'ನೀರು ಸಂಗ್ರಹಣಾ ಕೆರೆ ನಿರ್ಮಾಣಕ್ಕೆ ಆದ್ಯತೆ'
ಶಹಾಪುರ: ಈಗಿರುವ ಫಿಲ್ಟರ್ ಬೆಡ್ ನೀರು ಸಂಗ್ರಹಣಾ ಕೆರೆಯಿಂದ ಪ್ರಸ್ತುತ ಪಟ್ಟಣದ ಜನಸಂಖ್ಯೆಗೆ ಅನುಗುಣವಾಗಿ ನೀರು ಪೂರೈಸಲು ಕೊರತೆಯಾಗುತ್ತಿರುವುದನ್ನು ಗಮನಿಸಿದ್ದು, ಪಟ್ಟಣಕ್ಕೆ ಶಾಶ್ವತವಾಗಿ ನೀರಿನ ತೊಂದರೆಯಾಗದಂತೆ ಈಗಿರುವ ನೀರು ಸಂಗ್ರಹಣಾ ಕೆರೆಯ ಪಕ್ಕದಲ್ಲಿಯೇ 33 ಎಕರೆ ಜಾಗದಲ್ಲಿ ಮತ್ತೊಂದು ಕೆರೆ ನಿರ್ಮಿಸಿ ಭೀಮಾನದಿ ನೀರನ್ನು ಬಳಕೆ ಮಾಡಿಕೊಳ್ಳಲು 80 ಕೋಟಿ ರು. ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಗುರುಪಾಟೀಲ ಶಿರವಾಳ ತಿಳಿಸಿದರು.
ಕುಡಿಯುವ ನೀರು ಯೋಜನೆಗೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಪುರಸಭೆ ವ್ಯಾಪ್ತಿಗೆ ಸಂಬಂಧಿಸಿದಂತೆ 35 ಸಾವಿರ ಜನಸಂಖ್ಯೆಗೆ ಸಾಕಾಗುವಷ್ಟು ನೀರು ಎಸ್ಬಿಸಿ ಕಾಲುವೆಯಿಂದ ಬರುತ್ತಿದ್ದು, ಮಾರ್ಚ್ನಿಂದಲೇ ನೀರಿನ ತೊಂದರೆ ಪ್ರಾರಂಭವಾಗುತ್ತಿದೆ. ಇದನ್ನು ನೀಗಿಸಲು ಮತ್ತೊಂದು ಕೆರೆ ನಿರ್ಮಾಣ ಅವಶ್ಯಕವಾಗಿ.ದೆ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವುದು ಸರ್ಕಾರದ ಮತ್ತು ಜನಪ್ರತಿನಿಧಿಗಳ ಕರ್ತವ್ಯವಾಗಿದ್ದು, ತಕ್ಷಣವೇ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದರು.
ಪಟ್ಟಣಕ್ಕೆ 57 ಕೊಳವೆ ಬಾವಿ ಮುಂಜೂರಾಗಿದ್ದು ಈಗಾಗಲೇ 15 ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಉಳಿದವುಗಳನ್ನು ನೀರಿನ ಸಮಸ್ಯೆ ಇರುವ ಬಡಾವಣೆಯಲ್ಲಿ ಕೊರೆಸಲು ಸಂಬಂಧಿಸಿದವರಿಗೆ ಸೂಚಿಸಲಾಗಿದೆ. ಹಳೆಯ ಕಾಲದ ಬಾವಿಗಳಿಗೂ ಕಾಯಕಲ್ಪ ನೀಡಲಾಗುತ್ತಿದೆ. ಬೇರೆ ಪಟ್ಟಣಗಳಿಗೆ ಹೊಲಿಸಿದರೆ ಅಂತರ್ಜಲದ ಪ್ರಮಾಣ ಉತ್ತಮವಾಗಿದ್ದು, ಕೃಷ್ಣಾ ಮತ್ತು ಭೀಮಾ ಎರಡೂ ನದಿಗಳು ಶಹಾಪುರಕ್ಕೆ ವರದಾನವಾಗಿವೆ. ಸಾರ್ವಜನಿಕರು ನೀರನ್ನು ಅನಗತ್ಯವಾಗಿ ಪೋಲು ಮಾಡದೇ ಸದ್ಬಳಕೆ ಬಗ್ಗೆ ಕಾಳಜಿ ವಹಿಸಬೇಕು. ಪುರಸಭೆಗೆ ಸಮರ್ಪಕವಾಗಿ ಕರಪಾವತಿ ಮಾಡುವುದು, ನೀರಿನ ನಳಗಳಿಗೆ ನಲ್ಲಿಗಳನ್ನು ಅಳವಡಿಸುವುದು ಸೇರಿದಂತೆ ಜವಾಬ್ದಾರಿಗಳ ಬಗ್ಗೆ ಸಾರ್ವಜನಿಕರ ಸಹಕಾರ ಅಗತ್ಯವೆಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

