ಗುಲ್ಬರ್ಗಾ

ಧರಂ ಹುಟ್ಟುಹಬ್ಬ

Published On :

ಚಿಂಚೋಳಿ: ಮಾಜಿ ಮುಖ್ಯಮಂತ್ರಿ, ಸಂಸದ ಎನ್.ಧರ್ಮಸಿಂಗ್ ಅವರ 77ನೇ ಹುಟ್ಟುಹಬ್ಬವನ್ನು ತಾಲೂಕು ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಿಹಿ ತಿಂಡಿ ಹಂಚಿಕೊಂಡು ಸಂಭ್ರಮಿಸಿದರು.ಕಾಂಗ್ರೆಸ್ ಮುಖಂಡರಾದ ಕೆ.ಎಂ. ಬಾರಿ, ಪಪಂ ಸದಸ್ಯ ಅಬ್ದುಲ್ ಬಾಸೀತ್, ರಾಜು ಪವಾರ, ಕೆಪಿಸಿಸಿ ಎಸ್ಸಿ ಘಟಕದ ಸಂಘಟನಾ ಕಾರ್ಯದರ್ಶಿ ಶಿವಕುಮಾರ್ ಕೊಳ್ಳೂರ, ವಿಜಯಕುಮಾರ್ ಗಂಗನಪಳ್ಳಿ, ಬಸವಣ್ಣ ಪಾಟೀಲ್, ತುಕಾರಾಮ ಪವಾರ, ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ಜಗದೀಶಸಿಂಗ್ ಠಾಕೂರ, ರಾಜು ನವಲೇ, ಸಂಗಯ್ಯ ಸ್ವಾಮಿ, ಭೀಮರಾವ ಪವಾರ, ಶಿವನಾಗಯ್ಯ ಸ್ವಾಮಿ ಇತರರು ಹುಟ್ಟು ಹಬ್ಬ ಆಚರಿಸಿದರು.ಇದೇ ಸಂದರ್ಭದಲ್ಲಿ  ಸಂಸದ ಧರ್ಮಸಿಂಗ್ ಅವರ ಹುಟ್ಟು ಹಬ್ಬದ ನಿಮಿತ್ತವಾಗಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ನೀಡಿದರು.
ಅಟಲ್  ಜನ್ಮದಿನ
ಚಿಂಚೋಳಿ: ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ 89ನೇ ಹುಟ್ಟು ಹಬ್ಬವನ್ನು ತಾಲೂಕು ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ಕಾರ್ಯಕರ್ತರು ಸಿಹಿ ತಿಂಡಿ ಹಂಚಿ ಸಂಭ್ರಮಿಸಿದರು.ತಾಲೂಕು ಬಿಜೆಪಿ ಅಧ್ಯಕ್ಷ ಶಾಮಸುಂದರ ಪವಾರ, ಮಾಜಿ ಅಧ್ಯಕ್ಷ ರೇವಣಸಿದ್ದಪ್ಪ ಮಜ್ಜಗಿ, ಹಿರಿಯ ಮುಖಂಡರಾದ ಮಧುಸೂಧನ ಕಾಟಾಪುರ, ಬಿಜೆಪಿ ನಗರಾಧ್ಯಕ್ಷ ವಿನೋದಕುಮಾರ್, ನರಸಿಂಗ್ ಪವಾರ, ಶ್ರೀಧರ ಪಾಟೀಲ್  ಭಾಗಹಿಸಿದ್ದರು.
