ಗುಲ್ಬರ್ಗಾ

'ಯಾವ ಶರಣರಿಗೂ ದಿ. ವಿಠ್ಠಲ್ ಹೇರೂರ್ ಕಡಿಮೆಯಲ್ಲ'

Published On :

ಕ.ಪ್ರ. ವಾರ್ತೆ, ಅಫಜಲ್ಪುರ, ಡಿ.16
ಮಾಜಿ ಎಂಎಲ್ಸಿ ವಿಠ್ಠಲ್ ಹೇರೂರ್ ಕೂಡ ಸಾಮಾಜಿಕ ವ್ಯವಸ್ಥೆಯನ್ನು ಸರಿಪಡಿಸುವುದಕ್ಕಾಗಿ ಹೋರಾಟ ಮಾಡಿದ ಮಹಾನ್ ವ್ಯಕ್ತಿಯಾಗಿದ್ದು, ಯಾವ ಶರಣರಿಗೂ ಕಡಿಮೆಯಲ್ಲ ಎಂದು ಅಂಬಿಗರ ಚೌಡಯ್ಯ ಪೀಠಾಧಿಪತಿ ಶಾಂತಮುನಿ ಸ್ವಾಮೀಜಿ ಹೇಳಿದರು.
ತಾಲೂಕಿನ ದೇವಲ ಗಾಣಗಾಪುರದ ತಿಪ್ಪಣ್ಣ ಕಂಠೆಪ್ಪ ಹೇರೂರ್ ಪ್ರೌಢಶಾಲೆಯ ಆವರಣದಲ್ಲಿ ನಡೆದ ಕೋಲಿ ಸಮಾಜದ ಧುರೀಣ ವಿಠ್ಠಲ್ ಹೇರೂರ್ ಅವರ ಪುಣ್ಯರಾಧನೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಚೌಡಯ್ಯ ಪೀಠ ಸ್ಥಾಪನೆ: ಚೌಡಯ್ಯ ದಾನಪುರದಂತೆ ರಾಜ್ಯದ ರಾಜಧಾನಿ ಬೆಂಗಳೂರು, ಕಾರವಾರ, ಬಳ್ಳಾರಿ ಮತ್ತು ದೇವಲ ಗಾಣಗಾಪುರಗಳಲ್ಲಿ ಚೌಡಯ್ಯ ಪೀಠ ಸ್ಥಾಪನೆಯನ್ನು ಮಾಡುತ್ತಿರುವುದಾಗಿ ಹೇಳಿದ ಶ್ರೀಗಳು, ಬರುವ ವರ್ಷದೊಳಗೆ ದೇವಲಗಾಣಗಾಪುರ ಪೀಠ ತಯಾರಿಸುವ ಯೋಜನೆ ಇದ್ದು, ಸಮಾಜ ಬಾಂಧವರು ಕೈಜೋಡಿಸಿ ಈ ಕೈಂಕರ್ಯ ಮಾಡಬೇಕೆಂದು ನುಡಿದರು.
ಸಿದ್ದರಾಮ ಶಿವಾಚಾರ್ಯರು, ಶಾಂತವೀರ ಶಿವಾಚಾರ್ಯರು, ಗಂಗಾಧರ ಸ್ವಾಮೀಜಿ, ಗುರುದಾಸ ಮಹಾರಾಜರು, ಸಿದ್ದರಾಮ ಸ್ವಾಮೀಜಿ ಆಶಿರ್ವಚನ ನೀಡಿದರು.
ಸಮಾಜದ ಮುಖಂಡ ತಿಪ್ಪಣಪ್ಪ ಕಮಕನೂರ ಮಾತನಾಡಿದರು. ಜಿಪಂ ಸದಸ್ಯರಾದ ಶೋಭಾ ಬಾಣಿ, ಪ್ರಕಾಶ ಜಮಾದಾರ, ಅಣ್ಣಾರಾಯ ಅಜಗೊಂಡ, ಗೊವಿಂದ ಭಟ್, ಉಮೇಶ ಮುದ್ನಾಳ, ಶಿವರಾಜ ಪಾಟೀಲ್ ಮಾತನಾಡಿದರು. ಕೋಲಿ ಸಮಾಜದ ತಾಲೂಕು ಉಪಾಧ್ಯಕ್ಷ ಶಂಕು ಮ್ಯಾಕೇರಿ, ಗುರಣ್ಣ ಜಮಾದಾರ, ದಿಲೀಪ ಕಳಸೆ, ಕರವೇ ಜಿಲ್ಲಾಧ್ಯಕ್ಷ ಶಿವುಕುಮಾರ ನಾಟಿಕಾರ, ಬಸವರಾಜ ಸಪ್ಪನಗೋಳಿ, ಮಲ್ಕಣ್ಣ ಯಂಕಂಚೆ, ಶರಣಪ್ಪ ಕಣ್ಮೇಶ್ವರ, ರಾಯಪ್ಪ ಹೊನಗುಂಟಿ, ತಾಪಂ ಸದಸ್ಯ ದತ್ತು ಸಿಂಧೆ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.