ಕಬ್ಬು ಪಡೆಯಲು ಸಕ್ಕರೆ ಕಾರ್ಖಾನೆ ಹಿಂದೇಟು: ಖಂಡನೆ
ಕನ್ನಡಪ್ರಭ ವಾರ್ತೆ ಆಳಂದ ಡಿ. 27
ತಾಲೂಕಿನ ರೈತರ ಕಬ್ಬು ಪಡೆಯಲು ಎನ್ಎಸ್ಎಲ್ ಸಕ್ಕರೆ ಕಾರ್ಖಾನೆ ಹಿಂದೇಟು ಹಾಕುತ್ತಿರುವುದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ರಮೇಶ ಲೋಹಾರ ನೇತೃತ್ವದಲ್ಲಿ ಪ್ರತಿಭಟಿಸಿ ಮುಖಂಡರು ತಹಸೀಲ್ದಾರ್ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.
ಜ.2 ಬರುವುದರೊಳಗಾಗಿ ರಾಜ್ಯ ಸರ್ಕಾರ ಕಾರ್ಖಾನೆ ಆಡಳಿತ ಮಂಡಳಿಯ ವಿರುದ್ಧ ಕ್ರಮ ಕೈಗೊಳ್ಳದೆ ಹೋದಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಸಲಾಗುವುದು ಎಂದು ಮುಖಂಡರು ಎಚ್ಚರಿಸಿದರು.
ಪರಸ್ಥಳಗಳಿಂದ ಆಮದು: ಕಬ್ಬು ಕಟಾವು ಆರಂಭಗೊಂಡು ಒಂದುವರೆ ತಿಂಗಳಾದರೂ ತಾಲೂಕಿನ ರೈತರ ಕಬ್ಬು ಪಡೆಯದೆ ಹೊರಗಿನಿಂದ ತರಿಸಿಕೊಂಡು ಮೋಸ ಮಾಡುತ್ತಿದೆ ಎಂದು ಆರೋಪಿಸಿದರು.
ಸಹಕಾರಿ ರಂಗದಲ್ಲಿದ್ದ ಸಕ್ಕರೆ ಕಾರ್ಖಾನೆ ಗುತ್ತಿಗೆ ಪಡೆದಿರುವ ಎನ್ಎಸ್ಎಲ್ ಶುಗರ್ಸ್ ಕಾರ್ಖಾನೆಯವರು ಸ್ಥಳೀಯ ಕಬ್ಬು ನಿರ್ಲಕ್ಷಿಸಿ, ಅನ್ಯ ತಾಲೂಕು, ಮಹಾರಾಷ್ಟ್ರದಿಂದ ತರಿಸಿಕೊಳ್ಳುತ್ತಿರುವುದರಿಂದ ಕಟಾವಿಗೆ ಬಂದ ಇಲ್ಲಿನ ಕಬ್ಬು ಒಣಗಿ ಭಾರೀ ನಷ್ಟ ಅನುಭವಿಸುವಂತೆ ಮಾಡಿದೆ. ಆದರೂ ಆಡಳಿತ ಮಂಡಳಿ ಸ್ಪಂದಿಸಿಲ್ಲ. ಈ ಕುರಿತು ರಾಜ್ಯ ಸರ್ಕಾರ ಶೀಘ್ರವೇ ಕ್ರಮ ಕೈಗೊಂಡು ಸ್ಥಳೀಯ ರೈತರ ಕಬ್ಬು ನುರಿಸುವಂತೆ ಮಾಡಬೇಕೆಂದು ಒತ್ತಾಯಿಸಿದರು.
