ಭವಭಂಗ- ಮಾನಭಂಗ ಸಾಕು, ಸತ್ಕರ್ಮಕ್ಕೆ ಸಿದ್ಧರಾಗಿ: ಶ್ರೀಗಳು
ಕ.ಪ್ರ. ವಾರ್ತೆ ಗುಲ್ಬರ್ಗ ಡಿ.22
ಯಾಕೋ ಈ ಭವಭಂಗ, ಸಾಕೋ ಈ ಮಾನಭಂಗ... ಸಾಕು ಬೇಕಲವೋ ರಂಗ... ಭವ, ಮಾನಭಂಗದ ಕುರಿತಂತೆ ದಾಸರ ಕೀರ್ತನೆಯ ಸಾಲುಗಳಿವು.
ಕಳೆದ 4 ದಿನಗಳಿಂದ ಗುಲ್ಬರ್ಗ ಮಹಾನಗರದಲ್ಲಿ ವಾಸ್ತವ್ಯ ಹೂಡಿರುವ ಉತ್ತರಾದಿ ಮಠಾಧೀಶ ಸತ್ಯಾತ್ಮತೀರ್ಥ ಶ್ರೀಗಳು ಇಲ್ಲಿನ ನೂತನ ವಿದ್ಯಾಲಯ ಮೈದಾನದಲ್ಲಿ ನಡೆಸಿಕೊಡುತ್ತಿರುವ ಪ್ರವಚನ ಮಾಲಿಕೆಯಲ್ಲಿ ಮಾನವ, ಭವಭಂಗ, ಮಾನಭಂಗ, ಭಗವಂತನ ಕರುಣೆ, ಪರೋಪಕಾರ, ಸತ್ಯ, ತ್ಯಾಗ, ಅಂಹಿಸೆ ಇತ್ಯಾದಿ ವಿಚಾರಗಳನ್ನು ಬಲು ಸೊಗಸಾಗಿ, ಸರಳವಾಗಿ, ಸುಂದರವಾಗಿ, ಉದಾಹರಣೆ, ಕಥೆ, ಉಪಕಥೆಗಳ ಮೂಲಕ, ಮಹಾಭಾರತದಲ್ಲಿನ ಪ್ರಸಂಗಗಳೊಂದಿಗೆ ತಾಳೆ ಹಾಕಿ ಹೇಳುವ ಮೂಲಕ ಸೇರಿದ್ದ ಭಕ್ತರಿಗೆ ಸತ್ಕರ್ಮಿಯಾಗುವಂತೆ ಪ್ರೇರೇಪಿಸಿದರು.
ಮಾಗಿಯ ಮೈ ಕೊರೆವ ಚಳಿಯಲ್ಲಿಯೂ ನೂತನ ವಿದ್ಯಾಲಯದ ಒಳಾಂಗಣದಲ್ಲಿರುವ, ಆಸ್ತಿಕ ಭಕ್ತ ಜನರಿಂದ ಕಿಕ್ಕಿರಿದು ತುಂಬಿದ್ದ ಸತ್ಯಪ್ರಮೋದ ಸಭಾ ಮಂಟಪದಲ್ಲಿ 1 ಗಂಟೆಗೂ ಹೆಚ್ಚು ಕಾಲ ಉಪನ್ಯಾಸ ನೀಡಿದ ಶ್ರೀಗಳು ತಮ್ಮ ಮಾತಿನುದ್ದಕ್ಕೂ ಪುರಾಣ ಪ್ರಸಂಗಗಳು ಹಾಗೂ ಈಗಿನ ಸನ್ನಿವೇಶಗಳು, ಸಂಗತಿಗಳನ್ನು ಸೋದಾಹರಣವಾಗಿ ವಿವರಿಸುತ್ತ ಭಗವನ್ನಾಮಸ್ಮರಣೆ ಹೇಗೆ ಭವಭಂಗ-ಮಾನಭಂಗದಿಂದ ಎಲ್ಲರನ್ನು ಕಾಪಾಡುತ್ತದೆ ಎಂಬುದನ್ನು ತಿಳಿಹೇಳಿದರು.
ಇನ್ನೂ ವಾರಕಾಲ ಗುಲ್ಬರ್ಗದಲ್ಲಿ ಸತ್ಯಾತ್ಮತೀರ್ಥ ಶ್ರೀಗಳ ವಾಸ್ತವ್ಯವಿದೆ. ಅವರು ಇಲ್ಲಿರುವಷ್ಟು ದಿನ ಇಲ್ಲಿನ ನೂತನ ವಿದ್ಯಾಲಯ ಸತ್ಯಪ್ರಮೋದತೀರ್ಥ ಒಳಾಂಗಣದಲ್ಲಿ ನಿತ್ಯ ಸಂಜೆ 7 ಗಂಟೆಯಿಂದ ಭಕ್ತರನ್ನು ಉದ್ದೇಶಿಸಿ ಉಪನ್ಯಾಸ ನೀಡಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

