. ಆ ಸಂದರ್ಭದಲ್ಲಿ ಭೇಟಿ ನೀಡಿದಾಗ “OÚ«ÚsÚ®Úúڒ¥æàM¦Væ ಮಾತನಾಡಿದ ಗಡಿ ಕನ್ನಡಿಗರು ತಮ್ಮ ಮನದಾಳದ ಇಂಗಿತವನ್ನು ಬಿಚ್ಚಿಟ್ಟರು.
ಕನ್ನಡ ಭವನ ಕಟ್ಟಿ ಕೊಡ್ರಿ: ಮಲಂಗ ಗುರುಜಿ, ಕೇಸೂರ ನಾಗಯ್ಯ ಸ್ವಾಮಿ ಸೇರಿದಂತೆ ಹಲವರು ಅಕ್ಕಲಕೋಟೆ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ 5 ದಶಕಗಳ ಹಿಂದೆಯೇ ಕರ್ನಾಟಕದ ಏಕೀಕರಣಕ್ಕಾಗಿ ಹೋರಾಡಿದ್ದರು ಎಂಬುದನ್ನು ಸ್ಮರಿಸಿದರು.
ಕರ್ನಾಟಕ ಸರ್ಕಾರ ಈ ಭಾಗದ ಕನ್ನಡಿಗರ ಕೈ ಹಿಡಿಯಬೇಕು, ಸರ್ಕಾರ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧ್ಯವಾಗುತ್ತದೆ. ಈ ಭಾಗದ ಕನ್ನಡಿಗರಿಗೆ ಕರ್ನಾಟಕ ಸರ್ಕಾರದ ನೇಮಕಾತಿಗಳಲ್ಲಿ ಶೇ.5 ರಿಂದ ಶೇ. 10ರಷ್ಟು ಮೀಸಲಾತಿ ನೀಡಬೇಕು. ಭೌತಿಕವಾಗಿ ಮೂಲ ಸೌಕರ್ಯ ಕೊಡುತ್ತೇವೆಂದು ಹಣ ವೆಚ್ಚ ಮಾಡಲಾಗುತ್ತಿದೆಯೇ ಹೊರತು, ಆರ್ಥಿಕವಾಗಿ ಗಡಿ ಕನ್ನಡಿಗರ ಬದುಕು ಹಸನಾಗಿಸುವಂಥ ಯೋಜನೆ ಇಂದಿಗೂ ಕರ್ನಾಟಕ ಸರ್ಕಾರ ರೂಪಿಸಿಲ್ಲ. ಈಗಲಾದರೂ ಆ ಕೆಲಸ ನಡೆಯಲಿ ಎಂಬುದು ಇಲ್ಲಿಯವರ ಬೇಡಿಕೆ.
ಗಡಿಯಲ್ಲಿ ಕನ್ನಡ ಕೆಲಸಗಳಿಗಾಗಿ ಭವನ ನಿರ್ಮಾಣ ಮಾಡಿಕೊಡಿ. ಇಲ್ಲಿವವರೆಲ್ಲರೂ ಸೇರಿಕೊಂಡು ಹಗಲಿರುಳು ಕನ್ನಡ ಕಾರ್ಯಕ್ರಮಗಳಿಗೆ ಈ ಕಟ್ಟಡ ಬಳಸಿಕೊಳ್ಳುತ್ತೇವೆ ಎನ್ನುವ ಮೂಲಕ ಈ ಗಡಿ ಕನ್ನಡಿಗರು ಕನ್ನಡದ ಒಲವನ್ನು ತೋರುತ್ತಾರೆ.
ಶೇಷಮೂರ್ತಿ ಅವಧಾನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

