ಗುಲ್ಬರ್ಗಾ

ವಾಜಪೇಯಿ ಆದರ್ಶ, ಸರಳ, ಪ್ರಾಮಾಣಿಕ ವ್ಯಕ್ತಿ; ಡಾ. ಬಾಳಿ

Published On :

ಗುಲ್ಬರ್ಗ/ಶಹಾಬಾದ್: ಮಾಜಿ ಪ್ರಧಾನಿ ವಾಜಪೇಯಿಯವರ ಸರಳ ವ್ಯಕ್ತಿತ್ವ, ಪ್ರಾಮಾಣಿಕ ನಡೆ, ನುಡಿ, ಆದರ್ಶ ಬದುಕು, ರಾಜಕೀಯ ಚಾಣಾಕ್ಷತೆಯಿಂದ ಆದರ್ಶ ರಾಜಕಾರಣಿಯಾಗಿದ್ದಾರೆ ಎಂದು ಜಿಪಂ ಮಾಜಿ ಸದಸ್ಯ ಡಾ. ಗುಂಡಣ್ಣ ಬಾಳಿ ಹೇಳಿದರು.
ರಾವೂರ ಗ್ರಾಮದಲ್ಲಿ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಹಮ್ಮಿಕೊಂಡ ವಾಜಪೇಯಿರವರ ಹುಟ್ಟುಹಬ್ಬದ ಅಂಗವಾಗಿ 60ಕ್ಕೂ ಹೆಚ್ಚು ಮಕ್ಕಳಿಗೆ ಸ್ಲೇಟು, ಪೆನ್ನು, ನೋಟ್ ಬುಕ್, ಬ್ಯಾಗ್ ವಿತರಿಸಿ ಮಾತನಾಡಿದರು.
ವಿದೇಶಾಂಗ ನೀತಿಗಳು, ಕೈಗೊಂಡ ಅಭಿವೃದ್ಧಿ ಕಾರ್ಯಗಳು ಇಂದಿಗೂ ಎಲ್ಲ ರಾಜಕಾರಣಿಗಳಿಗೆ ಮಾರ್ಗದರ್ಶಕ, ಪ್ರೇರಣಾದಾಯಕವಾಗಿವೆ. ಅಂಥವರಿಗೆ ಭಾರತ ರತ್ನ ಪ್ರಶಸ್ತಿ ಸಿಗದೆ ಇರುವುದು ವಿಷಾದನೀಯವಾಗಿದೆ ಎಂದರು.
ಶಕ್ತಿ ಕೇಂದ್ರದ ಅಧ್ಯಕ್ಷ ಶರಣಪ್ಪ ಸಣಮೋ, ತಾಲೂಕು ಅಧ್ಯಕ್ಷ ಅಣ್ಣಾರಾವ ಬಾಳಿ, ಜಿಲ್ಲಾ ಯುವ ಮೋರ್ಚಾದ ಕಾರ್ಯದರ್ಶಿ ಶರಣು ಜ್ಯೋತಿ, ಗ್ರಾಪಂ ಮಾಜಿ ಅಧ್ಯಕ್ಷ ದೇವೆಂದ್ರ ತಳವಾರ, ಕಾರ್ಯದರ್ಶಿ ಸೋಮಶೇಖರಯ್ಯ ಮಠಪತಿ, ಮಾಳಪ್ಪ ಕೊಳ್ಳಿ, ಅಣವೀರಪ್ಪ ಬಾಳಿ, ಬಸವರಾಜ ಕೆರಳ್ಳಿ, ದತ್ತಾತ್ರೇಯ ಕಾಳೇಕರ್, ಶಾಂತಮಲ್ಲಪ್ಪ ಬಾಳಿ, ಮಲ್ಲು ಇಟಗಿ, ದೇವೆಂದ್ರ ಕರದಳ್ಳಿ, ಸಿದ್ದು ಬಾಳಿ ಇದ್ದರು.
