ಷಣ್ಮುಖಶ್ರೀ ಪಲ್ಲಕ್ಕಿ ಉತ್ಸವ
ಜೇವರ್ಗಿ: ಷಣ್ಮುಖ ಶ್ರೀ ತಪಸ್ಸಿನ ಸ್ಥಳವಾದ ಜೋಗಿಕೊಳ್ಳದಲ್ಲಿ ನಡೆಯಲಿರುವ ಛಟ್ಟಿ ಉತ್ಸವ ನಿಮಿತ್ತ ಸೋಮವಾರ ಪಟ್ಟಣದ ಷಣ್ಮುಖಶ್ರೀ ಮಠದಿಂದ ಭಕ್ತರು ತಾಲೂಕಿನ ಕೋಳಕೂರ ಗ್ರಾಮದವರೆಗೆ ಷಣ್ಮುಖ ಶಿವಯೋಗಿ ಪಲ್ಲಕ್ಕಿ ಉತ್ಸವ ನಡೆಸಿದರು. ಪೀಠಾಧಿಪತಿ ವಿಜಯಕುಮಾರಶ್ರೀ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದರು. ಛಟ್ಟಿ ಉತ್ಸವದ ನಿಮಿತ್ತ ಬಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೋಳಕೂರದ ಜೋಗಿ ಕೊಳ್ಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜಯಕುಮಾರ ಶ್ರೀ ನೇತೃತ್ವ ವಹಿಸಿದ್ದರು. ವಿವಿಧ ವಾದ್ಯ ವೈಭವಗಳು ಪಲ್ಲಕ್ಕಿ ಉತ್ಸವದ ಮೆರಗನ್ನು ಇಮ್ಮಡಿಸಿದ್ದವು.
ರಟಕಲ್ನ ನೀಲಕಂಠಶ್ರೀ ಸಾನಿಧ್ಯ ವಹಿಸಿದ್ದರು. ಪಲ್ಲಕ್ಕಿ ಉತ್ಸವದಲ್ಲಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಜಿಪಂ ಮಾಜಿ ಸದಸ್ಯ ಅಶೋಕ ಸಾಹು ಗೋಗಿ, ಷಣ್ಮುಖಪ್ಪ ಸಾಹು ಗೋಗಿ, ಬಸ್ಸಯ್ಯಸ್ವಾಮಿ ಸ್ಥಾವರಮಠ, ಶಿವಶರಣಪ್ಪಗೌಡ, ಶಿವಾನಂದ, ಮಲ್ಲಶೆಟ್ಟೆಪ್ಪಗೌಡ ಹಿರೇಗೌಡ, ವಿಶ್ವನಾಥ ಕಲ್ಲಾ, ದೇವಿಂದ್ರಪ್ಪ ಸೀರಿ, ಚಂದ್ರಶೇಖರ ಸೀರಿ, ಹಂಪಣ್ಣಗೌಡ ಹಾಲಗಡ್ಲಾ, ಶರಣಪ್ಪ, ಬಸವರಾಜ ಹಳಿಮನಿ, ರವಿ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

