ಗುಲ್ಬರ್ಗಾ

ಮಕ್ಕಳ ಉತ್ತಮ ಆರೋಗ್ಯಕ್ಕೆ ಪೌಷ್ಟಿಕ ಆಹಾರ ಅವಶ್ಯ

Published On :

ಸುರಪುರ: ಆರೋಗ್ಯವಂತ ಶಿಶು ಸಮಾಜ ಸಂಪತ್ತಿದ್ದಂತೆ. ಬಾಲ್ಯದಲ್ಲಿಯೇ ಮಕ್ಕಳನ್ನು ಜೋಪಾನ ಮಾಡಿ ಸದೃಢವಾಗಿ ಬೆಳೆಸುವುದು ಪ್ರತಿ ತಂದೆ- ತಾಯಿಗಳ ಜವಾಬ್ದಾರಿ. ಮಗು ಉತ್ತಮ ಆರೋಗ್ಯದೊಂದಿಗೆ ಬೆಳೆಯಬೇಕಾದರೆ ಪೌಷ್ಟಿಕ ಆಹಾರ ನೀಡುವುದು ಅಷ್ಟೇ ಮುಖ್ಯ ಎಂದು ಹಸನಾಪುರ ಅಂಗನವಾಡಿ ಮೇಲ್ವಿಚಾರಕಿ ಸತ್ಯವ್ವ ಹೇಳಿದರು.
  ತಾಲೂಕಿನ ಬಿಜಾಸ್ಪುರ ಮತ್ತು ಕೃಷ್ಣಾಪುರ ಅಂಗನವಾಡಿ ಕೇಂದ್ರಗಳಲ್ಲಿ ಶನಿವಾರ ಅಕ್ಷಯ ಪಾತ್ರೆ, ಮಕ್ಕಳ ಹುಟ್ಟುಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡುವುದು ನಮ್ಮ ಕರ್ತವ್ಯ. ಪೌಷ್ಟಿಕಾಂಶ ಪದಾರ್ಥಗಳನ್ನು ಸೇವಿಸದಿದ್ದರೆ, ಶರೀರವು ಆರೋಗ್ಯಯುತವಾಗಿ ಬೆಳೆವಣಿಗೆ ಆಗುವುದಿಲ್ಲ. ಪೌಷ್ಟಿಕ ಆಹಾರದ ಕೊರತೆಯಿಂದ ಹಲವು ರೋಗಗಳು ಆಕ್ರಮಿಸಲು ಕಾರಣವಾಗುತ್ತದೆ. ಪೋಷಕಾಂಶಕಗಳ ಕೊರತೆಯಿರುವ ಮಗುವಿನಲ್ಲಿ ಅಂಗಹೀನತೆ ಉಂಟು ಮಾಡುತ್ತದೆ ಎಂದರು.
ಪೌಷ್ಟಿಕ ಆಹಾರ ತಪ್ಪದೆ ಕೊಡಿ: ಮಗು ಹುಟ್ಟಿದಾಗ ಕಡಿಮೆ ತೂಕ ಹೊಂದಿರುತ್ತದೆ. ಮಗು ಬೆಳೆವಣಿಗೆಯಾದಂತೆ ವಯಸ್ಸಿಗನುಗುಣವಾಗಿ ತೂಕ ಹೆಚ್ಚಾಗುತ್ತದೆ. ಪೋಷಕಾಂಶ ಎದರಿಸುವ ಮಗುವಿನ ಮಾಂಸಖಂಡಗಳ ಬಲಹೀನವಾಗಿ ಮಗು ತೆಳ್ಳಗಾಗುತ್ತದೆ. ಒಳ್ಳೆಯ ಆರೋಗ್ಯವಂತರ ಮಗುವನ್ನಾಗಿ ಬೆಳೆಸಲು ಇಲಾಖೆ ನೀಡುವ ಶಕ್ತಿಯುತವಾದ ಪೌಷ್ಟಿಕ ಆಹಾರ ತಪ್ಪದೇ ಕೊಡಬೇಕೆಂದು ಹೇಳಿದರು.
ಅರಕೇರಾ(ಕೆ) ಗ್ರಾಪಂ ಅಧ್ಯಕ್ಷೆ ಲಕ್ಷ್ಮಿಬಾಯಿ ಕಾರ್ಯಕ್ರಮ ಉದ್ಘಾಟಿಸಿದರು. ಅಂಗನವಾಡಿ ಕಾರ್ಯಕರ್ತೆ ಸುನೀತಾ ತೇಲ್ಕರ್ ಸ್ವಾಗತಿಸಿದರು. ಮಾಲಾಶ್ರೀ ಹಸನಾಪುರ ಕಾರ್ಯಕ್ರಮ ನಿರೂಪಿಸಿದರು. ಶಾಂತಾಬಾಯಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.