ಸ್ಮಾರಕದಿಂದ ಕಾಲ ನಿರ್ಣಯ, ಖಗೋಳ ಶಾಸ್ತ್ರ ಪರಿಚಯ
ಶಹಾಪುರ: ಪಟ್ಟಣದಿಂದ ಕೇವಲ 4 ಕಿ.ಮಿ ಅಂತರದಲ್ಲಿ ಹೈವೇಗೆ ಹೊಂದಿಕೊಂಡಿರುವ ಕಾಲನಿರ್ಣಯದ ಐತಿಹಾಸಿಕವಾದ ಮಹಾಶಿಲೆಗಳ ಖಗೋಳ ಶಾಸ್ತ್ರ, ಪಂಚಾಂಗ ಪರಿಚಯದ ಮಹತ್ವದ ಸಾಲು ಜೋಡಣೆಯ ಕಲ್ಲುಗಳು ಐತಿಹಾಸಿಕ ಸ್ಮಾರಕವೆಂಬಂತಿವೆ. ವಿದ್ಯಾರ್ಥಿ ಸಮುದಾಯ ಶೈಕ್ಷಣಿಕ ಜ್ಞಾನಕ್ಕಾಗಿ ಇವುಗಳನ್ನು ನೋಡಲೇಬೇಕಾದದ್ದು ಮುಖ್ಯವಾದ ಸಂಗತಿಯಾಗಿದೆ.
ಉದಯ, ಅಸ್ತಮಾನ: ಶಹಾಪುರ ವಿಭೂತಿಹಳ್ಳಿಯ ಸಾಲುಗಲ್ಲುಗಳನ್ನು ಪೂರ್ವಕ್ಕೆ ಹಾಗೂ ಪಶ್ಚಿಮಕ್ಕೆ ಇರುವ ಸಾಲುಗಲ್ಲುಗಳ ಜೋಡಣೆಯ ಮೂಲೆಗಳಿಂದ ನೋಡಿದಾಗ ಸೂರ್ಯಾಸ್ತಮಾನವನ್ನು ನೋಡಲು ಸಾಧ್ಯವಾಗಬಹುದೆಂದು ಸಂಶೋಧಕರ ಅಭಿಪ್ರಾಯವಾಗಿದೆ. ಈ ಕಲ್ಲುಗಳನ್ನು ಖಗೋಳ ಶಾಸ್ತ್ರ ಮತ್ತು ಪಂಚಾಂಗವನ್ನು ಬಳಸಿ ಜೋಡಣೆ ಮಾಡಿರಬಹುದು. ಮಾರ್ಚ್ (ಮೇಷ ಸಂಕ್ರಾಂತಿ) ಸೆಪ್ಟೆಂಬರ್ (ತುಲಾ ಸಂಕ್ರಾಂತಿ) ವಿಷ್ಣು ಸಂವತ್ಸರ ದಿನದಂದು ಪೂರ್ವದಿಂದ ಪಶ್ಚಿಮದತ್ತ ಸಾಗುವ ಸಾಲುಗಲ್ಲುಗಳ ನೇರವಾಗಿ ಬಾನಿನಲ್ಲಿ ಸೂರ್ಯೋದಯದ ಸ್ಥಳವನ್ನು ನೇರವಾಗಿ ತೊರಿಸುತ್ತದೆ. ಅದೇ ದಿನ ಮುಸ್ಸಂಜೆಯ ವೇಳೆಯಲ್ಲಿ ಪಶ್ಚಿಮದತ್ತ ನೋಡಿದರೆ ರಾಷ್ಟ್ರೀಯ ಹೆದ್ದಾರಿಯಕಡೆ ಕಾಣುವ ಗುಡ್ಡಗಳ ಸಾಲುಗಳ ನಡುವೆ ಸೂರ್ಯ ಅಸ್ತಮವಾಗುವುದನ್ನು ನೇರವಾಗಿ ನೋಡಬಹುದು. ಈ ದಿಸೆಯಲ್ಲಿ ಇಲ್ಲಿನ ಸಾಲುಕಲ್ಲುಗಳ ಅಪರೂಪದ ಮಾಹಿತಿ ನೀಡುವ ಸ್ಮಾರಕವಾಗಿದ್ದು, ಸಂಶೋಧಕರು ಇತಿಹಾಸಕಾರರು, ಖಗೋಳ ಶಾಸ್ತ್ರಜ್ಞರು, ಪಂಚಾಂಗ ತಜ್ಞರು ಈ ಭಾಗದಲ್ಲಿ ಹೆಚ್ಚು ಹೆಚ್ಚು ಸಂಶೋಧನೆ ಮಾಡಿದಾಗ ಇನ್ನಷ್ಟು ಮಾಹಿತಿಗಳು ಹೊರ ಬೀಳಲಿವೆ. ಪ್ರವಾಸೊದ್ಯಮ ಇಲಾಖೆ, ಪ್ರಾಚ್ಯವಸ್ತುಇಲಾಖೆ ಈ ನಿಟ್ಟಿನಲ್ಲಿ ಪ್ರಯತ್ನಿಸುವುದು ಅಗತ್ಯವಾಗಿದೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

