ಗುಲ್ಬರ್ಗಾ

ನೇಮಕಾತಿ ಸ್ಥಗಿತಕ್ಕೆ ಎನ್‌ಎಸ್‌ಯುಐ ಮನವಿ

Published On :

ಗುಲ್ಬರ್ಗ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ವಿವಿಧ ನೇಮಕಾತಿ ಸ್ಥಗಿತಗೊಳಿಸಬೇಕೆಂದು ಎನ್‌ಎಸ್‌ಯುಐ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದೆ.
ಹೈ-ಕದ 371 ಕಲಂ ಜಾರಿಯಲ್ಲಿದ್ದರೂ ಬೆಳಗಾವಿ ವಿಟಿಯು ವಿಶ್ವವಿದ್ಯಾಲಯದ ವಿವಿಧ ಉಪಕೇಂದ್ರಗಳಲ್ಲಿ ಖಾಲಿಯಿರುವ ಹುದ್ದೆಗಳಗೆ ಅರ್ಜಿ ಆಹ್ವಾನಿಸಿದೆ. ಆದರೆ  371 (ಜೆ) ಕಲಂ ಜಾರಿಯಲ್ಲಿರುವುದರಿಂದ ಕರ್ನಾಟಕ ಸರ್ಕಾರದ ಎಲ್ಲಾ ಹುದ್ದೆಗಳು ತುಂಬುವುದನ್ನು ನಿಲ್ಲಿಸಿ, ಅದರ ಅನುಷ್ಠಾನದ ನಂತರ ಎಲ್ಲಾ ನೇಮಕಾತಿಗಳು ತುಂಬಬೇಕೆಂಬ ನಿಯಮವಿದ್ದರೂ ಅದನ್ನು ಉಲ್ಲಂಘಿಸಿ ವಿಟಿಯು ತರಾತುರಿಯಲ್ಲಿ ಮಾರ್ಚ್‌ಏಪ್ರಿಲ್‌ನಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನಿಸಿ, ಅರ್ಜಿದಾರರಿಗೆ ಸಂದರ್ಶನ ಪತ್ರ ರವಾನಿಸಿದೆ. ಆದರೆ ಹೈ.ಕ ಭಾಗದ ಅನೇಕ ಅಭ್ಯರ್ಥಿಗಳಿಗೆ ಇದರಿಂದ ಅನ್ಯಾಯವಾಗುತ್ತದೆ. ತಕ್ಷಣ ನೇಮಕಾತಿಯನ್ನು ನಿಲ್ಲಿಸಿ ಹೊಸದಾಗಿ ಅರ್ಜಿ ಅಹ್ವಾನಿಸಿ 371 (ಜೆ) ಕಲಂನಡಿ ಈ ಭಾಗದ ಹುದ್ದೆಗಳನ್ನು ಮತ್ತು ರಾಜ್ಯದಲ್ಲಿರುವ ಮೀಸಲಾತಿಯಂತೆ ಹುದ್ದೆ ತುಂಬಬೇಕೆಂದು ಅಧ್ಯಕ್ಷ ಪ್ರಶಾಂತ ಪಾಟೀಲ್ ಹೇಳಿದರು.
ಈ ಸಂದರ್ಭದಲ್ಲಿ ಸಿದ್ದಾರ್ಥ ರಂಗನೂರ, ಶಿವಾ ಅಷ್ಟಗಿ, ವಿಶಾಲ ಪಾಟೀಲ್, ಸದಾನಂದ ಕೆ, ರಾಕೇಶ ಅಷ್ಟಗಿ, ಚನಬಸಪ್ಪ ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.