ಗುಲ್ಬರ್ಗಾ

ಎಸ್ಮಾ ಕಾಯ್ದೆ ಅಂಗೀಕಾರಕ್ಕೆ ಯುಟಿಯುಸಿ ತೀವ್ರ ಖಂಡನೆ

Published On :

ಗುಲ್ಬರ್ಗ: ನೀರು, ವಿದ್ಯುತ್, ಸಾರಿಗೆ ಮುಂತಾದ ಅತ್ಯಾವಶ್ಯಕ ಸೇವೆಗಳಲ್ಲಿ ತೊಡಗಿರುವ ಸಿಬ್ಬಂದಿ ನೌಕರರು ಮುಷ್ಕರ ನಡೆಸುವಂತಿಲ್ಲ, ನಡೆಸಿದರೆ ವಾರಂಟ್ ಇಲ್ಲದೆ ಮುಖಂಡರನ್ನು, ನೌಕರರನ್ನು ಬಂಧಿಸಲು ಹಾಗೂ ಇದಕ್ಕಾಗಿ ಜೈಲು ಶಿಕ್ಷೆ ಮತ್ತು 5 ಸಾವಿರ ದಂಡ ವಿಧಿಸಲು ಅವಕಾಶ ಕಲ್ಪಿಸುವ ಕರ್ನಾಟಕ ಅತ್ಯಾವಶ್ಯಕ ಸೇವೆಗಳ ನಿರ್ವಹಣಾ ಮಸೂದೆ (ಎಸ್ಮಾ)ಯನ್ನು ಬೆಳಗಾವಿ ವಿಧಾನಸಭೆಯಲ್ಲಿ ಅಂಗೀಕರಿಸಿರುವುದನ್ನು ಆಲ್ ಇಂಡಿಯಾ ಯುಟಿಯುಸಿ ಖಂಡಿಸಿದೆ.
ಮುಷ್ಕರದ ಹಕ್ಕನ್ನು ಕಿತ್ತುಕೊಳ್ಳುವ ಮೂಲಕ ದುಡಿಯುವ ಜನರ ಹೋರಾಟಗಳನ್ನು ದಮನ ಮಾಡಲು ಮುಂದಾಗಿರುವ ಸರ್ಕಾರದ ಕ್ರಮವು ಜನತಂತ್ರ ವಿರೋಧಿಯು ಹಾಗೂ ಪ್ಯಾಸಿಸ್ಟ್ ಕ್ರಮ ಎಂದು ಅಭಿಪ್ರಾಯಪಟ್ಟಿದೆ.
ಮುಷ್ಕರ ಅನಿವಾರ್ಯ: ನೌಕರರು ಹಾಗೂ ಕಾರ್ಮಿಕರು ನ್ಯಾಯೋಚಿತ ಬೇಡಿಕೆಗಳನ್ನು ಪರಸ್ಪರ ತಿಳುವಳಿಕೆ ಹಾಗೂ ಸೌಹಾರ್ದತಯುತವಾದ ಚೌಕಾಸಿ ಮೂಲಕ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಇಚ್ಛಿಸುತ್ತಾರೆ. ಆದರೆ ಆಡಳಿತ ಮಂಡಳಿಗಳು, ಮಾಲೀಕರು ಆಳುವ ವರ್ಗಗಳು ಈ ನ್ಯಾಯೋಚಿತ ಬೇಡಿಕೆಗಳನ್ನು ಪರಿಗಣಿಸಿ ಪರಿಹರಿಸಲು ಮುಂದಾಗದೆ ನಿರ್ಲಕ್ಷಿಸಿದಾಗ ದುಡಿಯುವ ಜನರು ಅನಿವಾರ್ಯವಾಗಿ ಮುಷ್ಕರದ ಹಾದಿಗೆ ತಳ್ಳಲ್ಪಡುತ್ತಾರೆ. ಇಂದು ಅತ್ಯಾವಶ್ಯಕ ಸೇವೆಗಳೆಂದು ಬಗೆಯುವ ಕ್ಷೇತ್ರಗಳಲ್ಲಿ ಸಿಬ್ಬಂದಿ ತೀವ್ರ ಅಭದ್ರತೆ ಹಾಗೂ ಕಿರುಕುಳವನ್ನು ಎದುರಿಸುತ್ತಿದ್ದಾರೆಂದು ತಿಳಿಸಿದೆ.
ಸರ್ಕಾರವು ಕೂಡಲೇ ಈ ಕರಾಳ ಎಸ್ಮಾ ಕಾಯ್ದೆಯನ್ನು ಹಿಂತೆಗೆದುಕೊಳ್ಳಬೇಕು ಮತ್ತು ಇಂತಹ ದಮನಕಾರಿ ಕಾಯ್ದೆಯನ್ನು ಹಿಮ್ಮೆಟ್ಟಿಸಲು ಎಲ್ಲ ಕಾರ್ಮಿಕ ಸಂಘಟನೆಗಳು ಒಂದಾಗಿ ಐಕ್ಯ ಹೋರಾಟವನ್ನು ಬೆಳೆಸಲು ಮುಂದಾಗಬೇಕೆಂದು ಕೆ. ಸೋಮಶೇಖರ್ ಯಾದಗಿರಿ ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.

