ಗುಲ್ಬರ್ಗಾ

ನಂದಗೋಕುಲದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ

Published On :

ಹುಣಸಗಿ: ಪಟ್ಟಣದ ವಿದ್ಯಾನಗರದ ನಂದಗೋಕುಲ ಶಿಶು ವಿಹಾರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಚಿಣ್ಣರು ಕೃಷ್ಣ ಹಾಗೂ ರುಕ್ಮಿಣಿಯ ವೇಷ ಧರಿಸಿ, ಜೋಕಾಲಿಯಲ್ಲಿ ಕುಳಿತು ಸಂಭಿಮಿಸಿದರು.
ಮುಖ್ಯ ಶಿಕ್ಷಕಿ ನೀಲಾಂಬಿಕಾ ಶ್ರೀಕೃಷ್ಣನ ಕತೆಗಳನ್ನು ಹೇಳಿದರು. ಚಿಣ್ಣರು ರಾಧಾ ಕೃಷ್ಣರ ಉಡುಪುಗಳನ್ನು ಧರಿಸಿ, ಕೃಷ್ಣನ ಕುರಿತ ಹಾಡುಗಳಿಗೆ ಹೆಜ್ಜೆ ಹಾಕಿದರು.
ಶಿಕ್ಷಕಿ ಗಂಗಮ್ಮ ಮತ್ತು ಲಕ್ಷ್ಮೀ ಅವರು ಕೃಷ್ಣ ದೇವರ ಬಾಲ್ಯದ ದಿನಗಳ ಬಗ್ಗೆ ತಿಳಿಸಿಕೊಟ್ಟರು. ಈ ಸಂದರ್ಭದಲ್ಲಿ ಪಾಲಕರು ಸೇರಿದಂತೆ ಇತರರು ಇದ್ದರು. ಅರಕೇರಾ ಬಸವೇಶ್ವರ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ರಾಧಾ ಕೃಷ್ಣರ ಛದ್ಮವೇಷಗಳನ್ನು ಹಾಕಲಾಗಿತ್ತು. ಶ್ರೀಕೃಷ್ಣ ಜನ್ಮಾಷ್ಟಮಿಯ ಬಗ್ಗೆ ಶಿಕ್ಷಕ ಬಸವರಾಜ ಸಜ್ಜನ್ ಮಾತನಾಡಿದರು.
 ಸಂಸ್ಥೆಯ ಅಧ್ಯಕ್ಷೆ ಮಹಾದೇವಿ ಪಲಗಲದಿನ್ನಿ, ಸಂಸ್ಥಾಪಕ ಬಸವರಾಜ ಪಲಗಲದಿನ್ನಿ, ಶಿಕ್ಷಕಿಯರಾದ ಪದ್ಮಾ, ಪರಿಮಳಾ, ಪುಷ್ಪ ಇತರರು ಇದ್ದರು. ನಂತರ ಮಕ್ಕಳಿಗೆ ಸಿಹಿ ಹಂಚಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.