28 ರಂದು ಸಂಕೀರ್ತನೆ
ಗುಲ್ಬರ್ಗ: ಹರಿದಾಸ ಸಾಹಿತ್ಯ ಪ್ರಚಾರ ವಾಹಿನಿಯು ಟಿಟಿಡಿ ದಾಸ ಸಾಹಿತ್ಯ ಪ್ರಾಜೆಕ್ಟಿನ್ ಸಹಯೋಗ ಮತ್ತು ನಗರದ 30 ಭಜನಾ ಮಂಡಳಿಗಳ ಸಹಕಾರದಲ್ಲಿ ಡಿ.28 ರಂದು ಸಂಜೆ 5ಕ್ಕೆ ಬ್ರಹ್ಮಪುರದ ರಾಯರ ಮಠದಿಂದ ನೂತನ ವಿದ್ಯಾಲಯದ ಸತ್ಯಪ್ರಮೋದ ಸಭಾ ಮಂಟಪದವರೆಗೆ ಪಥ ಸಂಚಲನೆದೊಂದಿಗೆ 159ನೇ ನಗರ ಸಂಕೀರ್ತನೆ ನಡೆಯಲಿದೆ.ಪಂ. ಗೋಪಾಲಾಚಾರ್ಯ ಅಕಮಂಚಿ ಅವರ ಮಾರ್ಗದರ್ಶನದಲ್ಲಿ ನಡೆಯುವ ಈ ನಗರ ಸಂಕೀರ್ತನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಧ್ಯಾತ್ಮ ಬಂಧುಗಳು ಭಾಗವಹಿಸಲು ಸಂಚಾಲಕ ಭೀಮಭಟ್ಟ ಬೆಂಕಿ ಮೋತಕಪಲ್ಲಿ ಕೋರಿದ್ದಾರೆ.
28ರಂದು ಬೆಳ್ಳಿಹಬ್ಬ
ಗುಲ್ಬರ್ಗ: ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘವು ಡಿ.28ರಂದು ಬೆ.11ಕ್ಕೆ ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಬೆಳ್ಳಿ ಹಬ್ಬ ಸಮಾರಂಭ ಹಾಗೂ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಚಿವರಾದ ರಾಮಲಿಂಗಾರೆಡ್ಡಿ, ಉಮಾಶ್ರೀ, ಕಿಮ್ಮನೆ ರತ್ನಾಕರ ಭಾಗವಹಿಸಲಿದ್ದಾರೆ.ಸಮಾರಂಭದಲ್ಲಿ ಪಾಲ್ಗೊಳ್ಳುವ ವಿಕಲಚೇತನ ನೌಕರರಿಗೆ 27 ಮತ್ತು 28ರಂದು ಎರಡು ದಿನಗಳ ಕಾಲ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಿದೆ.
ವಿವಿಧೆಡೆ ಕ್ರಿಸ್‌ಮಸ್
ಚಿಂಚೋಳಿ: ಪಟ್ಟಣ ಸೇರಿದಂತೆ ತಾಲೂಕಿನ ಅನೇಕ ಗ್ರಾಮಗಳಲ್ಲಿ ಕ್ರೈಸ್ತ ಬಾಂಧವರು ಕ್ರಿಸ್‌ಮಸ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.
ತಾಲೂಕಿನ ಐನೋಳಿ, ಮಿರಿಯಾಣ, ಪರದಾರ ಮೋತಕಪಳ್ಳಿ, ಕೊಳ್ಳೂರ, ತುಮಕುಂಟಾ, ಸಾಲೇಬೀರನಳ್ಳಿ, ನರನಾಳ, ಮೋಘಾ, ಚಂದನಕೇರಾ, ಚೆಂಗಟಾ, ಬೆನಕನಳ್ಳಿ, ಸಲಗರ ಬಸಂತಪುರ, ಚಿಮ್ಮನಚೋಡ, ಐನಾಪುರ, ಕುಂಚಾವರಂ, ಶಾದೀಪುರ, ಶಿವರೆಡ್‌ಡಿ ಪಳ್ಳಿ, ಚಂದಾಪುರ, ವೆಂಕಟಾಪುರ, ಪೋಲಕಪಳ್ಳಿ ಮುಂತಾದ ಗ್ರಾಮಗಳಲ್ಲಿರುವ ಚರ್ಚಗಳಿಗೆ ಕ್ರಿಸ್ ಣಮಸ್ ಹಬ್ಬದ ನಿಮಿತ್ತವಾಗಿ ವಿವಿಧ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ಅನೇಕ ಚರ್ಚ್‌ಗಳಲ್ಲಿ ಏಸುವಿನ ಕೀರ್ತನೆಗಳು, ಭಜನೆಗಳನ್ನು ನಡೆಸಲಾಯಿತು. ಮಂಗಳವಾರ ರಾತ್ರಿ ಅನೇಕ ಕ್ರಿಶ್ಚಿಯನ್ ಬಾಂಧವರು ಮನೆ ಮನೆಗೆ ತೆರಳಿ ಕ್ರಿಸ್‌ಮಸ್ ಹಬ್ಬದ ಶುಭ ಕೋರಿದರು. ಮಕ್ಕಳು,ಮಹಿಳೆಯರು ಹೊಸ ಬಟ್ಟೆ  ಧರಿಸಿ ಏಸು ನಾಮಸ್ಮರಣೆ ಮಾಡಿದರು.
