ಗುಲ್ಬರ್ಗಾ

'ಶಹೀದ್‌ಗಳ ಬಗ್ಗೆ ವಾಸ್ತವಿಕತೆ ಬಿಂಬಿಸಬೇಕು'

Published On :

ಸುರಪುರ: ಇಲ್ಲಿಯ ಗರುಡಾದ್ರಿ ಕಲಾಮಂದಿರದಲ್ಲಿ ಟಿಪ್ಪುಸುಲ್ತಾನ್ ಸೇವಾಸಂಘ ಹಾಗೂ ಮುಸ್ಲಿಂ ಯುವಕ ಸಂಘ ಭಾನುವಾರ ಟಿಪ್ಪುಸುಲ್ತಾನ 264ನೇ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಟಿಪ್ಪುಸುಲ್ತಾನ್ ಸಂಘಟನೆ ರಾಜ್ಯಾಧ್ಯಕ್ಷ ಸರ್ದಾರ ಅಮೀದ್ ಖುರೇಶಿ ಮಾತನಾಡಿ ಬ್ರಿಟಿಷರ ವಿರುದ್ಧ ಸಮರ ಸಾರಿ ದೇಶಕ್ಕಾಗಿ ಹೋರಾಡಿ ಹುತಾತ್ಮನಾದ ಟಿಪ್ಪುಸುಲ್ತಾನ್ ಸಂಸ್ಥಾನ ಮತ್ತು ಅವರ ವಂಶಸ್ಥರ ಸ್ಥಿತಿ ಶೋಚನೀಯವಾಗಿದೆ. ನಿಜವಾದ ಹೋರಾಟಗಾರರು ಮತ್ತು ಶಹೀದ್‌ಗಳ ಬಗ್ಗೆ ವಾಸ್ತವಿಕತೆಯನ್ನು ಬಿಂಬಿಸದಿರುವುದು ಸಂಶೋಧಕರು ಇತಿಹಾಸಕ್ಕೆ ಮಾಡಿದ ಅಪಚಾರವಾಗಿದೆ. ಇಂತಹ ಅಪ್ರತಿಮ ಶೂರನ ಸ್ಮರಣಾರ್ಥವಾಗಿ ರಾಜ್ಯದಲ್ಲಿ ವಿಶ್ವವಿದ್ಯಾಯಲಯ ಸ್ಥಾಪನೆಗೆ ಸರಕಾರ ಮುಂದಾಗದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ರಜಾ ಮದನಗೋಪಾಲ ನಾಯಕ ಟಿಪ್ಪುಸುಲ್ತಾನ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ಮಳಖೇಡದ ಸಜ್ಜಾದ ನರ್ಸಿನ್ ಸಯದ್ ಶಹಾ ಮೊಹ್ಮದ್ ಮುಸ್ತಾಫ್ ಖಾದ್ರಿ ಮಾತನಾಡಿದರು. ಟಿಪ್ಪು ಸುಲ್ತಾನ್ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ತಲಕಾಡು ಚಿಕ್ಕರಂಗೇಗೌಡ, ಸಂಘಟನೆಯ ರಾಜ್ಯ ಕಾರ್ಯದರ್ಶಿ ದಾವುದ್ ಇಕ್ಬಾಲ್ ಸಾಬ್, ಅರಸು ಮನೆತನದ ರಾಜಾ ವೆಂಕಟಪ್ಪ ನಾಯಕ ತಾತಾ, ಪುರಸಭೆ ಅಧ್ಯಕ್ಷ ದೇವಿಂದ್ರಪ್ಪ ಕಳ್ಳಿಮನಿ, ಮಹ್ಮದ್ ಸಲೀಂ, ಬಿಸಿಎನ್ ದೇಶಮುಖ್, ಡಾ.ಶಫೀ ಉಜ್ಜಮಾ, ಕಿಶೋರ್ ಚಂದ್ ಜೈನ್, ಡಿವೈಎಸ್ಪಿ ಎಸ್.ಬಿ. ಕಟ್ಟಿಮನಿ, ಪಿಐ. ಅಸ್ಲಾಂ ಭಾಷಾ, ಅಬ್ದುಲ್ ಗಫಾರ್ ನಗನೂರಿ, ಅಪ್ಸರ್ ಹುಸೇನ್ ದಲಾಲ, ಅರ್ಷದ ದಖನಿ, ಮಹ್ಮದ್ ಮನವರ್ ಅರಕೇರಿ, ಮಹ್ಮದ್ ಮೌಲಾ ಸೌದಾಗರ್ ಇತರರಿದ್ದರು.
ಕಾರ್ಯಕ್ರಮಕ್ಕೂ ಮೊದಲು ಟಿಪ್ಪುಸುಲ್ತಾನ್ ವೃತ್ತದಿಂದ ಪಟ್ಟಣದ ಮುಖ್ಯರಸ್ತೆಗಳಲ್ಲಿ ಟಿಪ್ಪುಸುಲ್ತಾನ್ ಭಾವಚಿತ್ರ ಮೆರವಣಿಗೆ ಮಾಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.