ಇಂದು ಕಾರ್ಯಾಗಾರ
ಗುಲ್ಬರ್ಗ:  ಬಿಹಾರದ ಸೂಪರ್ 30 ಯಶಸ್ವಿನ ಮಾದರಿಯಲ್ಲಿ ಗುಲ್ಬರ್ಗದಲ್ಲಿ ಡಿ.8ರಂದು ತಪಸ್ ಯೋಜನೆಯಡಿ ಪರೀಕ್ಷಾರ್ಥಿಗಳಿಗೆ ಉಚಿತ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಅಭ್ಯರ್ಥಿಗಳು ಕಂಪು ಕಾರ್ಯಾಲಯ, ಐವಾನ್ ಇ- ಶಾಹಿ ಅತಿಥಿ ಗೃಹದ ಮುಂಭಾಗ ಗುಲ್ಬರ್ಗ ಇಲ್ಲಿಗೆ ಖುದ್ದಾಗಿ ಇಲ್ಲವೇ 08472- 273810ಗೆ ಸಂಪರ್ಕಿಸಬಹುದು. ಮಾಹಿತಿಗಾಗಿ ಬಸವರಾಜ ಘಾಣೂರೆ 9448320142, ಎನ್.ಟಿ. ರಂಗೋಲಿ- 9902550423ಗೆ ಸಂಪರ್ಕಿಸಬಹುದು ಎಂದು ಎಚ್.ಸಿ. ಪಾಟೀಲ್ ಕೋರಿದ್ದಾರೆ.

ಇಂದು ಜನಸ್ಪಂದನ
ಚಿತ್ತಾಪುರ: ತಾಲೂಕಿನ ಮಾಗಲತ್ತಿ ಗ್ರಾಪಂ ಕಚೇರಿಯಲ್ಲಿ ಡಿ.7ರಂದು ಶಾಸಕ ಪ್ರಿಯಾಂಕ್ ಖರ್ಗೆ ಅಧ್ಯಕ್ಷತೆಯಲ್ಲಿ ಜನಸ್ಪಂದನ ಸಭೆ ಜರುಗಲಿದೆ ಎಂದು ತಹಸೀಲ್ದಾರ್ ಮಲ್ಲೇಶ ತಂಗಾ ತಿಳಿಸಿದ್ದಾರೆ.
ಸಭೆಗೆ ಗ್ರಾಪಂ ಅಧಿಕಾರಿಗಳು ಹಾಗೂ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸುತ್ತಿದ್ದು, ಗ್ರಾಪಂ ವ್ಯಾಪ್ತಿಯ ಜನರು ಸಭೆಯಲ್ಲಿ ಭಾಗವಹಿಸಿ ತಮ್ಮ ಕುಂದು ಕೊರತೆಗಳ ಬಗ್ಗೆ ಚರ್ಚಿಸಿ ಪ್ರಯೋಜನ ಪಡೆದುಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.