ಗುಲ್ಬರ್ಗಾ

ವಿಠ್ಠಲ್ ಹೇರೂರ್ ಶ್ರದ್ಧಾಂಜಲಿ

Published On :

ಹುಣಸಗಿ: ಪಟ್ಟಣದ ಅಂಬೀಗರ ಚೌಡಯ್ಯ ವೃತ್ತದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ದಿ. ವಿಠ್ಠಲ್ ಹೇರೂರ್  ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಟೋಕರಿ ಕೂಲಿ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಮುದ್ನಾಳ, ವಿಠ್ಠಲ್ ಹೇರೂರ್ ಅಪರೂಪದ ರಾಜಕಾರಣಿಯಾಗಿದ್ದರು. ಅವರು ಕೋಲಿ ಸಮಾಜದ ಧೀಮಂತ ನಾಯಕರಾಗಿದ್ದರು ಎಂದು ಬಣ್ಣಸಿದರು. ಇದೇ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಸುರೇಶ ನೀರಲಗಿ, ಪ್ರಾಚಾರ್ಯ ಆರ್.ಎಲ್. ಸುಣಗಾರ, ಪೋಸ್ಟ್ ಮಾಸ್ಟರ್ ಬಿ.ಎಸ್. ನೇಲೋಗಿ ಅವರ ಜೀವನದ ಕುರಿತು ಮಾತನಾಡಿದರು. ಬಸನಗೌಡ ಪಾಟೀಲ, ಬಸವರಾಜ ಹಂಚಲಿ  ಇತರರು ಇದ್ದರು.
ಇಂದು  ರಕ್ತದಾನ ಶಿಬಿರ
ಶಹಾಪುರ: ಸ್ಥಳೀಯ ಲಯನ್ಸ್ ಕ್ಲಬ್ ವತಿಯಿಂದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಡಿ.18 ರಂದು ಬುಧವಾರ ಆಯೋಜಿಸಲಾಗಿದೆ. ಜಿಪಂ ಸದಸ್ಯ ಹನುಮೇಗೌಡ ಮರಕಲ್ ಶಿಬಿರಕ್ಕೆ ಚಾಲನೆ ನೀಡುವರು ಎಂದು ಲಯನ್ಸ್ ಕ್ಲಬ್ ಪಿಆರ್ಓ ಬಂದೀಶ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.