ಗುಲ್ಬರ್ಗಾ

ಗುರುಮಠಕಲ್‌ನಲ್ಲಿ ಜನಪದ ಜಾತ್ರೆ ಮೆರಗು

Published On :

ಗುರುಮಠಕಲ್: ಇಲ್ಲಿನ ಖಾಸಾಮಠದಲ್ಲಿ ನಡೆದ ಅನಿಕೇತನ ಟ್ರಸ್ಟ್, ಯಾದಗಿರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವುಗಳ ಸಂಯುಕ್ತಾಶ್ರಯದಲ್ಲಿ ಗಡಿನಾಡ ಜನಪದ ಜಾತ್ರೆ ಮೆರಗು ತಂದಿತು.
ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಖಾಸಾಮಠದ ಶಾಂತವೀರ ಮುರುಘರಾಜೇಂದ್ರ ಶ್ರೀ ಜನಪದ ಸಂಸ್ಕೃತಿಯನ್ನು ಇಂದಿನ ಪೀಳಿಗೆಗೆ ಪರಿಚಯಿಸಲು ಇಂತಹ ಜನಪದ ಜಾತ್ರೆಗಳು ಸಹಕಾರಿ ಎಂದರು. ಕಾರ್ಯಕ್ರಮವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿದ ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಮಾತನಾಡಿ, ಜನಪದ ಸಂಸ್ಕೃತಿ ಉಳಿಸಿ ಬೆಳೆಸಲು ಸಂಘ ಸಂಸ್ಥೆಗಳು ಶ್ರಮಿಸಬೇಕೆಂದು ಕರೆ ನೀಡಿದರು.
ಸನ್ಮಾನ: ಕೆಪಿಸಿಸಿ ರಾಜ್ಯ ಎಸ್ಸಿ ಘಟಕದ ಸಹ ಸಂಚಾಲಕ ಟಿ. ಶಶಿಧರ ರಸ್ತಾಪುರ, ಕಾರ್ಮಿಕ ವಿಭಾಗ ರಾಜ್ಯ ಕಾರ್ಯದರ್ಶಿ ಸಂತೋಷ ನಿರ್ಮಲಕರ್, ಬಾಲಾಜಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ವಿಜಯ ರಾಠೋಡ, ಪ್ರಯೋಗ ಪ್ರತಿಷ್ಠಾನ ಕಾರ್ಯದರ್ಶಿ ಮೊಗುಲಪ್ಪ ನಾಯ್ಕಿನ್ ಇವರಿಗೆ ಸನ್ಮಾನಿಸಲಾಯಿತು.
ಕಲೆಗಳ ಪ್ರದರ್ಶನ: ಪ್ರದರ್ಶನಗೊಂಡ ಜನಪದ ನೃತ್ಯ, ಬಂಜಾರ ನೃತ್ಯ, ಮೊಹರಂ ಕುಣಿತ, ಡೊಳ್ಳು ಕುಣಿತ, ಹಲಿಗೆ ಕುಣಿತ, ಶೋಭಾನೆ ಪದ, ಬೀಸು ಪದ, ಜೋಗುಳ ಪದ, ಭಜನೆ ಪದಗಳು ನೋಡುಗರ ಗಮನ ಸೆಳೆದವು.
ಬೆಳಗಾವಿ ಜಿಲ್ಲೆ ಸಿರಸಂಘಿ ಮಠದ ಶ್ರೀ ಸಮ್ಮುಖ ವಹಿಸಿದ್ದರು. ಡಾ. ಗಾಳೆಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಅನಿಕೇತನ ಟ್ರಸ್ಟ್ ಅಧ್ಯಕ್ಷ ಮಲ್ಲೇಶ ಕುರಕುಂದಿ ಪ್ರಾಸ್ತಾವಿಕ ಮಾತನಾಡಿದರು. ಕಸಾಪ ಖಜಾಂಚಿಗಳಾದ ಬಸವರಾಜ ಮೋಟ್ನಳ್ಳಿ, ಸಿದ್ದಣ್ಣ ಗೋಗಿ, ಬಸವರಾಜ ಬೂದಿ ಇನ್ನಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.