ನಾಳೆ ಪ್ರತಿಭಟನಾ ರ್ಯಾಲಿ
ಜೇವರ್ಗಿ: ಸಂವಿಧಾನ ವಿಧಿ 371(ಜೆ) ಅಡಿಯಲ್ಲಿ ಮುಂಬಡ್ತಿ ಹಾಗೂ ಬಿಸಿಟಿ ಘೋಷಣೆಗಾಗಿ ಒತ್ತಾಯಿಸಿ ಡಿ. 27ರಂದು ಕರ್ನಾಟಕ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆಯ ಎಲ್ಲ ಸರ್ಕಾರಿ ನೌಕರರು ಸಾಮೂಹಿಕ ರಜೆ ಹಾಕಿ ಬೃಹತ್ ಪ್ರತಿಭಟನಾ ರ್ಯಾಲಿ ಕೈಗೊಳ್ಳಲಿದ್ದಾರೆ.   ಬೆಳಗ್ಗೆ 10ಕ್ಕೆ ಸರ್ಕಾರಿ ನೌಕರರ ಭವನದಲ್ಲಿ ನೌಕರರು ಸಮಾವೇಶಗೊಂಡು ಮೆರವಣಿಗೆ ನಡೆಸಲು ನಿರ್ಧರಿಸಿದೆ.
ವಾಜಪೇಯಿ ವ್ಯಕ್ತಿತ್ವ ಆದರ್ಶಪ್ರಾಯ
ಕೆಂಭಾವಿ: ವಾಜಪೇಯಿ ಅವರ ವ್ಯಕ್ತಿತ್ವ ಆದರ್ಶಪ್ರಾಯವಾದುದು. ಅಜಾತ ಶತ್ರು ಆದ ಅವರು, ತಮ್ಮ ಆಡಳಿತಾವಧಿಯಲ್ಲಿ ಇಡೀ ವಿಶ್ವವೇ ತಬ್ಬಿಬ್ಬಾಗುವಂತೆ ಪೋಕ್ರಾನ್ ಕ್ರಾಂತಿ, ತಮ್ಮ ಕನಸಿನ ಕೂಸಾದ ರಾಷ್ಟ್ರೀಯ ಹೆದ್ದಾರಿ ಹಾಗೂ ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನೆಗೆ ಚಾಲನೆ ನೀಡಿದರು ಎಂದು ಬಿಜೆಪಿ ಮುಖಂಡ ಯಲ್ಲಯ್ಯ ನಾಯಕ ವನದುರ್ಗ ಹೇಳಿದರು.
