ಗುಲ್ಬರ್ಗಾ

ಸಿರವಾಳದಲ್ಲಿ ರಾಷ್ಟ್ರಕೂಟರ ಕನ್ನಡ ಶಿಲಾಶಾಸನ

Published On :

ಕನ್ನಡಪ್ರಭ ವಾರ್ತೆ  ಶಹಾಪುರ  ಡಿ.30
ಸಂಶೋಧಕ ಹಾಗೂ ಕನ್ನಡ ಸಂಸ್ಕೃತಿ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಡಾ. ಎಂ.ಎಸ್. ಸಿರವಾಳ  ಇತ್ತೀಚೆಗೆ ಸಂಶೋಧನಾರ್ಥವಾಗಿ ಕೈಕೊಂಡ ಕ್ಷೇತ್ರಕಾರ್ಯದಲ್ಲಿ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಿರವಾಳ ಗ್ರಾಮದಲ್ಲಿ ರಾಷ್ಟ್ರಕೂಟರ ಕಾಲಕ್ಕೆ ಸೇರಿದ ಸುಮಾರು ಒಂದು ಸಾವಿರ ವರ್ಷಗಳಷ್ಟು ಪುರಾತನವಾದ ಕನ್ನಡ ಶಿಲಾಶಾಸನವನ್ನು ಶೋಧಿಸಿದ್ದು, ಅದರ ಆಳವಾದ ಅಧ್ಯಯನ ನಡೆಸಿ ಸಂಶೋಧಕರು ವಿವರಗಳನ್ನು ಈ ರೀತಿಯಾಗಿ ನೀಡಿದ್ದಾರೆ.
ಶಾಸನ ಶೋಧ ಮಾಡಿದ ಸ್ಥಳ ನಿವೇಶನ: ಪುರಾತನ ಕಾಲದಲ್ಲಿ ಶ್ರೀಮದ್ ದಕ್ಷಿಣ ವಾರಣಾಸಿ ಧರ್ಮದ ಮನೆಯ ಆದಿಪಟ್ಟಣ ಎಂಬ ಹಿರಿಮೆಗೆ ಪಾತ್ರವಾಗಿದ್ದ ಅಗ್ರಹಾರ ಸಿರವಾಳದಲ್ಲಿರುವ ರಾಷ್ಟ್ರಕೂಟರ ಕಾಲದ ಸುಂದರ ಸ್ಮಾರಕ ನನ್ನಯ್ಯನ ದೇಗುಲದ ದಕ್ಷಿಣ ದಿಕ್ಕಿನ ಗೋಡೆ ಭಿತ್ತಿಯ ಕೂಡ್ಯಛ್ಯಾಧ್ಯ ಸ್ತಂಭದ ಫಲಕ ಪಟ್ಟಿಕೆಯಲ್ಲಿ ಸಂಶೋಧಕರು ಈ ಶಾಸನವನ್ನು ಶೋಧಿಸಿದ್ದಾರೆ.
ಶಾಸನದ ಸ್ವರೂಪ: ಸಿರವಾಳದ ನನ್ನಯ್ಯ ದೇಗುಲದ ಗೋಡೆ ಭಿತ್ತಿಯ ಕೂಡ್ಯಛ್ಯಾಧ್ಯ ಸ್ತಂಭದ ಸುಣ್ಣದ ಕಲ್ಲಿನ ಎರಡು ಇಂಚು ಎತ್ತರ ಮತ್ತು ಒಂದುವರೆ ಅಡಿ ಅಗಲದ ಫಲಕ ಪಟ್ಟಿಕೆಯಲ್ಲಿ ಈ ಕನ್ನಡ ಶಾಸನ ಕೆತ್ತಲಾಗಿದೆ.
