ನಾಳೆ ಕೆಸಿಎಸ್ಆರ್ ತರಬೇತಿ, ಪ್ರಶಸ್ತಿ ಪ್ರದಾನ
ಸೇಡಂ: ಕರ್ನಾಟಕ ಶಿಕ್ಷಕರ ಪ್ರತಿಭಾ ಪರಿಷತ್ ತಾಲೂಕು ಘಟಕದ ವತಿಯಿಂದ ಡಿ.14ರಂದು ಬೆ.10ಕ್ಕೆ ಶಿಕ್ಷಕರಿ ಕೆಸಿಎಸ್ಆರ್ ತರಬೇತಿ ಕಾರ್ಯಾಗಾರವನ್ನು ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಅಶೋಕ ರೆಡ್ಡಿ ಚಿಲುಮೆ ತಿಳಿಸಿದ್ದಾರೆ.
ತಹಸೀಲ್ದಾರ್ ಪ್ರಕಾಶ ಕುದರಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವರಾಜ ರಟಕಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಶಾಂತಪ್ಪ ಚಿಂಚೋಳ್ಳಿಕರ್, ರಾಜ್ಯ ನಿರ್ದೇಶಕ ಶಿವರಾವ ಭೋವಿ, ಉಪನ್ಯಾಸಕರ ಸಂಘದ ಅಧ್ಯಕ್ಷ ಭೀಮರೆಡ್ಡಿ ಬೆಜ್ಜ, ಮುಖ್ಯ ಗುರುಗಳ ಸಂಘದ ಅಧ್ಯಕ್ಷ ನಾಗೇಂದ್ರ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚನ್ನಬಸರೆಡ್ಡಿ, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಯ್ಯ ಗುತ್ತೇದಾರ, ಗಂಗಾಧರ ಗೌಳಿ, ಮಣಸಿಂಗ ಚವ್ಹಾಣ ಭಾಗವಹಿಸುವರು.
ತರಬೇತಿಯಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಿಂದ ಒಬ್ಬರು, ಪ್ರಾಥಮಿಕ ಶಾಲೆಯಿಂದ ಇಬ್ಬರು ಮತ್ತು ಪ್ರೌಢಶಾಲೆಗಳಿಂದ ಒಬ್ಬ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದ್ದು, ಉತ್ತಮ ಆಡಳಿತ ನಿರ್ವಹಣೆಯಲ್ಲಿ ಕಾರ್ಯಾಗಾರ ಸಹಕಾರಿ ಎಂದು ತಿಳಿಸಿದ್ದಾರೆ.
ಪ್ರಶಸ್ತಿ ಪ್ರದಾನ: ಅಂದು ಮಧ್ಯಾಹ್ನ 12ಕ್ಕೆ ನಡೆಯುವ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ರಾಧಾಕೃಷ್ಣರಾವ ಉದ್ಘಾಟಿಸುವರು.
ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಕರುಣೇಶ್ವರ ಸ್ವಾಮೀಜಿ ದಿನದರ್ಶಿಕೆ ಬಿಡುಗಡೆ ಮಾಡುವರು. ಸೈಯದ್ ಶಹಾ ಮುಸ್ತಫಾ ಖಾದ್ರಿ ದಿನಚರಿ ಡೈರಿ ಬಿಡುಗಡೆ ಮಾಡುವರು.
ಅತಿಥಿಗಳಾಗಿ ಉಪ ನಿರ್ದೇಶಕ ಬಿ.ಎಸ್. ಪರಮೇಶ, ಪರಿಷತ್ ಜಿಲ್ಲಾಧ್ಯಕ್ಷ ಗುರುಪಾದ ಕೊಗನೂರ, ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವರಾಜ, ನೌಕರರ ಸಂಘದ ಅಧ್ಯಕ್ಷ ಶಿವಯ್ಯಸ್ವಾಮಿ ಬಿಬ್ಬಳ್ಳಿ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಕಾಂತರೆಡ್ಡಿ, ನಿರ್ದೇಶಕ ಶಿವರಾವ ಭೋವಿ ಪಾಲ್ಗೊಳ್ಳಲಿದ್ದಾರೆಂದು ಕಾರ್ಯದರ್ಶಿ ಶಿವಪುತ್ರ ದಿಗ್ಗಾಂವ ತಿಳಿಸಿದ್ದಾರೆ.
ಪ್ರಶಸ್ತಿ ಪುರಸ್ಕೃತರು: ಪ್ರಾಥಮಿಕ ವಿಭಾಗದಿಂದ ಮಹ್ಮದ ಜಲೀಲ್ ಸೇಡಂ, ಬ್ರಿಜ್ಮಾಲಾ ಕುರಕುಂಟಾ, ಗೌರಮ್ಮ ಅಳ್ಳೊಳ್ಳಿ, ಕಲ್ಯಾಣಕುಮಾರ ಬೀರನಹಳ್ಳಿ, ರುದ್ರಗೌಡ ವೆಂಕಟಾಪುರ ತಾಂಡಾ, ನೀಲಪ್ಪ ಇಟ್ಕಾಲ್. ಪ್ರೌಢ ವಿಭಾಗದಿಂದ ಶಿವಪ್ರಸಾದ ಬಟಗೇರಾ, ಸರವರ್ ಜಾಹನ್ ಮಳಖೇಡ, ರಾಜೇಂದ್ರ ಮದನಾ, ಬಾಬುರಾವ ಕುರಕುಂಟಾ, ಮಲ್ಲಿಕಾರ್ಜುನ ಪೂಜಾರಿ ಸೇಡಂ, ಪದವಿ ಪೂರ್ವ ಕಾಲೇಜಿನಿಂದ ಶಾಕೀರ್ ಹುಸೇನ ಪ್ರಶಸ್ತಿಗೆ ಭಾಜನರಾಗಿದ್ದು, ಇದೇ ಸಂದರ್ಭದಲ್ಲಿ ವಿಶ್ವಗಂಗಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಂಕರ ಬಿರಾದಾರ ಅವರಿಗೆ ಯುವ ಶಿಕ್ಷಣ ಶಿಲ್ಪಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