ರಾಮಘಡದ ಆಶ್ರಯ ಕಾಲೋನಿ: ದೇಶದ ಸ್ವಾತಂತ್ರಕ್ಕಾಗಿ ಹೋರಾಡಿ, ಪಕ್ಷದ ಮುಖಂಡರಾಗಿ, ಸಂಸದರಾಗಿ, ವಿದೇಶಾಂಗ ಸಚಿವರು, ಪ್ರಧಾನಿಯಾಗಿ ನಿಸ್ವಾರ್ಥ, ಮೌಲ್ಯಾಧಾರಿತ ರಾಜಕಾರಣಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿಯವರು ದೇಶ ಕಂಡ ಅಪರೂಪದ ರಾಜಕಾರಣಿಯಾಗಿದ್ದಾರೆಂದು ಜಿಲ್ಲಾ ಗ್ರಾಮೀಣ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಶಿಕಲಾ ಟೆಂಗಳಿ ಅಭಿಪ್ರಾಯಪಟ್ಟರು.
ನಗರದ ರಾಮಘಡದ ಆಶ್ರಯ ಕಾಲೋನಿಯಲ್ಲಿ ವಾಜಪೇಯಿಯವರ 89ನೇ ಹುಟ್ಟು ಹಬ್ಬದ ನಿಮಿತ್ತ ಆಯೋಜಿಸಿದ್ದ 90 ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಿಜೆಪಿ ಮುಖಂಡ ಚಂದ್ರಕಾಂತ ಗೊಬ್ಬುಕರ್ ಮತ್ತು ಶಾಂತರೆಡ್ಡಿ ದಂಡಗುಲಕರ್ ಮಾತನಾಡಿದರು. ಪಕ್ಷದ ಹಿರಿಯ ಮುಖಂಡರಾದ ಕನಕಪ್ಪ ದಂಡಗುಲಕರ್, ಬಿಜೆಪಿ ಜಿಲ್ಲಾ ಗ್ರಾಮೀಣ ಯುವ ಅಧ್ಯಕ್ಷ ಪರಶುರಾಮ ನಸಲವಾಯಿ, ಜಿಲ್ಲಾ ಗ್ರಾಮೀಣ ಸ್ಲಂ ಮೋರ್ಚಾ ಅಧ್ಯಕ್ಷ ರಮೇಶ ಹೊಸಮನಿ, ಮಹಿಳಾ ಘಟಕದ ಪಾರ್ವತಿ ಮುಕೇಶ, ನಗರ ಸಭೆ ಸದಸ್ಯರಾದ ಡಾ. ಅಶೋಕ ಜಿಂಗಾಡೆ, ರಮೇಶ ಸರ್ವೋದಯ, ಸಾಬಣ್ಣ ಬೆಳಗುಂಪಿ, ದುರ್ಗಪ್ಪ ಪವಾರ, ತಾಪಂ ಸದಸ್ಯ ನಿಂಗಣ್ಣ ಹುಳಗೋಳ, ಶ್ರೀಧರ ಜೋಶಿ ಇತರರು ಇದ್ದರು.
ಶರಣು ವಸ್ತ್ರದ ಕಾರ್ಯಕ್ರಮ ನಿರೂಪಿಸಿದರು. ನಾಗಣ್ಣ ರಾಂಪುರೆ ಸ್ವಾಗತಿಸಿದರು. ಸುಭಾಷ ಜಾಪೂರ ವಂದಿಸಿದರು.
ಗ್ರಾಮೀಣ ಯುವ ಘಟಕ: ಜಿಲ್ಲಾ ಗ್ರಾಮೀಣ ಬಿಜೆಪಿ ಯುವ ಘಟಕ ಹಾಗೂ ನಗರ ಯುವ ಘಟಕದ ವತಿಯಿಂದ ಮಾಜಿ ಪ್ರಧಾನಿ ಅಟಲ್ ಬಿಹಾರ ವಾಜಪೇಯಿಯವರ ಹುಟ್ಟು ಹಬ್ಬದ ನಿಮಿತ್ತ ಶಾಲೆಯಿಂದ ವಂಚಿತ ರಾಮಘಟ ಆಶ್ರಯ ಕಾಲೋನಿ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ಬುಧವಾರ ವಿತರಿಸಲಾಯಿತು.
