ಗುಲ್ಬರ್ಗಾ

ಜಾತ್ರೆಗಳು ನಮ್ಮ ಸಂಸ್ಕೃತಿಯ ಪ್ರತೀಕ: ರಮೇಶ ಮರಗೋಳ

Published On :

ಗುಲ್ಬರ್ಗ/ಶಹಾಬಾದ್: ಜಾತ್ರೆಗಳು, ಹಬ್ಬಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು, ಜನರ ನಡುವೆ ಪರಸ್ಪರ ಪ್ರೀತಿ, ವಿಶ್ವಾಸ, ಬಾಂಧವ್ಯದ ಅಭಿವೃದ್ಧಿಗೆ ಸಂಪರ್ಕದ ಸಾಧನವಾಗಿದೆ ಎಂದು ಜಿಪಂ ಅಧ್ಯಕ್ಷ ರಮೇಶ ಮರಗೋಳ ಅಭಿಪ್ರಾಯಪಟ್ಟರು.
ಭಂಕೂರ ಗ್ರಾಮದ ಮೈಲಾರಲಿಂಗೇಶ್ವರರ 9ನೇ ಜಾತ್ರಾ ಮಹೋತ್ಸವ ನಿಮಿತ್ತ ಆಯೋಜಿಸಿದ್ದ ಧರ್ಮ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಮಾಪಣ್ಣ ಗಂಜಗೇರಿ ಮಾತನಾಡಿ, ಈ ಮೈಲಾರಲಿಂಗೇಶ್ವರ ಜಾತ್ರೆ ಕೇವಲ ಆಚರಣೆಯ ವಸ್ತುವಾಗದೆ  ಸಮಾಜದಲ್ಲಿನ ಎಲ್ಲ ಜನಾಂಗದ ಜನರನ್ನು ಒಗ್ಗೂಡಿಸಿ ಐಕ್ಯತೆ ಸಾರುವ ಕೇಂದ್ರವಾಗಲಿ ಎಂದು ಹಾರೈಸಿದರು. ಇಟಗಿಯ ಧನಸಿಂಗ್ ಪೂಜಾರಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಜಿಪಂ ಮಾಜಿ ಉಪಾಧ್ಯಕ್ಷೆ ಪಾರ್ವತಿ ಚವ್ಹಾಣ, ಕಮಲಾಬಾಯಿ ಪಾಟೀಲ್, ಮುನ್ನಾ ಪಟೇಲ್, ಮಹೇಶ ಪೂಜಾರಿ, ಶಿವರಾಜ ಪಾಟೀಲ್, ವಿರೂಪಾಕ್ಷಿ ಗಡ್ಡದ, ಈರಣ್ಣ ಗುಡೂರ, ಬಸವರಾಜ ಹೊಸಳ್ಳಿ, ರಾಮು ಸರಡಗಿ, ಯಶವಂತ ಯಾತನೂರ, ತಿಪ್ಪಣ್ಣ ವಗ್ಗದ, ಮಲ್ಲಿಕಾರ್ಜುನ ಸ್ವಾಮಿ, ಹಿರಗಪ್ಪ ಧರಿ, ಮಹೇಶ ಧರಿ ಇದ್ದರು.  ಬೀರಪ್ಪ ತಾತನವರು ನೇತೃತ್ವ ವಹಿಸಿದ್ದರು. ಜಿಪಂ ಮಾಜಿ ಸದಸ್ಯ ಮಲ್ಲಿಕಾರ್ಜುನ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಮರಲಿಂಗ ನಿರೂಪಿಸಿದರು. ಶರಣಪ್ಪ ಸ್ವಾಗತಿಸಿ, ರವಿಕುಮಾರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.