ಗುಲ್ಬರ್ಗಾ

ರಸ್ತೆ ಸುಧಾರಣೆಗಾಗಿ ಪ್ರತಿಭಟನೆ

Published On :

ಗುಲ್ಬರ್ಗ: ವಾಡಿ ಪಟ್ಟಣದ ಹಾಗೂ ಗ್ರಾಮಗಳ ರಸ್ತೆ ಸುಧಾರಣೆಗೆ ಜೈ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಇಲ್ಲಿಗೆ ಸಮೀಪದ ರಾವೂರ ಗ್ರಾಮದ ಚಿತ್ತಾಪುರ- ಶಹಾಬಾದ್ ವೃತ್ತದಲ್ಲಿ ಜೈಕರವೇ ವಾಡಿ ವಲಯ ಅಧ್ಯಕ್ಷ  ದೀಪಕಕುಮಾರ್ ರಾಠೋಡ ನೇತೃತ್ವದಲ್ಲಿ ರಾವೂರ- ಶಹಾಬಾದ್- ಚಿತ್ತಾಪುರ ರಸ್ತೆ ಸುಧಾರಣೆಗೆ ರಸ್ತೆ ಮೇಲೆ ಟೈರುಗಳನ್ನು ಸುಡುವ ಮೂಲಕ ಪ್ರತಿಭಟಿಸಿದರು.
ವಲಯ ಅಧ್ಯಕ್ಷ ದೀಪಕಕುಮಾರ್ ರಾಠೋಡ ಮಾತನಾಡಿ,  ಗ್ರಾಮದ ರಸ್ತೆ ಸುಧಾರಣೆಗೆ ಈ ವೃತ್ತದಲ್ಲಿ ಹೋರಾಟ ನಡೆಸಲಾಯಿತು. ಪ್ರಿಯಾಂಕ್ ಖರ್ಗೆ ಅವರು ಶಾಸಕರಾಗಿ 9 ತಿಂಗಳು ಗತಿಸಿದರೂ ಅವರಿಗೆ ಹದ್ದೆಗೆಟ್ಟ ಗ್ರಾಮದ ರಸ್ತೆಗಳು ಮಾತ್ರ ಕಾಣುತ್ತಿಲ್ಲ ಎಂದು ಆರೋಪಿಸಿದರು.  ಜೈಕರವೇ ಕಾರ್ಯಕರ್ತರಾದ ವೆಂಕಟೇಶ ಬಮ್ಮನ, ಹುಸೇನಸಾಬ್ ಚೇಟ್ಟನ್ನಳಿ, ತಾಯಪ್ಪ ಕಂಬಲಪುರ, ಅಖಿಲಸಾಬ್, ಸಾಹೇಬಗೌಡ, ರಾಕೇಶ, ಮಡಿವಾಳ, ಸಂಗಣ್ಣ ರಾವೂರ, ಹನಮಂತ ರಾವುರ, ದೇವರಾಜ ಬಡಿಗೇರ, ಸಾಬು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.