ಕಾರ್ಮಿಕರ ಮೇಲಿನ ಕೇಸ್ ಹಿಂಪಡೆಯಲು ಮನವಿ
ಲಿಂಗಸ್ಗೂರು: ಹಟ್ಟಿ ಚಿನ್ನದ ಗಣಿ ಕಂಪನಿ ಆಡಳಿತ ಮಂಡಳಿ ಕಾರ್ಮಿಕರ ಮೇಲೆ ವಿನಾಕಾರಣ ಪ್ರಕರಣ ದಾಖಲು ಮಾಡಿದ್ದು, ಕೂಡಲೇ ಪ್ರಕರಣ ಹಿಂಪಡೆದು ಪುನ- ಕೆಲಸಕ್ಕೆ ಹಾಜರಾಗಲು ಕ್ರಮ ಕೈಗೊಳ್ಳುವಂತೆ ದಸಂಸ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ ಕಾರ್ಮಿಕರು, ಹಟ್ಟಿ ಚಿನ್ನದಗಣಿ ಭೂ ಕೆಳಮೈ 2ನೇ ಪಾಳೆಯ ಕೆಲಸದಲ್ಲಿ ನಿರತರಾದ ಸಂದರ್ಭದಲ್ಲಿ ಕಳೆದ ಅ.26 ರಂದು ಅಮರೇಶ ಚಿಕ್ಕಹೆಸರೂರು ಎಂಬ ಕಾರ್ಮಿಕ ಹೃದಯಘಾತದಿಂದ ಬಳಲುತ್ತಿರುವಾಗ ಕಾರ್ಮಿಕರು ಕಂಪನಿ ಆಸ್ಪತ್ರೆಗೆ ದಾಖಲಿಸಿದರು. ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಸುದ್ದಿ ತಿಳಿದ ಕಾರ್ಮಿಕರು ಸ್ಥಳಕ್ಕೆ ದಾವಿಸಿ ವೈದ್ಯರ ನಿರ್ಲಕ್ಷ್ಯ ಅರಿತು ಆಕ್ರೋಶಗೊಂಡು ವೈದ್ಯರು ಮತ್ತು ಸಿಬ್ಬಂದಿ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ಇದನ್ನು ಅರಿತ ಕಂಪನಿ ಆಡಳಿತ ಮಂಡಳಿ ವಿನಾಕಾರಣ 16 ಜನ ಕಾರ್ಮಿಕರ ಮೇಲೆ ಪ್ರಕರಣ ದಾಖಲು ಮಾಡಿದ್ದು, ಅಲ್ಲದೆ ಪ್ರಧಾನ ವ್ಯವಸ್ಥಾಪಕರು ನೋಟೀಸು ಜಾರಿ ಮಾಡಿ ತಾತ್ಕಾಲಿಕವಾಗಿ ಕೆಲಸಕ್ಕೆ ಹೋಗದಂತೆ ತಡೆಹಿಡಿದ್ದಾರೆ. ಈ ಬಗ್ಗೆ ಕೂಲಂಕುಶವಾಗಿ ಪರಿಶೀಲನೆ ನಡೆಸಿ ಕಾರ್ಮಿಕರ ಮೇಲೆ ಮಾಡಿದ ಪ್ರಕರಣ ಹಿಂಪಡೆದು ಪುನಃ ಕೆಲಸಕ್ಕೆ ಹಾಜರಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ವೇಳೆ ದಸಂಸ ತಾಲೂಕು ಸಂಚಾಲಕ ಹನುಮಂತ ತವಗ, ಮುಖಂಡರಾದ ಹಾಜಪ್ಪ ಕರಡಕಲ್, ಮಹಾದೇವಪ್ಪ ಪರಂಪುರ, ಶರಣಪ್ಪ ಕಟ್ಟಿಮನಿ, ಲಚಪ್ಪ ಬಡಿಗೇರ, ದುರುಗಪ್ಪ ಆಗ್ರಹಾರ, ಆದಪ್ಪ, ತಿಮ್ಮಣ್ಣ ಮೇಸ್ತ್ರಿ, ದೇವಪ್ಪ ನಿಲೋಗಲ್ ಸೇರಿದಂತೆ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

