ಗುಲ್ಬರ್ಗಾ

ಪುತ್ಥಳಿ ನಿರ್ಮಾಣಕ್ಕೆ ಅಭಿಮಾನಿಗಳ ಒಮ್ಮತದ ನಿರ್ಧಾರ

Published On :

ಗುಲ್ಬರ್ಗ: ಕೋಲಿ ಸಮಾಜದ ಧೀಮಂತ ನಾಯಕ ವಿಠಲ ಹೇರೂರ ಪುತ್ಥಳಿಯನ್ನು ಅವರ ಸ್ವಗ್ರಾಮವಾದ ದೇವಲಗಾಣಗಾಪುರದ ಸಂಗಮ ಮಾರ್ಗದಲ್ಲಿರುವ ತಿಪ್ಪಣ್ಣ ಕಂಠೆಪ್ಪ ಹೇರೂರ ಪ್ರೌಢಶಾಲಾ ಆವರಣದ ಖುಲ್ಲಾ ನಿವೇಶನದಲ್ಲಿ ಪ್ರತಿಷ್ಠಾಪನೆ ಮಾಡಲು ಅವರ ಅಭಿಮಾನಿಗಳು ನಿರ್ಧರಿಸಿದ್ದಾರೆ.
ಕೋಲಿ ಸಮಾಜಕ್ಕಾಗಿಯೇ ಅವರ ಜೀವನವನ್ನು ಮುಡಿಪಾಗಿಟ್ಟಿರುವ ಹೇರೂರ ಅವರ ಸಮಾದಿ ಮತ್ತು ಪುತ್ಥಳಿಯನ್ನು ತಿಪ್ಪಣ್ಣ ಕಂಠೆಪ್ಪ ಹೇರೂರ ಪ್ರೌಢಶಾಲಾ ಆವರಣದ ಖುಲ್ಲಾ ನಿವೇಶನದಲ್ಲಿ ಪ್ರತಿಷ್ಠಾಪನೆ ಮಾಡಲು ಅವರ ಕುಟುಂಬದ ಸದಸ್ಯರು ಹಾಗೂ ಅಭಿಮಾನಿಗಳು ಸಮ್ಮತಿ ನೀಡಿದ್ದಾರೆಂದು ಹೇರೂರು ಅಭಿಮಾನಿಗಳಾದ ನಾಮದೇವ ಕಡಕೋಳ, ಶಂಕರ ಮ್ಯಾಕೇರಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಭಂಡಾಯ ವಚನಕಾರರಾದ ಅಂಬಿಗರ ಚೌಡಯ್ಯ ವಿಚಾರಗಳನ್ನು ಜಯಂತಿ ಮಾಡುವ ಮೂಲಕ ಹಳ್ಳಿಯಿಂದ ರಾಜಧಾನಿಯವರೆಗೂ ಪ್ರಚಾರ ಮಾಡಿದ್ದರು. ವಿಧಾನ ಪರಿಷತ್ ಮುಖ್ಯ ಸಚೇತಕರಾದಾಗ ಚೌಡಯ್ಯ ಹೆಸರಿನಲ್ಲಿ ಅಧ್ಯಯನ ಪೀಠಗಳನ್ನು ಮಾಡಲು ಸರ್ಕಾರಕ್ಕೆ ಒತ್ತಾಯಿಸಿದರು. ಇಂದು ಅನೇಕ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಪೀಠ ಪ್ರಾರಂಭಿಸಲಾಗಿದೆ. ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಸ್ವಂತ ಕಟ್ಟಡ ಹೊಂದಿ ಅಂಬಿಗರ ಚೌಡಯ್ಯ ಅಧ್ಯಯನ ನಡೆಸಲಾಗುತ್ತಿದೆ ಎಂದು ಹೇಳಿದರು.
ಕೋಲಿ ಸಮಾಜದ ಒಳಿತಿಗಾಗಿ ಪರಿಶಿಷ್ಟ ಪಂಗಡದಲ್ಲಿ ಸೇರಿಸಲು ರಾಷ್ಟ್ರ ಮತ್ತು ರಾಜ್ಯ ನಾಯಕರನ್ನು ಸೇರಿಸಿ ನಿರಂತರ ಹೋರಾಟ ಮಾಡಿ ವಿಧಾನ ಪರಿಷತ್ತಿನಲ್ಲಿ ಚರ್ಚೆ ನಡೆಸಿದ್ದಾರೆ. ಅವರ ನಿಧನದಿಂದ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಡಾ. ಬಿ.ಪಿ. ಬುಳ್ಳಾ, ಶಿವಕುಮಾರ್ ನಾಡಗೇರ್, ಬಸವರಾಜ ಹರವಾಳ, ನಾಗೇಶ ಕಟ್ಟಿ, ಸಾಯಬಣ್ಣ ತಳವಾರ, ಶಾಂತಕುಮಾರ್, ಶರಣು ಅತನೂರ ಇತರರು ಉಪಸ್ಥಿತರಿದ್ದರು.

--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.