ಫೆ. 10ರವರೆಗೆ ನೀರು?, ರೈತರಲ್ಲಿ ಹೆಚ್ಚಿದ ಆತಂಕ
ಹುಣಸಗಿ: ಕೃಷ್ಣಾ ಭಾಗ್ಯ ಜಲ ನಿಗಮವು ನವೆಂಬರ್ 18ರಂದು ಆಲಮಟ್ಟಿಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ, ವಾರಬಂದಿ ಮಾಡುವ ಮೂಲಕ ಮಾ. 10ರವರೆಗೆ ಕಾಲುವೆಯಲ್ಲಿ ನೀರು ಹರಿಸಲಾಗುವುದು ಎಂಬ ಹೇಳಿಕೆಯನ್ನು ಸಭೆಯಲ್ಲಿ ಅಧಿಕೃತವಾಗಿ ಹೇಳಿಕೆಯನ್ನು ನೀಡಲಾಗಿತ್ತು.
ಅಂದು ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಸುರಪುರದ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾರ್ಚ್ ಕೊನೆವರೆಗೆ ಕಾಲುವೆಯಲ್ಲಿ ನೀರು ಹರಿಸದಿದ್ದರೆ ನಾನು ಕ್ಷೇತ್ರಕ್ಕೆ ಹೋಗುವುದಿಲ್ಲ ಎಂದು ಕೂಡಾ ಹೇಳಿದ್ದರು.
ಆದರೆ ಕಳೆದ ಒಂದು ವಾರದಿಂದ ಭೀಮರಾಯನಗುಡಿಯ ಮುಖ್ಯ ಅಭಿಯಂತರ ಕಚೇರಿಯ ಮುಖಾಂತರ ಪ್ರತಿ ಗ್ರಾಪಂ ಮಟ್ಟದಲ್ಲಿ ಫೆ. 20ರವರೆಗೆ ಮಾತ್ರ ಕಾಲುವೆಯಲ್ಲಿ ನೀರು ಹರಿಸಲಾಗುವುದು ಎಂಬ ವದಂತಿ ದಟ್ಟವಾಗಿ ಹಬ್ಬಿದ್ದು, ರೈತರ ನಿದ್ದೆಗೆಡಿಸಿದೆ.
ತಪ್ಪಿದ ವಾರಾಬಂದಿ: ನೀರಾವರಿ ಅಧಿಕಾರಿಗಳು ಈ ಮೊದಲು ತಿಂಗಳ ಆರಂಭದ ಐದು ದಿವಸಗಳವರೆಗೆ ಹಲವು ವಿತರಣಾ ಕಾಲುವೆಗಳಿಗೆ ನೀರು ಹರಿಸುವುದನ್ನು ನಿಲ್ಲಿಸಿ, ನೀರಿನ ಉಳಿತಾಯ ಮಾಡಿ, ಮಾರ್ಚ್ ಹತ್ತರವರೆಗೆ ಕಾಲುವೆಯಲ್ಲಿ ನೀರು ಹರಿಸಲು ಸಿದ್ಧ ಎಂಬ ಹೇಳಿಕೆ ನೀಡಿದ್ದು ಕೇವಲ ಜನಪ್ರತಿನಿಧಿಗಳ ಒತ್ತಡಕ್ಕ ಮಾತ್ರ ಎಂಬುದು ಈಗ ದೃಢಪಟ್ಟಿಂತಾಗಿದೆ ಎಂಬುದು ರೈತರ ವಾದ. ಈ ಕುರಿತಂತೆ ಸಂಬಂಧಪಟ್ಟವರು ನೀರಿನ ಹರಿವಿನ ದಿನಾಂಕದ ಗೊಂದಲ ನಿವಾರಿಸಲು ಆಗ್ರಹಿಸಿದ್ದಾರೆ.
ಎಲ್ಲಿ ಜನಪ್ರತಿನಿಧಿಗಳು: ಜನಪ್ರತಿನಿಧಿಗಳು ಈ ಬಗ್ಗೆ ಏನನ್ನೂ ಹೇಳದೇ ತಟಸ್ಥರಾಗಿದ್ದಾರೆ ಎಂದು ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿವರ್ಷ ನೀರಾವರಿ ಕ್ಷೇತ್ರ ಹೆಚ್ಚಾಗುತ್ತಿದೆ. ಇದರಿಂದ ರೈತರಿಗೆ ಹಿಂದಿನ ವರ್ಷಗಳಂತೆ ನಿಗದಿತ ಪ್ರಮಾಣದ ನೀರು ಮಾ. 31ರ ತನಕ ಕೊಡುವುದು ಇನ್ನು ಮುಂದೆ ಸಾಧ್ಯವಿಲ್ಲ ಎಂದು ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ವಾರಾಬಂದಿಗೆ ಯಾರು ಸಹಕರಿಸಬೇಕು?: ಕೃಷ್ಣಾ ಅಚ್ಚುಕಟ್ಟು ಪ್ರದೇಶವಾದ ಕೆಂಭಾವಿ, ಹುಣಸಗಿ, ಮಾಲಗತ್ತಿ, ವನದುರ್ಗ, ಗೋಗಿ, ದೋರನಹಳ್ಳಿ, ಹತ್ತಿಗಡೂರು, ಕಕ್ಕೇರಿ, ದೇವಾಪುರ, ಖಾನಾಪುರ, ಚಿಗರಳ್ಳಿ, ಯಡ್ರಾಮಿ, ಮಳ್ಳಿ, ಸಿಂದಗಿ, ಭಾಗಗಳಲ್ಲಿ ಹತ್ತಿ, ಮೆಕ್ಕೆಜೋಳ, ಕಬ್ಬು, ಮೇಣಸಿನಕಾಯಿ, ಶೇಂಗಾವನ್ನು ವ್ಯಾಪಕವಾಗಿ ಬೆಳೆಯುತ್ತಿದ್ದಾರೆ.
ವಾರಬಂದಿ ಮಾಡಿದರೆ ನಮ್ಮ ಬೆಳೆ ಹಾಳಾಗುವುದು ಎಂದು ಕೆಲವು ರೈತರು ಜನಪ್ರತಿನಿಧಿಗಳ ಮೇಲೆ ಒತ್ತಡ ತಂದಿದ್ದಾರೆ.
ವಾರಾಬಂದಿ ಮಾಡುವುದಾದರೆ ಆರಂಭದಿಂದಲೇ ಮಾಡಬೇಕು. ನಿಮ್ಮಿಷ್ಟ ಬಂದಾಗ ಅಲ್ಲಾ ಎಂದು ಕೆಲವರು ನೀರಾವರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ವಾರಾಬಂದಿ ಮಾಡಿದರೆ ನಮ್ಮ ಸೆಂಗಾ, ಹತ್ತಿ, ಮೆಣಸಿನಕಾಯಿ ಬೆಳೆಹಾನಿಯಾದರೆ ಅದಕ್ಕೆ ಯಾರು ಹೋಣೆ ಎಂದು ತರ್ಕ ಮುಂದಿಟ್ಟಿದ್ದಾರೆ. ಇದರಿಂದ ಜನಪ್ರತಿನಿಧಿಗಳಿಗೆ ಯಾರಿಗೆ ಸಮಾಧಾನ ಹೇಳುವುದು ಎಂದು ಮೌನಕ್ಕೆ ಶರಣು ಆಗಿದ್ದಾರೆ.
ಈ ಕುರಿತಂತೆ ಅಧಿಕಾರಿಗಳು ತಕ್ಷಣ ಉತ್ತರಿಸಲು ರೈತರು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