ಶಾಸನದ ಲಿಪಿ ಮತ್ತು ಭಾಷೆ: ಈ ಶಾಸನದಲ್ಲಿ ಬಳಸಿರುವ ಲಿಪಿ ಮತ್ತು ಭಾಷೆಗಳೆರಡೂ ಹಳೆಗನ್ನಡದವಾಗಿವೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಶಾಸನದ ಕಾಲ: ಪ್ರಸ್ತುತ ಶೋಧಿಸಿರುವ ಶಾಸನವು ಅತ್ಯಂತ ಚಿಕ್ಕದಾಗಿರುವುದರಿಂದ ತೇದಿಯನ್ನು ದಾಖಲಿಸಿಲ್ಲ. ಹೀಗಾಗಿ ಖಚಿತವಾಗಿ ಕಾಲ ನಿರ್ಧಾರ ಅಸಾದ್ಯವಾಗಿದ್ದು. ಇಲ್ಲಿ ಬಳಕೆಯಾಗಿರುವ ಲಿಪಿಗಳು ರಾಷ್ಟ್ರಕೂಟರ ಸಾಮ್ರಾಟ ಮೂರನೇ ಕೃಷ್ಣನು ಮಧ್ಯಪ್ರದೇಶದ ಜೂರದಲ್ಲಿ ಕ್ರಿ.ಶ. 950ರಲ್ಲಿ ಹಾಕಿಸಿರುವ ಕನ್ನಡ ಶಾಸನದ ಲಿಪಿಗಳನ್ನೇ ಹೋಲುತ್ತಿರುವುದರಿಂದ ಹಾಗೂ ಶಾಸನ ದೂರಕಿರುವ ಸ್ಮಾರಕ ರಾಷ್ಟ್ರಕೂಟರ ಕಾಲಕ್ಕೆ ಸೇರಿರುವುದರಿಂದ ಹಾಗೂ ಈಗಾಗಲೇ ಇದೇ ಸಿರವಾಳದ ಮತ್ತೊಂದು ಸ್ಮಾರಕದ ಬಳಿ ರಾಷ್ಟ್ರಕೂಟರ ಸಾಮ್ರಾಟ 3ನೇ ಕೃಷ್ಣನ ಸಾಮಂತರು ಕ್ರಿ.ಶ 939ರಲ್ಲಿ ಹಾಕಿಸಿರುವ ಹಳೆಗನ್ನಡ ಶಾಸನ ಲಭಿಸಿರುವುದರಿಂದ ಸದರಿ ಶಾಸನವು ಸಹ ಕ್ರಿ.ಶ. 950ರ ಕಾಲ ಘಟ್ಟಕ್ಕೆ ಸೇರಿದ್ದಾಗಿದೆ ಎಂದು ಸಂಶೋಧಕ ಡಾ. ಎಂ.ಎಸ್. ಸಿರವಾಳ ಈ ಶಾಸನದ ಕಾಲವನ್ನು ನಿರ್ಣಯ ಮಾಡಿದ್ದಾರೆ.
ಶಾಸನದ ಪಠ್ಯ: ಭಾರತದ ಪ್ರಮುಖ ಪುರಾತನ ಲಿಪಿಗಳಲ್ಲಿ ಒಂದಾಗಿರುವ ಕನ್ನಡ ಲಿಪಿಯಲ್ಲಿ “Oæ}æàÞMdM ನಾಮಿಂ OÚyM’ ಎಂದು ಕೇವಲ ಏಳು ಅಕ್ಷರಗಳಲ್ಲಿ ಈಗ ಶೋಧಿಸಿರುವ ಶಾಸನವನ್ನು ಅತ್ಯಂತ ಸುಂದರವಾಗಿ ಕೊರೆಯಲಾಗಿದೆ.
ಶಾಸನದ ಅರ್ಥ: ಈ ಶಿಲಾಶಾಸನದಲ್ಲಿ ಕನ್ನಡ ಲಿಪಿಯಲ್ಲಿ ಬರೆದಿರುವ ಕೆತೋಂಜಂ ನಾಮಿಂ ಕಣಂ ಎಂಬುದನ್ನು ಹತ್ತನೇ ಶತಮಾನದ ಕನ್ನಡ ಭಾಷೆಯಲ್ಲಿ “Oæ~¡¥Ú ಅಥವಾ ಕಟೆದ ಶಿಲ್ಪಿ «ÛÉßOÚy|’ ಎಂಬ ಅರ್ಥವನ್ನು ಕೊಡುತ್ತದೆ ಎಂದು ಶಾಸನ ಸಂಶೋಧಕ ಡಾ. ಎಂ.ಏಸ್. ಸಿರವಾಳರು ಅರ್ಥೈಸಿದ್ದಾರೆ.