  ಪಟ್ಟಣದಲ್ಲಿ ಅಟಲ್‌ಜೀ 90ನೇ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಮಾತನಾಡಿ, ವಾಜಪೇಯಿ ಅವರು ಒಬ್ಬ ದೂರದೃಷ್ಟಿ ಹೊಂದಿದ ನಾಯಕ. ದೇಶದ ನಾಲ್ಕೂ ಮೂಲೆಗಳಿಗೂ ಸಂಪರ್ಕ ಕಲ್ಪಿಸುವ 15 ಕಿಲೋಮೀಟರ್ ಉದ್ದದ ಸುವರ್ಣ ಚತುಷ್ಪಥ ಹೆದ್ದಾರಿಯನ್ನು ದಾಖಲೆಯ ಸಮಯದಲ್ಲಿ ಪೂರ್ಣಗೊಳಿಸಿದ್ದಾರೆ. ಅವರ ವ್ಯಕ್ತಿತ್ವ ಹಾಗೂ ಸಾಧನೆ ಬಿಜೆಪಿಗೆ ಶ್ರೀರಕ್ಷೆ ಹಾಗೂ ಕಾರ್ಯಕರ್ತರಿಗೆ ಪ್ರೇರಣೆ ಎಂದರು.
  ಈ ಸಂದರ್ಭದಲ್ಲಿ ಸಿದ್ದಲಿಂಗ ರೆಡ್ಡಿ ದಿಗ್ಗಾವಿ, ತಾಲೂಕು ರೈತ ಮೋರ್ಚಾ ಅಧ್ಯಕ್ಷ ಮಲಕಪ್ಪ ಶಹಾಪುರಕರ್, ಶಕತಿ ಕೇಂದ್ರ ಅಧ್ಯಕ್ಷ ಶ್ರೀನಿವಾಸ ಕುಲಕರ್ಣಿ ಏವೂರ, ಭಾಗಪ್ಪ ಕೆಂಭಾವಿ, ಅಮರಪ್ಪ ಶಹಾಪುರಕರ್, ಶಂಶುದ್ದೀನ ಖಲೀಫಾ, ಮಹಾದೇವಪ್ಪ ಹಂಗರಗಿ, ಜಟ್ಟೆಪ್ಪ, ಚಂದ್ರಶೇಖರ, ಶುಭಾಶಶಿ, ಭೋಗಪ್ಪ ಗುಬ್ಬೇವಾಡ, ಮುತಜಾ, ಸುಭಾಶ್ಚಂದ್ರ ಇದ್ದರು.
ಶಹಾಪುರದಲ್ಲಿ ಹಣ್ಣು ವಿತರಣೆ
ಶಹಾಪುರ: ಮುತ್ಸದ್ಧಿ ರಾಜಕಾರಣಿಯಾಗಿ, ಅಜಾತಶತ್ರು ಎನಿಸಿಕೊಂಡಿರುವ ಮಾಜಿ ಪ್ರಧಾನಿ ಅಟಲ್‌ಜೀ 89ನೇ ಹುಟ್ಟುಹಬ್ಬದ ಸ್ಥಳೀಯ ಬಿಜೆಪಿ ಘಟಕ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣು ಹಂಪಲು ನೀಡುವ ಮೂಲಕ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಈ ವೇಳೆ ಸಮಸ್ತ ಕಾರ್ಯಕರ್ತರು ವಾಜಪೇಯಿ ಗುಣಗಾನಮಾಡುತ್ತಾ ಅವರ ಆರೋಗ್ಯ ಸುಧಾರಿಸಲಿ ಎಂದು ಆಶಿಸಿದರು. ಪಕ್ಷದ ತಾಲೂಕಾ ಅಧ್ಯಕ್ಷ ಮಲ್ಲಿಕಾರ್ಜುನ ಚಿಲ್ಲಾಳ, ದೇವಿಂದ್ರಪ್ಪ ಕೋನೇರ, ಶಾಂತವೀರ ಪಾಟೀಲ ಬಸವರಾಜ ಅರೂಣಿ, ಶರಭಣ್ಣ ರಸ್ತಾಪುರ, ಶಂಕರ ಕೊನೇರ, ಹಣಮಂತ್ರಾಯ ಸಗರ, ಚನ್ನಬಸವ ಇಟಿಗಿ, ಭೀಮರಾಯ ಯರಗೊಳ ಪಾಲ್ಗೊಂಡಿದ್ದರು.
