ಗುಲ್ಬರ್ಗಾ

ಜನತೆ ಪ್ರಾಮಾಣಿಕ ಸೇವೆಯನ್ನು ಮರಿಯೋದಿಲ್ಲ: ಭಾಸ್ಕರರಾವ್

Published On :

ಶಹಾಪುರ: ಸಾರ್ವಜನಿಕ ಸೇವೆಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿ ಪ್ರಾಮಾಣಿಕವಾಗಿ ಕರ್ತವ್ಯ ಮಾಡಿದರೆ ಜನತೆ ದೇವರು ಎಂದು ನೆನೆಸುತ್ತಾರೆ. ಕೋರ್ಟ್ಗೆ ಆಗಮಿಸುವ ಕಕ್ಷಿದಾರಿಗೆ ಪ್ರಕರಣದ ಮಾಹಿತಿಯನ್ನು ನೀಡುತ್ತಾ ಅಚ್ಚುಕಟ್ಟುತನದ ಕೆಲಸದಿಂದ ಎಲ್ಲರ ಮೆಚ್ಚುಗೆಗೆ ಭೀಮಣ್ಣಗೌಡ ಪಾಟೀಲ್ ಪಾತ್ರರಾಗಿದ್ದಾರೆಂದು ಹಿರಿಯ ವಕೀಲ ಭಾಸ್ಕರರಾವ ಮುಡಬೂಳ ಹೇಳಿದರು.
  ಪಟ್ಟಣದ ನೂತನ ವಕೀಲರ ಪರಿಷತ್ನಲ್ಲಿ ಸೋಮವಾರ ಬಡ್ತಿ ಪಡೆದು ಸುರಪುರ ಕೋರ್ಟ್ಗೆ ಶಿರಸ್ತೆದಾರರಾಗಿ ವರ್ಗಾವಣೆಗೊಂಡಿರುವ ಭೀಮಣ್ಣಗೌಡ ಪಾಟೀಲ್ ಹಾಗೂ ಸಾಮಾಜಿಕ ಕಾರ್ಯಕರ್ತ ಮಲ್ಲಯ್ಯ ಪೊಲಂಪಲ್ಲಿ ಅವರಿಗೆ ಹಮ್ಮಿಕೊಳ್ಳಲಾದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಸನ್ಮಾನವನ್ನು ಸ್ವೀಕರಿಸಿದ ಭೀಮಣ್ಣಗೌಡ ಪಾಟೀಲ್ ಮಾತನಾಡಿ, ಕೋರ್ಟ್ನಲ್ಲಿ ವಕೀಲರು ಸಿಬ್ಬಂದಿಗೆ ಹೆಚ್ಚಿನ ಸಹಕಾರ ನೀಡುವುದರಿಂದ ಉತ್ತಮ ಕೆಲಸವನ್ನು ನಿರ್ವಹಿಸಲು ಸಾಧ್ಯ. ಸಮಯ ಪಾಲನೆ, ಕೆಲಸದಲ್ಲಿ ಅಚ್ಚುಕಟ್ಟುತನವನ್ನು ನಾವು ಮೈಗೂಡಿಸಿಕೊಂಡರೆ ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತೇವೆ ಎಂದು ಹೇಳಿದರು.
  ಸಭೆಯ ಅಧ್ಯಕ್ಷತೆಯನ್ನು ನೂತನ ವಕೀಲರ ಪರಿಷತ್ ಅಧ್ಯಕ್ಷೆ ಸತ್ಯಮ್ಮ ಹೊಸ್ಮನಿ ವಹಿಸಿದ್ದರು. ಸಭೆಯಲ್ಲಿ ವಕೀಲರಾದ ನಿಂಗಣ್ಣ ಶಾರದಹಳ್ಳಿ, ಅಂಬರೇಶ ಇಟಗಿ, ಶಿವಶರಣ ಹೊತಪೇಟ, ಸುಭಾಸ ರಾಂಪೂರ, ಜಯಲಕ್ಷ್ಮಿರಡ್ಡಿ, ಶಂಕರಗುರು, ರಾಘವೇಂದ್ರ, ಶರಣು, ಭಾಸುತ್ಕರ್, ಶ್ರೀಪಾದ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.