 ಗುಲ್ಬರ್ಗ ಗ್ರಾಮೀಣ ಯುವ ಘಟಕದ ಅಧ್ಯಕ್ಷ ಪರಶುರಾಮ ನಸಲವಾಯಿ ಮಾತನಾಡಿ, ಕೇವಲ ವಾಜಪೇಯಿ ಹುಟ್ಟುಹಬ್ಬದ ನಿಮಿತ್ತ ಹಣ್ಣು, ಊಟ ವಿತರಣೆ ಕೇವಲ ಕ್ಷಣ ಹೊತ್ತು ಮಾತ್ರ. ಆದರೆ ಶಾಲಾ ಬಿಟ್ಟ ಮಕ್ಕಳಿಗೆ ಶಾಲೆಗೆ ಕಳುಹಿಸುವ ಪ್ರೇರಣೆಯಿಂದ ಜೀವನ ಪೂರ್ತಿ ಅಕ್ಷರ ಜ್ಞಾನ ಇರುತ್ತದೆ. ಆದ್ದರಿಂದ ಯುವ ಘಟಕದಿಂದ ಸ್ಕೂಲ್ ಚಲೇ ಹಮ್ ಘೋಷಣೆಯೊಂದಿಗೆ ಶಾಲೆಯಿಂದ ವಂಚಿತ ಮಕ್ಕಳಿಗೆ ಉಚಿತ ಕಲಿಕಾ ಸಾಮಗ್ರಿ ವಿತರಿಸಿ ಮಕ್ಕಳಿಗೆ ಶಾಲೆಗೆ ಪ್ರೇರಣೆ ನೀಡುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶಿಕಲಾ ಟೆಂಗಳಿ, ಶಾಂತರೆಡ್ಡಿ ದಂಡಗುಲಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಶಿವರಾಜ ಸೂಲಹಳ್ಳಿ, ಕಚೇರಿ ಕಾರ್ಯದರ್ಶಿ ರಾಜಶೇಖರ ಬೊಳೆವಾಡ, ಅರುಣಕುಮಾರ್ ಬೊರಗಾಂವಕರ್, ಸಂತೋಷ ಪವಾರ, ಮಹೇಶ ಯಲ್ಲೇರಿ, ನಾಗಣ್ಣ ರಾಂಪುರೆ ಇತರರು ಇದ್ದರು.
ಸುಮಾರು 20ಕ್ಕೂ ಹೆಚ್ಚು ಮಕ್ಕಳಿಗೆ ಬ್ಯಾಕ್, ಸ್ಲೇಟ್, ಪೆನ್ನು, ನೋಟ್ ಬುಕ್, ಪೆನ್ಸಿಲ್ ವಿತರಿಸಲಾಯಿತು.
ನೋಟ್‌ಬುಕ್ ವಿತರಣೆ
ಜೇವರ್ಗಿ: ತಾಲೂಕು ಬಿಜೆಪಿ ಯುವ ಮೋರ್ಚಾ ಘಟಕದಿಂದ ಬುಧವಾರ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ನಿಮಿತ್ತ ಸ್ಲಂ ಬಡಾವಣೆಯ ಶಾಲಾ ಮಕ್ಕಳಿಗೆ ನೋಟ್‌ಬುಕ್ ಹಾಗೂ ಪೆನ್‌ಗಳನ್ನು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ವಿತರಿಸಿದರು.
ಕಾರ್ಯಕ್ರಮದಲ್ಲಿ ತಾ. ಬಿಜೆಪಿ ಅಧ್ಯಕ್ಷ ದಂಡಪ್ಪ ಸಾಹು ಕುರಳಗೇರಾ, ಬಿಜೆಪಿ ಅಲ್ಪಸಂಖ್ಯಾತರ ಜಿಲ್ಲಾಧ್ಯಕ್ಷ ಅಲ್ಲಾಪಟೇಲ್ ಹೂಡಾ, ತಾಪಂ ಉಪಾಧ್ಯಕ್ಷೆ ವಿಜಯಲಕ್ಷ್ಮೀ ಆಂದೋಲಾ, ಬಸವರಾಜ ಮಾಲಿಪಾಟೀಲ್, ಹಳೇಪ್ಪಾಚಾರ್ಯ ಜೋಶಿ, ಅಲ್ಲಾಭಕ್ಷ ಬಾಗವಾನ, ದೇವಿಂದ್ರ ಇಜೇರಿ, ಭೀಮರಾವ ಗುಜಗೊಂಡ, ಬೀರಪ್ಪ ಪೂಜಾರಿ, ಮಹಾಂತೇಶ ಹರವಾಳ, ಧರ್ಮಣ್ಣ ಇಟಗಾ, ಸಾಯಿಬಣ್ಣ ದೊಡ್ಮನಿ, ಶ್ರೀನಿವಾಸ ಕುಲಕರ್ಣಿ, ಸಹರಾಬೇಗಂ, ಬಿಜೆಪಿ ಯುವ ಮೋರ್ಚಾ ಘಟಕದ ಅಧ್ಯಕ್ಷ ಸಂತೋಷ ಮಲ್ಲಾಬಾದ್, ಕಾರ್ಯದರ್ಶಿ ಭೀಮು ಮಡಿವಾಳಕರ್ ಉಪಸ್ಥಿತರಿದ್ದರು.  
