ಜ.26ರಂದು ಸಕ್ಕರೆ ಕಾರ್ಖಾನೆ ಘಟಕಕ್ಕೆ ಭೂಮಿ ಪೂಜೆ
ಚಿಂಚೋಳಿ: ತಾಲೂಕಿನ ಕೊರವಿ ಗ್ರಾಮದಲ್ಲಿ ಮುಂಬರುವ ಜ.26ರಂದು ಓರಿಜಿನ್ಸ್ ಅಲ್ಟಿಮೇಟ್ ಖೂಬಾ ಗ್ರೂಪ್ ವತಿಯಿಂದ ಸಕ್ಕರೆ ಕಾರ್ಖಾನೆ ಘಟಕದ ಭೂಮಿ ಪೂಜೆ ನಡೆಯಲಿದೆ ಎಂದು ಉದ್ಯಮಿ ರಾಜೇಂದ್ರ ಖೂಬಾ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನ ಕೊರವಿ ಗ್ರಾಮದಲ್ಲಿ ಈಗಾಗಲೇ ಹೊಸದಾಗಿ ಸಕ್ಕರೆ ಕಾರ್ಖಾನೆ ಘಟಕ ಸ್ಥಾಪಿಸಲು ಉದ್ದೇಶಿಸಿದ್ದು, 150 ಎಕರೆ ಜಮೀನಿನಲ್ಲಿ ಕೃಷಿಯೇತರಕ್ಕಾಗಿ ಸರ್ಕಾರದಿಂದ ಅನುಮತಿ ಪಡೆಯಲಾಗಿದೆ ಎಂದರು. ತಾಲೂಕಿನ ಕಬ್ಬು ಬೆಳೆಗಾರರ ಒಪ್ಪಿಗೆ ಮೇರೆಗೆ ಸಕ್ಕರೆ ಕಾರ್ಖಾನೆ ಸ್ಥಾಪಿಸಲು ನಿರ್ಧರಿಸಲಾಗಿದೆ. ಒಟ್ಟು 4,500 ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯ ಕಬ್ಬು ಬೆಳೆಯಲು ರೈತರಿಂದ ಪ್ರತಿ ಎಕರೆಗೆ 10 ಸಾವಿರ ರು. ಶೇರು ಹಣ ಪಡೆಯಲಾಗುತ್ತಿದೆ. ಈಗಾಗಲೇ ತಾಲೂಕಿನಲ್ಲಿ 150 ರೈತರಿಂದ ಒಪ್ಪಿಗೆ ಪಡೆಯಲಾಗಿದೆ ಎಂದರು.
ಷೇರು ಪಡೆಯಲು 30 ಕೊನೆ ದಿನ: ಷೇರು ಹಣ ಪಡೆಯಲು ಡಿ.30 ಕೊನೆಯ ದಿನವಾಗಿದ್ದು, ಈಗಾಗಲೇ ರೈತರು ಕಬ್ಬು ಸಕ್ಕರೆ ಕಾರ್ಖಾನೆ ಘಟಕ ಸ್ಥಾಪನೆಗೆ ಚೆಕ್ ಮೂಲಕ ಹಣ ನೀಡುತ್ತಿದ್ದಾರೆ. ರುದನ ೂರಿನ ಲಿಂಗಶೆಟ್ಟಿ ತಟ್ಟೆಪಳ್ಳಿ 50 ಸಾವಿರ ಚೆಕ್ ನೀಡಿದ್ದಾರೆ ಎಂದರು.
ಕೊರವಿ ಗ್ರಾಮದಲ್ಲಿ ಸ್ಥಾಪಿಸಲು ಉದ್ದೇಶಿಸಿದ ಸಕ್ಕರೆ ಕಾರ್ಖಾನೆಯಿಂದ 1 ಮೆ.ವ್ಯಾ ವಿದ್ಯುತ್ ಉತ್ಪಾದನೆ ಸಹ ಮಾಡಲಾಗುವುದು. ಕಾರ್ಖಾನೆಯಿಂದ ಉತ್ತಮ ಗುಣಮಟ್ಟದ ಸಕ್ಕರೆ ತಯಾರಿಸಲಾಗುವುದು. ಅಲ್ಲದೆ ಪ್ರತಿನಿತ್ಯ 1,200 ಟನ್ ಕಬ್ಬು ನುರಿಸುವ ಸಾಮರ್ಥ್ಯ ಹೊಂದಿದೆ. ಸಕ್ಕರೆ ಕಾರ್ಖಾನೆಗಾಗಿ ಒಟ್ಟು 50 ಕೋಟಿ ಬಂಡವಾಳ ಹೂಡಿಕೆಯಾಗಿದೆ ಎಂದರು.
ರೈತರ ಸಹಕಾರ: ತಾಲೂಕು ಕಬ್ಬು ಬೆಳೆಗಾರರ ಮುಖ್ಯಸ್ಥ ಶಿವಶರಣಪ್ಪ ಜಾಪಟ್ಟಿ ಮಾತನಾಡಿ, ತಾಲೂಕಿನ ಕೊರವಿ ಗ್ರಾಮದಲ್ಲಿ ಖೂಬಾ ಗ್ರೂಪ್ ವತಿಯಿಂದ ಸಕ್ಕರೆ ಕಾರ್ಖಾನೆ ಸ್ಥಾಪಿಸಲು ತಾಲೂಕಿನ ಅನೇಕ ರೈತರು ಸಹಕಾರ ನೀಡಲು ಮುಂದೆ ಬರುತ್ತಿದ್ದಾರೆ. ಕಬ್ಬು ಬೆಳೆಯಲು ಹೆಚ್ಚಿನ ಆಸಕ್ತಿ ಒಲವು ತೋರಿಸುತ್ತಿರುವುದರಿಂದ ಬರುವ ಜ.26ರಂದು ಕೊರವಿ ಗ್ರಾಮದಲ್ಲಿ ಭೂಮಿ ಪೂಜೆ ನಡೆಸಲಾಗುತ್ತಿದೆ ಎಂದರು. ಸಂಗಯ್ಯ ಸ್ವಾಮಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

