ಗುಲ್ಬರ್ಗಾ

ಇಂದು ಎಳ್ಳಮಾವಾಸ್ಯೆ: ಎಲ್ಲೆಲ್ಲೂ ಚರಗದ ಸಂಭ್ರಮ

Published On :

ಚಿತ್ತಾಪುರ: ರೈತರ ಹಬ್ಬ ಎಳ್ಳಮಾವಾಸ್ಯೆ ಪ್ರಯುಕ್ತ ಪಟ್ಟಣದಲ್ಲಿ ಮಂಗಳವಾರ ಪಟ್ಟಣದ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಬಂದ ರೈತರು ತರಕಾರಿ ಸೇರಿದಂತೆ ವಿವಿಧ ವಸ್ತುಗಳ ಖರೀದಿಯಲ್ಲಿ ತೊಡಗಿದರು.
ರೈತರ ವಿಶೇಷ ಹಬ್ಬ ಇದಾಗಿದ್ದು, ಈ ಭಾಗದ ಗ್ರಾಮೀಣ ಪ್ರದೇಶದಲ್ಲಿ ರೈತರು ಸೇರಿದಂತೆ ಜನಸಾಮಾನ್ಯರೂ ಕೂಡ ಈ ಅಮಾವಾಸ್ಯೆಯನ್ನು ಎಲ್ಲಿಲ್ಲದ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ.
ಮುಂಗಾರು ಪಸಲು ಮನೆತುಂಬಿ, ಹಿಂಗಾರು ಪಸಲು ಮನತುಂಬುವ ಈ ಸಮಯದಲ್ಲಿ ರೈತರು ಸಿಹಿಕಹಿಯನ್ನು ಸಮನಾಗಿ ಅನುಭವಿಸುತ್ತ ಭೂತಾಯಿಗೆ ಅನ್ನದ ನೈವೇದ್ಯೆ ನೀಡುವ ಸಂಪ್ರದಾಯದಲ್ಲಿರುವುದೇ ಚರಗ ಚೆಲ್ಲುವುದು.
ಇಂದಿನ ಆಧುನಿಕ ಯುಗದಲ್ಲೂ ಗ್ರಾಮೀಣ ಪ್ರದೇಶದ ರೈತರು ಕುಟುಂಬ ಸಮೇತ ಹೊಲಗಳಿಗೆ ಚರಗ ಚೆಲ್ಲಲು ಹೊಗುವುದು ಭೂ ತಾಯಿಯ ಅಡಿಗಲ್ಲೆಂಬುದೆ ಸರಿ. ಕೆಲ ಭಾಗದಲ್ಲಿ ಎತ್ತಿನ ಬಂಡಿಗಳು ಕಡಿಮೆಯಾಗುತ್ತಿದ್ದು, ರೈತರು ತಮ್ಮ ವಾಹನಗಳಲ್ಲಿ ಹೊಲಗಳಿಗೆ ಹೋಗುತ್ತಿರುವುದು ಸಾಮಾನ್ಯವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.