ಶಾಸನದ ಮಹತ್ವ: ಸ್ವರೂಪ ಮತ್ತು ಗಾತ್ರದ ದೃಷ್ಟಿಯಿಂದ ಈಗ ಶೋಧಿತವಾಗಿರುವ ಶಾಸನ ಸಣ್ಣದಾಗಿರಬಹುದು. ಆದರೆ ಈ ಅತಿ ಚಿಕ್ಕ ಶಾಸನವೇ ಕಟ್ಟಿಕೂಡುವ ಕನ್ನಡನಾಡಿನ ಸ್ಮಾರಕಗಳ ಅದರಲ್ಲೂ ರಾಷ್ಟ್ರಕೂಟರ ಸ್ಮಾರಕಗಳನ್ನು ಅತ್ಯಂತ ಸುಂದರವಾಗಿ ರೂಪಿಸಿದ ಮಾಹಾನ್ ಶಿಲ್ಪಿಯೋರ್ವನ ಮಾಹಿತಿ ಅತಿ ಮಹತ್ವದ್ದು ಎಂದು ಶಾಸನ ಶೋಧಿಸಿ ಅಧ್ಯಯನ ಮಾಡಿದ ಡಾ. ಎಂ.ಎಸ್. ಸಿರವಾಳ ಅಭಿಪ್ರಾಯ ಪಡುತ್ತಾರೆ. ಅತಿ ಹೆಚ್ಚು ಶಾಸನ ಹೊಂದಿರುವ ಊರು ಸಿರವಾಳ ಎಂಬ ಮನ್ನಣೆಗೆ ಈಗಾಗಲೇ ಪಾತ್ರವಾಗಿರುವ ಈ ಊರಿನಲ್ಲಿ ಈ ವರೆಗೆ ಶೋಧಿಸಿ ಪ್ರಕಟಿಸಿರುವ ರಾಷ್ಟ್ರಕೂಟರ ಶಾಸನಗಳ ಸಂಖ್ಯೆ ಮೂರರಿಂದ ನಾಲ್ಕಕ್ಕೆ ಹಾಗೂ ಒಟ್ಟು ಶಾಸನಗಳ ಸಂಖ್ಯೆ ಎಂಟಕ್ಕೆ ಹೆಚ್ಚುವ ಮೂಲಕ ಸಗರನಾಡಿನ ಸಾಂಸ್ಕೃತಿಕ ಇತಿಹಾಸವನ್ನು ಇನ್ನಷ್ಟು ಗಟ್ಟಿಯಾಗಿ ರಚಿಸಲು ಸಹಾಯಕವಾಗುತ್ತವೆ.
  ಅತಿಸೂಕ್ಷ್ಮ ಮತ್ತು ಸುಂದರ ಶಿಲ್ಪಕೆತ್ತನೆಯ ನನ್ನಯ್ಯ- ನಾದಯ್ಯರ ದೇಗುಲ- ಸಾಂಸ್ಕೃತಿಕ ಶ್ರೀಮಂತಿಕೆಯ ಸಾವಿರಾರು ಪಳಿಯುಳಿಕೆಗಳ ಊರು ಸಿರವಾಳದಲ್ಲಿ ನೋಡುಗರಿಗೆ ಹಾಗೂ ಕಲಾ ಸಂಶೋಧಕರಿಗೆ ಅತಿಹೆಚ್ಚು ಆಕರ್ಷಣೀಯ. ಸಂಶೋಧಕ ತನ್ನ ಒಳಗಣ್ಣನ್ನು ತೆರೆದುನೋಡಿದಾಗ ನನ್ನಯ್ಯ- ನಾದಯ್ಯರು ತಮ್ಮ ಜೀವನದ ಕೊನೆಯ ಘಟ್ಟದಲ್ಲಿ ಅಂದಿನ ಕಾಲಕ್ಕಾಗಲೇ ಶ್ರೀಮಂತ ಧಾರ್ಮಿಕ ಕ್ಷೇತ್ರವಾಗಿದ್ದ ಸಿದ್ದರೇವಣ ದೇವನ ಸಿರಿವೂಳಲ (ಸಿರವಾಳ)ಕ್ಕೆ ಬಂದು ಇಲ್ಲಿಯೇ ಸಮಾಧಿಯಾಗಿರಬಹುದು. ನಂತರದಲ್ಲಿ ಈ ಮೊದಲೇ ಇದ್ದ ಈ ಎರಡು ಶೈವದೇವಾಲಯಗಳನ್ನು ಗುರುಶಿಷ್ಯರಾದ ನನ್ನಯ್ಯ- ನಾದಯ್ಯ ಹೆಸರಿನಲ್ಲಿ ಪೂಜಿಸುತ್ತಿರಬಹುದು. ಯಾಕೆಂದರೆ ಈ ಎರಡೂ ದೇಗುಲಗಳಲ್ಲಿ ಪ್ರತಿಷ್ಠಾಪಿಸಲಾಗಿರುವ ಬೃಹತ್ ಗಾತ್ರದ ಶಿವಲಿಂಗಗಳಿಗೆ ಉನ್ನತವಾದ ಯೋನಿ(ಪಾಣಿ) ಪೀಠಗಳೇ ಇಲ್ಲ. ಈ ಹಿನ್ನಲೆಯಲ್ಲಿ ಇನ್ನು ಹೆಚ್ಚಿನ ಸಂಶೋಧನೆಯ ಅಗತ್ಯೆವಿದೆಯೆಂದು ಸಂಶೋಧಕ ಡಾ. ಎಂ.ಎಸ್. ಸಿರವಾಳ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.