ಗುಲ್ಬರ್ಗಾ

ಶ್ಯಾಮರಾವ ಪ್ಯಾಟಿ ಬಿಜೆಪಿ ಟಿಕೆಟ್ ಆಕಾಂಕ್ಷಿ

Published On :

ಗುಲ್ಬರ್ಗ: ಗುಲ್ಬರ್ಗ ಮೀಸಲು ಲೋಕಸಭೆ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿಯಿಂದ ಕಣಕ್ಕಿಳಿಯಲು ತಾವೂ ಸಿದ್ಧ ಎಂದಿರುವ ಜಿಡಿಎ ಮಾಜಿ ಅಧ್ಯಕ್ಷ ಶ್ಯಾಮರಾವ ಪ್ಯಾಟಿ, ಈ ವಿಚಾರವಾಗಿ ತಾವು ಅದಾಗಲೇ ಪಕ್ಷದ ಹೈಕಮಾಂಡ್ಗೆ ತಮ್ಮ ಸ್ಪರ್ಧೆಯ ವಿಚಾರ ಬಹಿರಂಗಪಡಿಸಿದ್ದಾಗಿ ಹೇಳಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ಯಾಟಿ, ಹಿಂದೆ ಗುರುಮಠಕಲ್ನಲ್ಲಿ ಬಿಜೆಪಿಯಿಂದ ಅಸೆಂಬ್ಲಿ ಅಭ್ಯರ್ಥಿಯಾಗಿ ಖರ್ಗೆಯವರಿಗೆ ಸಮರ್ಥ ಸ್ಪರ್ಧೆ ಒಡ್ಡಿದ್ದಾಗಿ ನೆನಪಿಸಿಕೊಂಡರಲ್ಲದೆ ಗುಲ್ಬರ್ಗದಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಯಾಗಲಿರುವ ಖರ್ಗೆಯವರಿಗೆ ತುರುಸಿನ ಪೈಪೋಟಿ ನೀಡುತ್ತೇನೆಂದು ವಿಶ್ವಾಸ ವ್ಯಕ್ತಪಡಿಸಿದರು.
ಅವಕಾಶ ನೀಡಿದರೆ ಜನರ ಹಿತ ಕಾಪಾಡುವೆ: ಶೋಷಿತ ಸಮುದಾಯದವರಾದ ತಾವೂ ಬಿಇ ಪದವೀಧರ. ಹಿಂದೆ ಜಿಡಿಎ ಅಧ್ಯಕ್ಷರಾಗಿದ್ದು ಅನೇಕ ಜನಪರ ಕೆಲಸಗಳನ್ನು ಮಾಡಿದ್ದೇನೆ. ಇದೀಗ ಮತ್ತೆ ಜನತೆ ಅವಕಾಶ ನೀಡಿದಲ್ಲಿ ಲೋಕಸಭೆಗೂ ಹೋಗಿ ಗುಲ್ಬರ್ಗ ಜಿಲ್ಲೆಯ ಹಿತ ಕಾಪಾಡುವುದಾಗಿ ಹೇಳಿದರು.
ಕಳೆದ ಬಾರಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ಬೆಳಮಗಿಯವರು ಪರಾಭವಗೊಂಡರು. ಈ ಬಾರಿ ಪಕ್ಷ ಹೊಸ ಮುಖವನ್ನು ಪರಿಚಯಿಸುವ ಚಿಂತನೆ ನಡೆಸಿದೆ. ಹೊಸ ಮುಖವಾಗಿ ತಮ್ಮನ್ನೇ ಕಣಕ್ಕಿಳಿಸಿದಲ್ಲಿ ಜಯ ತಂದು ಕೊಡುವುದಾಗಿ ತಿಳಿಸಿದ ಅವರು, ದೇಶದಲ್ಲಿ ನರೇಂದ್ರ ಮೋದಿ, ಬಿಜೆಪಿ ಅಲೆ ಇದೆ. ಗುಲ್ಬರ್ಗ ಮೀಸಲು ಕ್ಷೇತ್ರದಲ್ಲಿಯೂ ಸುಶಿಕ್ಷಿತ ಅಭ್ಯರ್ಥಿ ಸ್ಪರ್ಧೆ ಮಾಡಿದರೆ ಜನತೆ ಇಲ್ಲಿಯೂ ಬಿಜೆಪಿ ಪರವಾಗಿಯೇ ಜನಾದೇಶ ನೀಡುವುದು ನಿಶ್ಚಿತ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.