ಗುಲ್ಬರ್ಗಾ

ಪ್ರೊ. ದಶರಥ ನಾಯಕ ವಜಾಕ್ಕೆ ಆಗ್ರಹ

Published On :

ಗುಲ್ಬರ್ಗ: ಗುಲ್ಬರ್ಗ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿನಿಗೆ ಅಲ್ಲಿನ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಲೈಂಗಿಕ ಕಿರುಕುಳ ನೀಡಿರುವುದನ್ನು ಖಂಡಿಸಿ ವೀರಶೈವ ಯುವ ವೇದಿಕೆ ನೇತೃತ್ವದಲ್ಲಿ ಗುಲ್ಬರ್ಗದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಇತ್ತೀಚೆಗೆ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ದಶರಥ ನಾಯಕ ಅವರು ತಮ್ಮ ಮಾರ್ಗದರ್ಶನದಲ್ಲಿ ಲೈಂಗಿಕ ಕಿರುಕುಳ ನೀಡಿದ್ದಲ್ಲದೇ ಹಣ ವಸೂಲಿ ಮಾಡಿದ್ದಾರೆ. ಇವರಿಗೆ ಸಹಕರಿಸಿ ಪ್ರಚೋದನೆ ನೀಡಿದವರನ್ನು ಸಹ ಬಂಧಿಸಬೇಕು, ಈ ವಿಷಯವನ್ನು ಮುಚ್ಚಿ ಹಾಕಲು ಮತ್ತು ವಿದ್ಯಾರ್ಥಿನಿಗೆ ಆಸೆ ಆಮಿಷ ಒಡ್ಡಿದ ಪ್ರಾಧ್ಯಾಪಕರನ್ನು ವಿಚಾರಣೆಗೊಳಪಡಿಸಿ ಶಿಕ್ಷೆ ವಿಧಿಸಬೇಕು, ಲೈಂಗಿಕ ಕಿರುಕುಳದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು, ನ್ಯಾಯಾಂಗ ಬಂಧನದಲ್ಲಿರುವ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ದಶರಥ ನಾಯಕ ಅವರನ್ನು ಕೆಲಸದಿಂದ ವಜಾಗೊಳಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ವೇದಿಕೆ ಅಧ್ಯಕ್ಷ ಮಲ್ಲಿಕಾರ್ಜುನ ಗರೂರ, ಜಿಪಂ ಸದಸ್ಯ ಬಸವರಾಜ ಮಾಲಿಪಾಟೀಲ್, ಯುವ ಕಾಂಗ್ರೆಸ್ ಘಟಕದ ಮುಖಂಡ ಪ್ರಶಾಂತ ಮಾಲಿಪಾಟೀಲ್, ಅಶೋಕ ಹೊನ್ನಳ್ಳಿ, ಸಂಗಮೇಶ ನಾಗನಳ್ಳಿ, ಅಮರನಾಥ ತಡಕಲ್, ಸಿದ್ದು ಪಾಟೀಲ್, ಅಪ್ಪು ಕಣಕಿ, ಅಮೃತ ಪಾಟೀಲ್, ಹಣಮಂತ ಪಾಟೀಲ್, ಅಪ್ಪಾಸಾಹೇಬ್ ಪಾಟೀಲ್ ಗೊಬ್ಬೂರ, ರೇವಣಸಿದ್ದಪ್ಪ, ರಾಜು ದೇವದುರ್ಗ, ಶಾಂತಕುಮಾರ್ ಹೊನ್ನಳ್ಳಿ, ರವೀಂದ್ರನಾಥ ಹೊನ್ನಳ್ಳಿ, ರವಿ ಬಿರಾದಾರ, ಶಿವರಾಜ ಪಾಟೀಲ್, ಶರಣು ಮೋದಿ, ರಾಜುಗೌಡ ಪಾಟೀಲ್, ಮಂಜು ರೆಡ್ಡಿ, ರಾಜು ಕೋಟಿ, ಚಂದ್ರಕಾಂತ ಕಾಳಗಿ, ವಿಶ್ವನಾಥ ಹುಲಿ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ನಗರದ ಜಗತ್ ವೃತ್ತದಿಂದ ಜಿಲ್ಲಾಕಾರಿ ಕಚೇರಿ ವರೆಗೆ ಬೃಹತ್ ಮೆರವಣಿಗೆ ನಡೆಸಿ ನಂತರ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.