31ರಂದು ಸಪ್ತ ಕೃತಿಗಳ ಲೋಕಾರ್ಪಣೆ
ಯಾದಗಿರಿ,: ವಿಶ್ವಬಂಧು ಸೇವಾ ಪ್ರತಿಷ್ಠಾನ ಹಾಗೂ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತಿನ ಜಿಲ್ಲಾ ಘಟಕ ಆಶ್ರಯದಲ್ಲಿ ಆ.31ರಂದು ಮ.12.30ಕ್ಕೆ ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಸಪ್ತ ಕೃತಿಗಳ ಲೋಕಾರ್ಪಣೆ, ಎನ್ಜಿಒ ಸದಸ್ಯರಿಗೆ ಸನ್ಮಾನ ಮತ್ತು ತತ್ವಪದ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಿಕ್ಷಕರ ಪ್ರತಿಭಾ ಪರಿಷತ್ತಿನ ಜಿಲ್ಲಾಧ್ಯಕ್ಷ ಸಾಹೇಬಗೌಡ ಬಿರಾದಾರ ತಿಳಿಸಿದ್ದಾರೆ.
ಸಾನ್ನಿಧ್ಯವನ್ನು ಅಬ್ಬೆತುಮಕೂರ ಮಠದ ಡಾ. ಗಂಗಾಧರ ಸ್ವಾಮೀಜಿ ವಹಿಸುವರು. ಗುರುಮಠಕಲ್ ಖಾಸಾಮಠದ ಶಾಂತವೀರ ಸ್ವಾಮೀಜಿ, ದಾಸಬಾಳ ಮಠದ ವೀರೇಶ್ವರ ಸ್ವಾಮೀಜಿ ಸಮ್ಮುಖ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ ಉದ್ಘಾಟಿಸಲಿದ್ದಾರೆ. ಕರ್ನಾಟಕ ಲಲಿತ ಕಲಾ ವಿಶ್ವವಿದ್ಯಾಲಯ ಪ್ರಾದೇಶಿಕ ಕಚೇರಿ ವಿಶೇಷ ಅಧಿಕಾರಿ ಎಸ್.ಸಿ. ಪಾಟೀಲ ಹಾಗೂ ಡಿಡಿಪಿಐ ರಾಮಾಂಜನೆಯ ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ.
ಕೃತಿಗಳ ಪರಿಚಯ: ಆಧುನಿಕ ತತ್ವಪದಕಾರ ಯಮನೂರೇಶ ಬಿರಾದಾರ ರಚಿಸಿದ ತತ್ವ ಪದಗಳ ಗುರು ಗೀತಾಮೃತ ಕೃತಿ, ಅರಿವಿನ ವಿಚಾರಗಳ ತತ್ವ ಜ್ಞಾನಾಮೃತ ಹಾಗೂ ಬೋರಗಿ ಭೀಮಾಶಂಕರ ರಚಿಸಿದ ಕೈವಲ್ಯ ಪದ್ಧತಿಗೆ ಟೀಕಾ ತಾತ್ಪರ್ಯ ಎಂಬ ಮೂರು ಕೃತಿಗಳ ಕುರಿತು ಉಪನ್ಯಾಸಕ ವೆಂಟಕರಾವ ಕುಲಕರ್ಣಿ ಪರಿಚಯಿಸಲಿದ್ದಾರೆ.
ಶಿಕ್ಷಕಿ ಭಾಗ್ಯವತಿ ಕೆಂಭಾವಿ ರಚಿಸಿದ ಸಿರಿ ಸೊಡರು ಎಂಬ ಕವನ ಸಂಕಲನ ಕುರಿತು ಚಂದ್ರಕಾಂತ ಕರದಳ್ಳಿ, ಸಾಹೇಬಗೌಡ ಬಿರಾದಾರ ರಚಿಸಿದ ಅಂತರಂಗದ ಕೂಗು ಕವನ ಸಂಕಲನ ಹಾಗೂ ಎನ್ಟಿಎಸ್ಇ ಪರೀಕ್ಷಾ ಮಾರ್ಗದರ್ಶಿ ಪುಸ್ತಕ ಕುರಿತು ಡಾ. ಗಾಳೆಪ್ಪ ಪೂಜಾರಿ, ನವೀನಕುಮಾರ ದುಪ್ಪಲ್ಲಿ ರಚಿಸಿದ ಕಾಂತಿ ದೀವಿಗೆ ಎಂಬ ವಿಚಾರಗಳ ಲೇಖನ ಕೃತಿ ಕುರಿತು ಡಾ. ಭೀಮರಾಯ ಲಿಂಗೇರಿ ಪರಿಚಯಿಸಲಿದ್ದಾರೆ.
ಸನ್ಮಾನ: ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆಗೆ ಆಯ್ಕೆಯಾದ ಪಿ.ಕಿಷ್ಟಪ್ಪ, ಮಹಿಪಾಲರಡ್ಡಿ, ಯಮರೆಡ್ಡಿ ಮುಂಡಾಸ ಹಾಗೂ ಶರಣಗೌಡ ಪಾಟೀಲ ಆದೆಪ್ಪ ಬಾಗ್ಲಿ, ಸಿದ್ರಾಮಪ್ಪ ದುಪ್ಪಲ್ಲಿ, ಶಶಿಕಾಂತ ಕಶೆಟ್ಟಿ, ಬಸವರಾಜ ಯಡ್ಡಳ್ಳಿ ಅವರನ್ನು ಸನ್ಮಾನಿಸಲಾಗುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

