ಗುಲ್ಬರ್ಗಾ

ಧರ್ಮವಾಡಿ; ಶಾಲಾ ಮೈದಾನ ಕಾಮಗಾರಿಗೆ ಶಾಸಕ ಚಾಲನೆ

Published On :

ಕ.ಪ್ರ. ವಾರ್ತೆ  ಆಳಂದ  ಡಿ.18
ತಾಲೂಕಿನ ಧರ್ಮವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಟದ ಮೈದಾನ ನಿರ್ಮಾಣ ಕಾಮಗಾರಿಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ 2.5 ಲಕ್ಷ ಮಂಜೂರಾಗಿದ್ದು, ಕಾಮಗಾರಿ ಶಾಸಕ ಬಿ.ಆರ್. ಪಾಟೀಲ್ ಗುದ್ದಲಿ ಪೂಜೆ ನರವೇರಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಶಾಲಾ ಮಕ್ಕಳು ಓದಿನ ಜತೆಗೆ ಪಠ್ಯೆತರ ಚಟುವಟಿಕೆಗಳಲ್ಲಿ ಮುನ್ನುಗ್ಗಬೇಕು. ಸುಸಜ್ಜಿತ ಆಟದ ಮೈದಾನ ನಿರ್ಮಾಣವಾದಾಗ ಮಾತ್ರ ವಿದ್ಯಾರ್ಥಿಗಳು ಆಟವಾಡಿ ಆರೋಗ್ಯವಂತರಾಗಿರಲು ಸಾಧ್ಯವಾಗುತ್ತದೆ ಎಂದರು.
ಗುಣಮಟ್ಟದ ಕಾಮಗಾರಿಯನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಶಾಸಕರು ತಾಕೀತು ಮಾಡಿದರು. ಗ್ರಾಮದ ಇತರೆ ಬೇಡಕೆಗಳಿಗೂ ಬರುವ ದಿನಗಳಲ್ಲಿ ಸ್ಪಂದಿಸುವುದಾಗಿ ಅವರು ಗ್ರಾಮಸ್ಥರಿಗೆ ಭರವಸೆ ನೀಡಿದರು.
ಜಿಪಂ ಸದಸ್ಯೆ ಮಂಗಲಾ ನರೋಣಿ, ತಾಪಂ ಸದಸ್ಯ ಶಿವಪುತ್ರಪ್ಪ ಕೊಟ್ಟರ್ಕಿ, ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಣ ಶೃಂಗೇರಿ, ಜಿಪಂ ಎಇಇ ಅಬ್ದುಲ್ ಸಲಾಂ ಮಾತನಾಡಿದರು.
ಕಡಗಂಚಿ ಗ್ರಾಪಂ ಅಧ್ಯಕ್ಷ ಶ್ರೀಕಾಂತ ಹೊಳ್ಕರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖಂಡರಾದ ವಿಠ್ಠಲರಾವ ಪಾಟೀಲ್, ಗುರುಲಿಂಗಪ್ಪ ಡೋಣಿ, ಗುರುಶರಣ ಪಾಟೀಲ್, ಗುಂಡೇರಾವ ಮಾದಗೊಂಡ, ಮೋಹನಗೌಡ ಪಾಟೀಲ್, ವಿಜಯಕುಮಾರ ತಡಕಲ್, ಅಣ್ಣಾರಾವ ಕುಲಕರ್ಣಿ, ಮಹಾಂತಪ್ಪ ವಠಾರ, ಮಹಾದೇವ ಸಾವಳಗಿ, ಸತೀಶ ಪನಶೆಟ್ಟಿ, ರಮೇಶ ಚವ್ಹಾಣ, ನೀಲಕಂಠರಾವ ಪಾಟೀಲ್, ರಾಮಚಂದ್ರ ಕಲಬುರ್ಗಿ ಸೇರಿದಂತೆ ಇತರರು ಪಾಲ್ಗೊಂಡಿದರು.
ಮುಖ್ಯಗುರು ಕಾಶಿನಾಥ ಗುಂಡದ ಸ್ವಾಗತಿಸಿದರು. ವಿಶ್ವನಾಥ ವಟಾರ್ ಕಾರ್ಯಕ್ರಮ ನಿರೂಪಿಸಿದರು. ಶಿವಾನಂದ ಹರವಾಳ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.