2ರಂದು ಪ್ರತಿಭಟನೆ: ಕಬ್ಬು ಕಟಾವಿಗೆ ಕ್ರಮ ಸೇರಿದಂತೆ ನಿಗದಿತ ಅವಧಿಯೊಳಗೆ ಕಬ್ಬಿನ ಬಿಲ್ ಪಾವತಿ, ಸರ್ಕಾರ ಘೋಷಿಸಿದ 2650 ರುಪಾಯಿ ಬೆಂಬಲ ಬೆಲೆ ಹಾಗೂ ಟನ್ ಕಬ್ಬಿಗೆ 2 ಕೆ.ಜಿ. ಸಕ್ಕರೆ ನೀಡಬೇಕು ಎಂಬ ಮತ್ತಿತರ ಬೇಡಿಕೆ ಮುಂದಿಟ್ಟಕೊಂಡು ಜ. 2ರಂದು ಆಳಂದ ಬಸ್ ನಿಲ್ದಾಣ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ತೊಗರಿ ಪ್ರತಿ ಕ್ವಿಂಟಲ್ಗೆ 5500 ರುಪಾಯಿ ಬೆಲೆ ನಿಗದಿಪಡಿಸಬೇಕು. ತಾಲೂಕಿನ ನಿಂಬರಗಾ, ಖಜೂರಿ, ಮಾದನಹಿಪ್ಪರಗಾ ಮತ್ತು ನರೋಣಾ ಹೋಬಳಿ ಕೇಂದ್ರದಲ್ಲಿ ತೊಗರಿ ಖರೀದಿ ಕೇಂದ್ರ ಆರಂಭಿಸಬೇಕು ಹಾಗೂ ತೊಗರಿ ಮಂಡಳಿಗೆ ಮೂನ್ನೂರು ಕೋಟಿ ರುಪಾಯಿ ಬಿಡುಗಡೆಗೊಳಿಸಿ, ಐದು ಲಕ್ಷ ಟನ್ ಕ್ವಿಂಟಲ್ ಮಂಡಳಿಯಿಂದ ಖರೀದಿಯಾಗಬೇಕು ಎಂದು ಮನವಿ ಸಲ್ಲಿಸಿ ಒತ್ತಾಯಿಸಿದರು.
ಭರವಸೆ: ಮನವಿ ಸ್ವೀಕರಿಸಿದ ತಹಸೀಲ್ದಾರರು ಜಿಲ್ಲಾಧಿಕಾರಿಗಳ ಮತ್ತು ಸರ್ಕಾರಕ್ಕೆ ಮನವಿ ಕಳುಹಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯೆ ಪೂಜಾ ರಮೇಶ ಅವರ ನೇತೃತ್ವದಲ್ಲಿ ಪಕ್ಷದ ಅಧ್ಯಕ್ಷ ರಮೇಶ ಲೋಹಾರ, ರೈತ ಮೋರ್ಚಾದ ಅಧ್ಯಕ್ಷ ಅಣ್ಣಪ್ಪ ತಳಕೇರಿ, ಮುಖಂಡರು, ಕಬ್ಬು ಬೆಳೆಗಾರರು ಸೇರಿ ತಹಸೀಲ್ದಾರ್ ಪರಮೇಶ್ವರ ಕೆ. ಸ್ವಾಮಿ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಪಕ್ಷದ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಬಿರಾದಾರ, ರೈತ ಆಧಿನಾಥ ಹೀರಾ, ದಯಾನಂದ ಶೇರಿಕಾರ, ಮಹಾಂತಪ್ಪ ಮುನ್ನಹಳ್ಳಿ, ಶಿವುಕುಮಾರ್ ಸಂಗೊಳಗಿ, ನೀಲಕಂಠರಾವ ದಿಕ್ಸಂಗಿ, ಮೂತಿರಾಮ ಪವಾರ, ಕಾಶಿನಾಥ ಸುತಾರ, ಖಜೂರಿ ಗ್ರಾಪಂ ಅಧ್ಯಕ್ಷ ವಸಂತ ಭದ್ರೆ, ಭೀಮಶೇನ್ ಕೆರೆ ಅಂಬಲಗಾ, ಧರೆಪ್ಪ ಕುಂಬಾರ ಪಡಸಾವಳಿ, ಬಸವಂತರಾಯ ಮುಲಗೆ, ಗುರುಲಿಂಗಪ್ಪ ಪೊಲೀಸ್ ಪಾಟೀಲ್, ಶಿವಶರಣಪ್ಪ ಬುಜುರ್ಕೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