ಕರವೇ ಗ್ರಾಮ
ಘಟಕ ಉದ್ಘಾಟನೆ
ಯಾದಗಿರಿ: ಕನ್ನಡದ ಭಾಷೆ ನೆಲ ಜಲ ಉಳಿವುಗಾಗಿ ಒಗ್ಗಟ್ಟಿನಿಂದ ಹೋರಾಟ ಮಾಡಿದಾಗ ಕನ್ನಡಕ್ಕೆ ಹೋರಾಡಿದ ಅನೇಕ ಮಹನಿಯರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎನ್. ಭಮುನಾಯಕ ಹೇಳಿದರು. ತಾಲೂಕಿನ ಜೀನಿಕೇರಾದಲ್ಲಿ ಹಮ್ಮಿಕೊಂಡಿದ್ದ ಕರವೇ ಗ್ರಾಮ ಘಟಕದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕರವೇ ರಾಜ್ಯಾದ್ಯಂತ ಹಲವಾರು ಹೋರಾಟಗಳನ್ನು ಮಾಡುವುದರ ಮೂಲಕ ಕನ್ನಡಿಗರಿಗೆ ನಿಜವಾದ ನ್ಯಾಯ ಒದಗಿಸಿಕೊಡುವಲ್ಲಿ ಅವಿರತ ಪ್ರಯತ್ನ ಮಾಡಿದೆ ಎಂದರು. ತಾಪಂ ಸದಸ್ಯ ಹಣಮಂತ ಲಿಂಗೇರಿ, ಸಿದ್ದಪ್ಪ ಲಿಂಗೇರಿ, ಕರವೇ ತಾಲೂಕಧ್ಯಕ್ಷ ವೆಂಕಟೇಶ ಮಿಲ್ಟ್ರಿ ಮಹಾವೀರ ಲಿಂಗೇರಿ ಇತರರು ಮಾತನಾಡಿದರು.
ಇಂದು ತಿಮ್ಮಾಪುರದಲ್ಲಿ ಸಾಂಸ್ಕೃತಿಕ ಮೇಳ
ಸುರಪುರ: ಸಮೀಪದ ತಿಮ್ಮಾಪುರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಬೀಚಮೊಹಲ್ಲಾದಲ್ಲಿ ಗುರುವಾರ ಬೆಳಗ್ಗೆ 9.30ಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯ ಮತ್ತು ತಾಲೂಕು ಉರ್ದು ಟೀಚಸ್ಸ್ ಕೌನ್ಸಿಲ್ ಸಂಯುಕ್ತಾಶ್ರಯದಲ್ಲಿ ತಾಲೂಕು ಮಟ್ಟದ ಉರ್ದು ಪ್ರಾಥಮಿಕ ಶಾಲೆಗಳ ಮಕ್ಕಳ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಮೇಳ ಏರ್ಪಡಿಸಲಾಗಿದೆ. ಶಾಸಕ ರಾಜಾ ವೆಂಕಟಪ್ಪನಾಯಕ ಉದ್ಘಾಟಿಸುವರು. ಬಿಇಒ ಎ.ವಿ. ಕೆಂಪರಂಗಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ತಾಪಂ ಅಧ್ಯಕ್ಷ ಶ್ರೀನಿವಾಸಗೌಡ ಪಾಟೀಲ್, ಪುರಸಭೆ ಅಧ್ಯಕ್ಷ ದೇವಿಂದ್ರಪ್ಪ ಕಳ್ಳಿಮನಿ, ಸಯ್ಯದ್ ಸಯಿಮೋದ್ದೀನ್ ಖಾದ್ರಿ, ಅಬ್ದುಲ್ ಗಫಾರ ನಗನೂರಿ, ಕವಿತಾ ಎಲಿಗಾರ, ಭೀಮಣ್ಣ ಭೋಸ್ಗಿ, ಹಳೆಪ್ಪ ಖಜಾಂಚಿ, ಪಡಿಯಣ್ಣ ಬೆಳ್ಳುಬ್ಬಿ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ಶಾಲೆಯ ಮುಖ್ಯಗುರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.