ವಾಜಪೇಯಿ ಅನುಭವ ದೇಶಕ್ಕೆ ಅಗತ್ಯ
ಚಿತ್ತಾಪುರ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ತತ್ವ ಸಿದ್ಧಾಂತ, ಅಭಿವೃದ್ಧಿ ಪರ ವಿಚಾರಗಳು ಇಂದು ದೇಶಕ್ಕೆ ಬೇಕಾಗಿವೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ತಳವಾರ ಅಭಿಪ್ರಾಯಪಟ್ಟರು.
ತಾಲೂಕು ಬಿಜೆಪಿ ಕಚೇರಿಯಲ್ಲಿ ನಡೆದ ವಾಜಪೇಯಿ ಅವರ 89ನೇ ಜನ್ಮ ದಿನಾಚಾರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ವಾಜಪೇಯಿ ಅವರಂತೆ ಇಂದು ನರೇಂದ್ರ ಮೋದಿಗೆ ಪ್ರಧಾನಿ ಮಾಡುವ ತಾಕತ್ತು ಬಿಜೆಪಿ ಕಾರ್ಯಕರ್ತರಲ್ಲಿ ಹಾಗೂ ಈ ದೇಶದ ಜನರಲ್ಲಿ ಅಡಗಿದೆ ಎಂದರು.
ಮಾಜಿ ಶಾಸಕ ವಾಲ್ಮೀಕಿ ನಾಯಕ ಮಾತನಾಡಿದರು. ಮುಖಂಡರಾದ ಸಂಜೀವ ಮಿಸ್ಕಿನ್, ನೀಲಯ್ಯ ಸ್ವಾಮಿ, ಮಲ್ಲಿಕಾರ್ಜುನ ಪಾಟೀಲ್ ಅಲ್ಲೂರ್, ದಶರಥ ದೊಡ್ಮನಿ, ರಾಮದಾಸ ಚವ್ಹಾಣ, ಸುರೇಶ ಬೆನಕನಳ್ಳಿ, ಗಿರೀಶ ಭಜಂತ್ರಿ, ರವಿ ಹಡಪದ, ಸಿದ್ರಾಮಪ್ಪ ರೇಷ್ಮಿ, ಸತೀಶ ಕಾಂತಾ, ಭೀಮು ಕರದಾಳ, ರವಿ ಕುಲಕರ್ಣಿ, ರಮೇಶ ಪಾಟೀಲ್ ಮಾಡಬೂಳ,  ನಾಗರಾಜ ಹೂಗಾರ, ಶ್ರೀಶೈಲ್ ನಾಟಿಕಾರ್ ಉಪಸ್ಥಿತರಿದ್ದರು.
ವಾಜಪೇಯಿ ಜನ್ಮ ದಿನಾಚಾರಣೆ ನಿಮಿತ್ತ ಮಹಿಳಾ ಮೋರ್ಚಾ ವತಿಯಿಂದ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಯುವ ಮೋರ್ಚಾ ತಾಲೂಕು ಅಧ್ಯಕ್ಷ ತಮ್ಮಣ್ಣ ಡಿಗ್ಗಿ ಸ್ವಾಗತಿಸಿದರು. ಬಾಲಾಜಿ ಬುರುಬುರೆ ನಿರೂಪಿಸಿದರು. ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪನವರ ನಿಧನಕ್ಕೆ ಸಭೆಯಲ್ಲಿ ಶ್ರದ್ಧಾಂಜಲಿ ಇಲ್ಲವೇ ಮೌನ ಆಚರಣೆ ಮಾಡದೇಯಿರುವುದಕ್ಕೆ ಚರ್ಚೆಗೆ ಗ್ರಾಸವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.