'ಅಕಾಡೆಮಿಗಳ ನೇಮಕದಲ್ಲಿ ಹೈ.ಕ. ಭಾಗಕ್ಕೆ ಪ್ರಾತಿನಿಧ್ಯ ನೀಡಿ'
ಗುರುಮಠಕಲ್:ಚಳಿಗಾಲದ ಅಧಿವೇಶನದ ನಂತರ ರಾಜ್ಯದ ಎಲ್ಲಾ ಅಕಾಡೆಮಿಗಳಿಗೂ ಅಧ್ಯಕ್ಷ ಹಾಗೂ ಸದಸ್ಯರನ್ನು ನೇಮಿಸಲಾಗುವುದೆಂದು ಮಾನ್ಯ ಮುಖ್ಯಮಂತ್ರಿಗಳು ಹೇಳಿದ್ದು ಸ್ವಾಗತಾರ್ಹ. ಅದರೆ ಆ ನೇಮಕಗಳಲ್ಲಿ ಹೈ.ಕ. ಭಾಗದ ಗುಲ್ಬರ್ಗ, ಯಾದಗಿರಿ, ಬೀದರ್, ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲೆಗಳಿಗೆ ಸ್ಥಾನಮಾನ ಕಲ್ಪಿಸಬೇಕೆಂದು ಸಗರನಾಡು ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನಳ್ಳಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ರಾಜ್ಯದ ವಿವಿಧ ಅಕಾಡೆಮಿಗಳಿಗೆ ಇದುವರೆಗೂ ಈ ಭಾಗದ ಪ್ರತಿಭಾವಂತ ಸಾಹಿತಿಗಳನ್ನು, ಸಾಧಕರನ್ನು ಚಿಂತಕರನ್ನು ಗುರ್ತಿಸುವ ಕಾರ್ಯ ಸುಮಾರು ದಿನಗಳಿಂದ ನಡೆಯುತ್ತಲೇ ಇಲ್ಲ ಎಂದು ವಿವರಿಸಿದರು.
ಸರ್ಕಾರ ಈ ಬಾರಿ ಸಾಂಸ್ಕೃತಿಕ ನೀತಿ ನಿರೂಪಣಾ ಸಮಿತಿ ರಚಿಸಿದ್ದು, ಆ ಮೂಲಕ ಈ ಭಾಗದ ಪ್ರತಿಭಾವಂತರಿಗೆ, ಹೊಸ ಪ್ರತಿಭೆಗಳಿಗೆ, ಅವಕಾಶ ವಂಚಿತರಿಗೆ, ವಿವಿಧ ಅಕಾಡೆಮಿಗಳ ಅಧ್ಯಕ್ಷ ಹಾಗೂ ಸದಸ್ಯ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಹಾಗೆಯೇ ಸರ್ಕಾರ ಈಗಾಗಲೇ ಬ್ಯಾರಿ, ತುಳು, ಕೊಂಕಣಿ ಮತ್ತು ಅರೆಭಾಷೆ ಅಕಾಡೆಮಿ ಸ್ಥಾಪಿಸಿದಂತೆ ಕನ್ನಡ ನಾಡಿನಲ್ಲಿ ಸಮಾಜೋಧಾರ್ಮಿಕ ಕ್ರಾಂತಿಯೆಂದೇ ಹೇಳಲ್ಪಟ್ಟ ಕಲ್ಯಾಣ ಕ್ರಾಂತಿಯ ಪ್ರತಿ ಫಲ ವಚನ ಸಾಹಿತ್ಯ ಹುಟ್ಟಿದ್ದು, ಸಮಾಜದಲ್ಲಿ ವೈಚಾರಿಕತೆ ಬಿತ್ತಿದ ಸ್ವರ ವಚನ ತತ್ವಪದಗಳ ಪ್ರಕಟಣೆ ಹಾಗೂ ಸಂರಕ್ಷಣೆಗಾಗಿ ಹಾಗೂ ವಚನ ಸಾಹಿತ್ಯದ ಪ್ರಚಾರಕ್ಕಾಗಿ ಸರಕಾರವೇ ಕೂಡಲೇ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿಯನ್ನು ಸ್ಥಾಪಿಸಬೇಕು. ಆ ಮೂಲಕ ಬಸವಾದಿ ಶರಣರ ಮತ್ತು ಬಸವಾದಿ ಪ್ರಮುಖರ ತತ್ವ ಸಂದೇಶಗಳನ್ನು ನಾಡಿಗೆ ಪರಿಚಯಿಸುವಲ್ಲಿ ಆ ಅಕಾಡೆಮಿ ಕಾರ್ಯ ನಿರ್ವಹಿಸಬೇಕು ಎಂದಿದ್ದಾರೆ. ಆ ಹಿನ್ನೆಲೆಯಲ್ಲಿ ಮಾನ್ಯ ಮುಖ್ಯ ಮಂತ್ರಿಗಳು ಶೀಘ್ರವೇ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿಯನ್ನು ಸ್ಥಾಪಿಸಬೇಕು ಎಂದು ಅಂಗಡಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

