ಕಾಲುಬಾಯಿ ರೋಗಕ್ಕೆ ಉಚಿತ ಲಸಿಕೆ
ಗುಲ್ಬರ್ಗ/ಶಹಾಬಾದ್: ಹಿರಿಯ ಪಶು ವೈದ್ಯಕೀಯ ಪರಿವೀಕ್ಷಕ ಡಾ. ಪಂಪಣ್ಣ ಸಜ್ಜನ ನೇತೃತ್ವದಲ್ಲಿ ಲಾಡ್ಲಾಪುರ ಗ್ರಾಮದಲ್ಲಿ ಬುಧವಾರ ಜಾನುವಾರುಗಳಿಗಾಗಿ ಉಚಿತ ಕಾಲುಬಾಯಿ ರೋಗ ನಿರೋಧಕ ಲಸಿಕಾ ಶಿಬಿರ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಸಜ್ಜನ, ಕಾಲುಬಾಯಿ ರೋಗ ಅಂಟು ರೋಗವಾಗಿದ್ದು, ಹರಡಿದರೆ ಜಾನುವಾರುಗಳ ಪ್ರಾಣಸಂಕಟಕ್ಕೆ ಕಾರಣವಾಗುತ್ತದೆ. ಇದರಿಂದ ಮೂಕ ಪ್ರಾಣಿಗಳು ಚಿತ್ರಹಿಂಸೆ ಅನುಭವಿಸುವಂತಾಗುತ್ತದೆ. ಆದ್ದರಿಂದ ರೈತರು ಜಾತ್ರೆಯಿಂದ ಖರೀದಿಸುವ ಜಾನುವಾರುಗಳಿಂದ ಜಾಗೃತರಾಗಿರಬೇಕು ಎಂದರು.
ರೋಗ ತಗುಲಿದ ಮೇಲೆ ಗೋಳಾಡುವ ಬದಲು ಮುಂಚೆಯೇ ಕಡ್ಡಾಯವಾಗಿ ರೋಗ ನಿರೋಧಕ ಲಸಿಕೆ ಹಾಕಿಸುವ ಮೂಲಕ ಜಾನುವಾರುಗಳ ಆರೋಗ್ಯ ರಕ್ಷಣೆ ಮಾಡಬೇಕು. ದನಗಳಿಗೆ ಚಪ್ಪೆ ರೋಗ, ಗಂಟಲು ರೋಗ ಸಾಮಾನ್ಯವಾಗಿದ್ದು, ಸಕಾಲದಲ್ಲಿ ಚಿಕಿತ್ಸೆ ಲಭ್ಯವಿದೆ. ಕಾಲುಬಾಯಿ ರೋಗ ಒಂದರಿಂದ ಮತ್ತೊಂದಕ್ಕೆ ಹರಡುವ ರೋಗವಾಗಿದ್ದು, ಸರ್ಕಾರ ಎಲ್ಲ ಪಶು ಚಿಕಿತ್ಸಾ ಕೇಂದ್ರಗಳಲ್ಲಿ ಉಚಿತ ಔಷಧ ಲಭ್ಯವಿರಿಸಿದೆ. ಅದರ ಲಾಭ ಪಡೆದಕೊಳ್ಳಬೇಕೆಂದು ರೈತರಿಗೆ ಸಲಹೆ ನೀಡಿದರು.
ಕೊಂಚೂರ, ಹಣ್ಣಿಕೇರಿ ಹಾಗೂ ಲಾಡ್ಲಾಪುರ ಗ್ರಾಮಗಳಲ್ಲಿ ನಡೆಸಲಾದ ಶಿಬಿರದಲ್ಲಿ ಒಟ್ಟು 862 ಜಾನುವಾರುಗಳಿಗೆ ಕಾಲುಬಾಯಿ ರೋಗ ನಿರೋಧಕ ಲಸಿಕೆ ಹಾಕಲಾಗಿದೆ ಎಂದು ಶಿಬಿರ ಆಯೋಜಿಸಿದ್ದ ವೈದ್ಯರು ತಿಳಿಸಿದರು.
ಡಾ. ಅಶೋಕ ಪಾಟೀಲ್, ಡಾ. ಶಾಂತಕುಮಾರ ಗೌರ, ಭೀಮಾಶಂಕರ ಭಜಂತ್ರಿ, ಗ್ರಾಪಂ ಸದಸ್ಯ ವಿಶ್ವನಾಥ ಗಂದಿ, ಎಐಡಿವೈಒ ಗ್ರಾಮ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಗಂದಿ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

