ಗುಲ್ಬರ್ಗಾ

ಘರ್ಷಣೆ: ಇಬ್ಬರು ಪೊಲೀಸರು ಸೇರಿ 12 ಮಂದಿಗೆ ಗಾಯ

Published On :

ಶಹಾಬಾದ್:  ವಾಡಿ ಪಟ್ಟಣದಲ್ಲಿ ಸೋಮವಾರ ನಡೆದ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ಮಂಗಳವಾರ ಮತ್ತೆ ವಿಕೋಪಕ್ಕೆ ತಿರುಗಿತು. ಎರಡು ಗುಂಪುಗಳ ನಡುವಿನ ಘರ್ಷಣೆಗೆ ಕಾರಣವಾಗಿ ಕೋಮು ಗಲಭೆಯಾಗಿ ಪರಿವರ್ತನೆಯಾಗಿದ್ದರಿಂದ ಪೊಲೀಸ್ ಠಾಣೆ ಬಳಿ ಗುಂಪುಗೂಡಿದವರನ್ನು ಚದುರಿಸಲು ಪೊಲೀಸರು ಲಘ ಲಾಠಿ ಪ್ರಹಾರ ನಡೆಸಿದರು. ಪೊಲೀಸರ ಮೇಲೆ ಕಲ್ಲು ತೂರಾಟ ನಡೆದು ಇಬ್ಬರು ಪೊಲೀಸರು ಸೇರಿದಂತೆ ಒಟ್ಟು  12 ಜನರಿಗೆ ಗಾಯಗಳಾಗಿವೆ.
ಹಳೆಯ ಕ್ಷುಲ್ಲಕ ಕಾರಣಕ್ಕೆ ಸೋಮವಾರ ಸಂಜೆ ಚಂದ್ರಿಕಾ ಬಾರ್ ಬಳಿ ನಡೆದ ಜಗಳದಿಂದ ಒಂದು ಗುಂಪಿನ ಜನರು  ಡಾ. ಅಂಬೇಡ್ಕರ್ ವೃತ್ತದ ಹತ್ತಿರದ ಅಯ್ಯಂಗಾರ್ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ನಡೆಸಿದ್ದರು. ಈ ಬಗ್ಗೆ ಸೋಮವಾರ ಪೊಲೀಸ್ ಠಾಣೆಯಲ್ಲಿ ಮುಖಂಡರಾದ ರಹೇಮಾನ್ ಖುರೇಶಿ, ಶರಣು ನಾಟೀಕಾರರವರು ಪರಸ್ಪರ ಸಂಧಾನ ನಡೆಸಿದ್ದರು.
ಮರುದಾಳಿ: ಮಂಗಳವಾರ ಸಂಜೆ ಮಾರುಕಟ್ಟೆ ಪ್ರದೇಶದ ಬಳಿಯ ಮಲ್ಲಿಕಾರ್ಜುನ ಮಂದಿರದ ಬಳಿ ಸೋಮವಾರ ಹೊಡೆದ ತಿಂದ ವ್ಯಕ್ತಿ ಗುಂಪಿನವರು ಇನ್ನೊಂದು ಗುಂಪಿಗೆ ಸೇರಿದ ವ್ಯಕ್ತಿಗೆ ಹೊಡೆದಿದ್ದರಿಂದ ಎರಡು ಗುಂಪಿನ ಬೆಂಗಲಿಗರು ಪರಸ್ಪರ ಘರ್ಷಣೆಗೆ ಇಳಿದು, ಎರಡು ಗುಂಪುಗಳು ಕಲ್ಲು ತೂರಾಟ, ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದರಿಂದ ಹಲವರಿಗೆ ಗಾಯವಾಯಿತು.
ಗಾಯ: ಸೋಮವಾರ ಹಲ್ಲೆ ನಡೆಸಿದವರ ಮೇಲೆ ಪೊಲೀಸರು ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದ  ಒಂದು ಕೋಮಿನ ನೂರಾರು ಜನ ಠಾಣೆ ಬಳಿ ಜಮಾಯಿಸಿದ್ದರಿಂದ ಅವರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಕುಪಿತ ಗುಂಪು ಕಲ್ಲು ತೂರಾಟ ನಡೆಸಿತು. ಇದರಿಂದ ಈಶ್ವರ ಜಾಧವ, ಶಿವಾನಂದ ಎಂಬ ಇಬ್ಬರು ಪೊಲೀಸರು ಸೇರಿದಂತೆ ಸಂಪೂರ್ಣ ಪ್ರಕರಣದಲ್ಲಿ ಸುಮಾರು 12 ಜನರಿಗೆ ಗಾಯವಾಗಿವೆ. ಇಬ್ಬರನ್ನು ಪಟ್ಟಣದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಗುಲ್ಬರ್ಗಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಗಿದೆ.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.